ರೇಖಾನೂ ಅಲ್ಲ, ಜಯಾ ಬಚ್ಚನ್ ಅಲ್ವೇ ಅಲ್ಲ: ಅಮಿತಾಭ್ ನೆಚ್ಚಿನ ನಟಿ ಇವರು!
ಅಮಿತಾಭ್ ಬಚ್ಚನ್ ಅವರು ತಮ್ಮ ಅಚ್ಚುಮೆಚ್ಚಿನ ನಟಿಯೊಂದಿಗೆ ಒಂದೇ ಒಂದು ಸಿನಿಮಾದಲ್ಲಿಯೂ ನಟಿಸದಿರುವ ಬಗ್ಗೆ 'ಕೌನ್ ಬನೇಗಾ ಕರೋಡ್‌ಪತಿ 16'ರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಅಮಿತಾಭ್ ಅವರ ನೆಚ್ಚಿನ ನಟಿ ಯಾರು ಇಲ್ಲಿದೆ ಮಾಹಿತಿ.
ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ತಮ್ಮ ವೃತ್ತಿಜೀವನದ ಹಾಗೂ ವೈಯಕ್ತಿಕ ಘಟನೆಗಳ ಕೆಲ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ ಕೆಲವೊಮ್ಮೆ ಅದು ಖುಷಿಯ ವಿಚಾರವೂ ಆಗಿರಬಹುದು. ಅಥವಾ ಕೆಲವೊಮ್ಮೆ ಬೇಸರದ ವಿಚಾರವೂ ಇರಬಹುದು. ಅವರು ತಮ್ಮ ಇತ್ತೀಚಿನ 'ಕೌನ್ ಬನೇಗಾ ಕರೋಡ್‌ಪತಿ 16' ಕಾರ್ಯಕ್ರಮದಲ್ಲಿ, ತಮ್ಮ ನೆಚ್ಚಿನ ನಟಿ ಹಾಗೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಗದೇ ಇರುವ ಬಗ್ಗೆ ಹೇಳಿಕೊಂಡಿದ್ದಾರೆ.
ಅಂದಹಾಗೆ ಪ್ರಸಿದ್ಧ ನಟಿ ಮೀನಾ ಕುಮಾರಿ ಅಮಿತಾಭ್ ಬಚ್ಚನ್ ಅವರ ನೆಚ್ಚಿನ ನಟಿಯಂತೆ ಅವರೊಂದಿಗೆ ಕೆಲಸ ಮಾಡಲು ಅಮಿತಾಭ್‌ಗೆ ಎಂದಿಗೂ ಅವಕಾಶ ಸಿಕ್ಕಿಲ್ಲ ಕ್ಲಾಸಿಕ್ ಚಿತ್ರ 'ಸಾಹಿಬ್ ಬೀಬಿ ಔರ್ ಗುಲಾಮ್' ನಲ್ಲಿ ಮೀನಾ ಕುಮಾರಿ ಅವರ ಪಾತ್ರ, ವಿಶೇಷವಾಗಿ "ನಾ ಜಾವೋ ಸೈಯಾನ್" ಎಂಬ ವಿಷಾದ ಗೀತೆಯಲ್ಲಿ ಅವರ ಅಭಿನಯದ ಬಗ್ಗೆ ಅಮಿತಾಬ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮೀನಾ ಕುಮಾರಿ ಅವರನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಬಚ್ಚನ್ ಮತ್ತೊಬ್ಬ ಪ್ರೀತಿಯ ನಟಿ ವಹೀದಾ ರೆಹಮಾನ್ ಅವರನ್ನು ಸಹ ಹೊಗಳಿದ್ದಾರೆ ಈ ಶೋದಲ್ಲಿ
ಅಮಿತಾಬ್ ಬಚ್ಚನ್ ಈ ಐಕಾನಿಕ್ ನಟಿಯರ ಪರಂಪರೆಯನ್ನು ಗೌರವಿಸುವುದಲ್ಲದೆ, ಭಾರತೀಯ ಸಿನಿಮಾದ ಶ್ರೀಮಂತ ಕಥೆಯನ್ನು ಆಗಾಗ ಈ ತಲೆಮಾರಿನವರಿಗೆ ಹೇಳುತ್ತಿರುತ್ತಾರೆ.