- Home
- Entertainment
- Cine World
- ಒಂದರ ಹಿಂದೆ ಒಂದರಂತೆ 19 ಬ್ಲಾಕ್‌ಬಸ್ಟರ್ ನೀಡಿ, ಉಳಿದ ಸಿನಿಮಾ ಸ್ಟಾರ್‌ಗಳನ್ನು ಮಂಕು ಮಾಡಿದ್ದ Amitabh Bachchan
ಒಂದರ ಹಿಂದೆ ಒಂದರಂತೆ 19 ಬ್ಲಾಕ್‌ಬಸ್ಟರ್ ನೀಡಿ, ಉಳಿದ ಸಿನಿಮಾ ಸ್ಟಾರ್‌ಗಳನ್ನು ಮಂಕು ಮಾಡಿದ್ದ Amitabh Bachchan
ಅಮಿತಾಭ್ ಬಚ್ಚನ್ 80ರ ದಶಕದ ಹಿಟ್‍ಗಳು: ಅಮಿತಾಭ್ ಬಚ್ಚನ್ ತಮ್ಮ ವೃತ್ತಿಜೀವನದಲ್ಲಿ ಒಂದಕ್ಕಿಂತ ಒಂದು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ 80ರ ದಶಕದಲ್ಲಿ ಅವರು ತೋರಿಸಿದ ಧಮಾಕದ ಮುಂದೆ ಅನೇಕ ಸ್ಟಾರ್‌ಗಳು ಮಂಕಾದರು.

80ರ ದಶಕದಲ್ಲಿ ಅಮಿತಾಭ್ ಬಚ್ಚನ್‍ರ ಸುಮಾರು 19 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಿ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಯಶಸ್ಸು ಕಂಡವು.
1980 ರಲ್ಲಿ ಅಮಿತಾಭ್ ಬಚ್ಚನ್‍ರ ದೋಸ್ತಾನ (9 ಕೋಟಿ), ಶಾನ್ (8.5 ಕೋಟಿ), ರಾಮ್ ಬಲರಾಮ್ (9.5 ಕೋಟಿ) ಬಿಡುಗಡೆಯಾದವು. ಮೂರು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ರಾಜ್ಯಭಾರ ಮಾಡಿದವು.
1981ರಲ್ಲಿ ಅಮಿತಾಭ್ ಬಚ್ಚನ್‍ರ ನಸೀಬ್ (14.5 ಕೋಟಿ), ಲಾವಾರಿಸ್ (12 ಕೋಟಿ), ಕಾಲಿಯಾ (7.5 ಕೋಟಿ), ಯಾರಾನ (7 ಕೋಟಿ) ಬಿಡುಗಡೆಯಾದವು. ಈ ನಾಲ್ಕು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಡೂಪರ್ ಹಿಟ್ ಆದವು.
1982 ರಲ್ಲಿ ಅಮಿತಾಭ್ ಬಚ್ಚನ್‍ರ ಸತ್ತೆ ಪೆ ಸತ್ತಾ (8.5 ಕೋಟಿ), ನಮಕ್ ಹಲಾಲ್ (12 ಕೋಟಿ), ಖುದ್ದಾರ್ (10 ಕೋಟಿ), ಶಕ್ತಿ (8 ಕೋಟಿ), ದೇಶ್ ಪ್ರೇಮಿ (7.2 ಕೋಟಿ) ಬಿಡುಗಡೆಯಾದವು. ಈ ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಸಂಚಲನ ಮೂಡಿಸಿದವು.
1983 ರಲ್ಲಿ ಅಮಿತಾಭ್ ಬಚ್ಚನ್‍ರ ಅಂಧಾ ಕಾನೂನ್ (10 ಕೋಟಿ), ಕೂಲಿ (18 ಕೋಟಿ) ಮತ್ತು ನಾಸ್ತಿಕ್ (7.6 ಕೋಟಿ) ಬಿಡುಗಡೆಯಾದವು. ಈ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆದವು.
1984-85 ರಲ್ಲಿ ಅಮಿತಾಭ್ ಬಚ್ಚನ್‍ರ ಶರಾಬಿ (7.6 ಕೋಟಿ), ಗಿರಫ್ತಾರ್ (5 ಕೋಟಿ), ಮರ್ದ್ (16 ಕೋಟಿ) ಮುಂತಾದ ಚಿತ್ರಗಳು ಬಿಡುಗಡೆಯಾದವು. ಈ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆದವು. 1988 ರಲ್ಲಿ ಬಂದ ಶಹೆನ್‍ಶಾಹ್ ಚಿತ್ರ ಹಿಟ್ ಆಯಿತು. ಇದು 12 ಕೋಟಿ ಗಳಿಸಿತು.