ಶರ್ಮೀಳಾರ ಕಹಿ ವರ್ತನೆಯನ್ನು ರೀವಿಲ್ ಮಾಡಿದ ಸೈಫ್ ಎಕ್ಸ್ ವೈಫ್ ಅಮೃತಾ
ಸೈಫ್ ಅಲಿ ಖಾನ್ ಎಕ್ಸ್ ವೈಫ್ ಅಮೃತಾ ಸಿಂಗ್‌ನ ಹಳೆಯ ಸಂದರ್ಶನದ ತುಣುಕು ವೈರಲ್ ಆಗುತ್ತಿದೆ, ಇದರಲ್ಲಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಮಾತಾನಾಡಿದ್ದಾರೆ. ಅತ್ತೆ ಶರ್ಮೀಳಾರ ಕಹಿ ವರ್ತನೆಯನ್ನು ರೀವಿಲ್ ಮಾಡಿದ್ದಾರೆ ಅಮೃತಾ. ಪ್ರಸ್ತುತ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ ನಟಿ.
ಸೈಫ್ ಮತ್ತು ಅಮೃತಾಳ ಮ್ಯಾರೀಡ್ ಲೈಫ್ ಪ್ರಾರಂಭ ಸಿಹಿಯಾಗಿರಲಿಲ್ಲವಂತೆ. ಇಬ್ಬರೂ ಬೇರ್ಪಟ್ಟಾಗ, ಅಂತಹ ವಿಷಯಗಳು ಒಂದೊಂದಾಗಿ ಮಂದೆ ಬರಲು ಪ್ರಾರಂಭಿಸಿದಾಗ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.
ಅತ್ತೆ ಶರ್ಮಿಳಾ ಟ್ಯಾಗೋರ್ ಕಹಿಯಾಗಿ ಟ್ರೀಟ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದರು ಅಮೃತಾ.
ಸೈಫ್ ಅಲಿ ಖಾನ್ ತನಗಿಂತ 13 ವರ್ಷ ಹಿರಿಯ ಅಮೃತ ಸಿಂಗ್ ಅವರನ್ನು 1991ರಲ್ಲಿ ರಹಸ್ಯವಾಗಿ ವಿವಾಹವಾದರು, ಏಕೆಂದರೆ ಕುಟುಂಬವು ಈ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು.
ಅಮೃತಾಗೆ ಶರ್ಮಿಳಾ ಇಷ್ಟವಾಗಲಿಲ್ಲ, ವಯಸ್ಸಿನಲ್ಲಿ ದೊಡ್ಡವಳು ಹಾಗೂ ಸೈಫ್ ಸಂಬಂಧ ಮತ್ತು ವಿವಾಹದ ಬಗ್ಗೆ ಕುಟುಂಬಕ್ಕೆ ಮೊದಲೇ ತಿಳಿಸಲಿಲ್ಲ ಎಂದು ಅಮೃತಾಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ಆಕೆಗೆ ಎಂದಿಗೂ ಸಾಧ್ಯವಾಗಲಿಲ್ಲ.
ಅತ್ತೆ ಶರ್ಮಿಳಾಳೊಂದಿಗೆ ಒಂದು ಕೋಣೆಯಲ್ಲಿ ಏಕಾಂಗಿಯಾಗಿ ಬಿಡಬೇಡಿ ಎಂದು ಯಾವಾಗಲೂ ಸೈಫ್‌ಗೆ ಹೇಳುತ್ತಿದ್ದೆ, ಏಕೆಂದರೆ ಆ ಅನುಭವವು ತೀವ್ರ ಒತ್ತಡವನ್ನು ನೀಡಿತು ಎಂದು ಅಮೃತಾ ಸಂದರ್ಶನದಲ್ಲಿ ಹೇಳಿದರು.
ಮುಸ್ಲಿಂ ಪದ್ಧತಿಯಲ್ಲಿ ವಿವಾಹವಾದ ಈ ಇಬ್ಬರ ಲವ್‌ಸ್ಟೋರಿ ಸಖತ್ ಫಿಲ್ಮಿಯಾಗಿತ್ತು.
ಸೈಫ್ 'ಬೆಕುದಿ' ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ನೀಡಿದಾಗ ಬಾಲಿವುಡ್‌ನಲ್ಲಿ ಆಗಲೇ ಹೆಸರು ಮಾಡಿದ ಅಮೃತಾಳನ್ನು ಫಸ್ಟ್ ಬೇಟಿಯಾಗಿದ್ದು.
ಸಿನಿಮಾದ ನಿರ್ದೇಶಕ ರಾಹುಲ್ ರಾವೈಲ್ ಅಮೃತಾ ಸಿಂಗ್ ಆಪ್ತರಾಗಿದ್ದರು. ಆದ್ದರಿಂದ ಅಮೃತಾ ಚಿತ್ರದ ಸ್ಟಾರ್‌ಕಾಸ್ಟ್‌ನೊಂದಿಗೆ ಫೋಟೋಶೂಟ್ ಮಾಡಬೇಕೆಂದು ಅವರು ಬಯಸಿದ್ದರು.
ಈ ಫೋಟೋಶೂಟ್ ನಂತರ, ಸೈಫ್ ಹೃದಯದಲ್ಲಿ ಅಮೃತಾ ವಿಶೇಷ ಸ್ಥಾನ ಪಡೆದರು. ಅಮೃತಳನ್ನು ಮತ್ತೆ ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದ ಸೈಫ್, ಫೋನ್ ಮಾಡಿ ಡಿನ್ನರ್‌ಗೆ ಇನ್ವೈಟ್ ಮಾಡಿದ್ದರಂತೆ. ಆಫರ್ ಕೇಳಿ ಸರ್‌ಪ್ರೈಸ್ ಆಗಿದ್ದ ಅಮೃತಾ ಸೈಫ್ ಜೊತೆ ಹೊರಗೆ ಹೋಗಲು ನಿರಾಕರಿಸಿದ್ದರು. ಸ್ವಂತ ಮನೆಗೇ ಊಟಕ್ಕೆ ಆಹ್ವಾನಿಸಿದರು.
ಈ ಸಮಯದಲ್ಲಿ, ಇಬ್ಬರೂ ತಮ್ಮ ಜೀವನದ ಅನೇಕ ವಿಷಯಗಳನ್ನು ಹಂಚಿಕೊಂಡರು. ಈ ಭೇಟಿಯ ನಂತರ ಸೈಫ್ ಅಮೃತಾಳ ಮನೆಯಲ್ಲಿ 2 ದಿನಗಳ ಕಾಲವಿದ್ದರಂತೆ. ಇದರ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ವಿಶೇಷವೆಂದರೆ ಮದುವೆಯಾಗಲು ನಿರ್ಧರಿಸುವಾಗ,ಅಮೃತಾ ತನ್ನ ವೃತ್ತಿಜೀವನದ ಬಗ್ಗೆ ಸ್ವಲ್ಪವೂ ಯೋಚಿಸಲಿಲ್ಲ. ಆದರೆ ಮದುವೆಯಾದ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರೆಯಾದರು.
ಅಮೃತಾ ಮಕ್ಕಳನ್ನು ಬೆಳೆಸುವಲ್ಲಿ ತನ್ನ ಪೂರ್ಣ ಸಮಯವನ್ನು ಕಳೆದರು ಮತ್ತು ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಮಕ್ಕಳ ಆರೈಕೆಗಾಗಿ ಅಮೃತಾ ತನ್ನ ಕೆರಿಯರ್‌ಯನ್ನು ಪಣಕ್ಕಿಟ್ಟರು.