ವಯಸ್ಸಾಯ್ತು, ಡಯಲಾಗ್ ನೆನಪಾಗಲ್ಲ ಎಂದ ಬಿಗ್‌ಬಿ
- ಡಯಲಾಗ್‌ಗಳು ನೆನಪಿನಲ್ಲಿ ಉಳಿಯುತ್ತಿಲ್ಲ, ಹಲವು ಬಾರಿ ಪ್ರಾಕ್ಟೀಸ್
- ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು
ನಟ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಿಗಾಗಿ ಪದೇ ಪದೇ ತಮ್ಮ ಡಯಲಾಗ್ ಏಕೆ ಪೂರ್ವಾಭ್ಯಾಸ ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಚೆಹ್ರೆ ನಿರ್ಮಾಪಕ ಆನಂದ್ ಪಂಡಿತ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಅಮಿತಾಬ್ ಮತ್ತು ಇಮ್ರಾನ್ ಹಶ್ಮಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ತಯಾರಿಸುವಲ್ಲಿ ಪ್ರೋಟೋಕಾಲ್ ಮತ್ತು ಪಠ್ಯಕ್ರಮ ಇದು ಎಂದು ನಿರ್ದೇಶಕರು ಮತ್ತು ನಿರ್ಮಾಪಕರು ನಿರ್ಧರಿಸಿದರೆ ನಾವು ಅನುಸರಿಸಬೇಕು. ನನ್ನ ಮನಸ್ಸಿನಲ್ಲಿ ಎಲ್ಲೋ ಸಾಲುಗಳು ಉಳಿಯುವಂತೆ ನಾನು ಪೂರ್ವಾಭ್ಯಾಸ ಮಾಡುತ್ತೇನೆ ಎಂದಿದ್ದಾರೆ.
ನನ್ನ ಅನೇಕ ಸಹ ನಟರು ನಾನು ಸಾಕಷ್ಟು ಅಭ್ಯಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಸ್ವಂತವಾಗಿ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ನಾನು ಅವರಿಗೆ ಹೇಳುತ್ತೇನೆ. ಆದರೆ ಇದು ಅಗತ್ಯ ಎಂದಿದ್ದಾರೆ ಅಮಿತಾಬ್.
ಚೆಹ್ರೆ ಅನ್ನು ರೂಮಿ ಜಾಫ್ರಿ ನಿರ್ದೇಶಿಸಿದ್ದಾರೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ಸರಸ್ವತಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ್ದಾರೆ.
ಇದರಲ್ಲಿ ಅನ್ನು ಕಪೂರ್, ರಿಯಾ ಚಕ್ರವರ್ತಿ, ಕ್ರಿಸ್ಟಲ್ ಡಿಸೋಜಾ, ಧೃತಿಮಾನ್ ಚಟರ್ಜಿ, ರಘುಬೀರ್ ಯಾದವ್ ಮತ್ತು ಸಿದ್ದಾಂತ್ ಕಪೂರ್ ಕೂಡ ನಟಿಸಿದ್ದಾರೆ. ಚಿತ್ರವು 27 ಆಗಸ್ಟ್ 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅಮಿತಾಬ್ ಬ್ರಹ್ಮಾಸ್ತ್ರ, ಜುಂಡ್, ಮತ್ತು ಮೇಡೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರು ದೀಪಿಕಾ ಪಡುಕೋಣೆ ಜೊತೆ ಹಾಲಿವುಡ್ ಚಿತ್ರ ದಿ ಇಂಟರ್ನ್ ನ ರೀಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.