40 ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾದ 10 ಈಗಿಲ್ಲ!

First Published May 5, 2021, 7:20 PM IST

ನಿರ್ದೇಶಕ ಮನಮೋಹನ್ ದೇಸಾಯಿ ಅವರ ಮಲ್ಟಿ ಸ್ಟಾರ್‌ ಸಿನಿಮಾ ನಸೀಬ್ ಬಿಡುಗಡೆಯಾಗಿ 40 ವರ್ಷಗಳನ್ನು ಪೂರೈಸಿದೆ. 1 ಮೇ 1981ರಂದು ರೀಲಿಸ್‌ ಆದ ಈ ಸಿನಿಮಾ ಆ ಸಮಯದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು ಹಾಗೂ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 14.50 ಕೋಟಿ ಗಳಿಸಿತ್ತು. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ, ಶತ್ರುಘನ್ ಸಿನ್ಹಾ, ರೀನಾ ರಾಯ್, ರಿಷಿ ಕಪೂರ್, ಕಿಮ್‌, ಪ್ರಾನ್, ಅಮ್ಜದ್ ಖಾನ್,  ಖಾದರ್‌ ಖಾನ್, ಪ್ರೇಮ್ ಚೋಪ್ರಾ, ಶಕ್ತಿ ಕಪೂರ್ ಮತ್ತು ಅಮ್ರಿಶ್ ಪುರಿ ಮುಖ್ಯ ಪಾತ್ರದಲ್ಲಿದ್ದರು. 40 ವರ್ಷಗಳ ನಂತರ, ಈ ಚಿತ್ರದ ನಟರ  ಲುಕ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದೇ ಸಮಯದಲ್ಲಿ, ಇದರಲ್ಲಿ ಕೆಲಸ ಮಾಡಿದ ಸುಮಾರು 10ಕ್ಕಿಂತ ಹೆಚ್ಚು ನಟರು ಈಗ ನಮ್ಮೊಂದಿಗೆ ಇಲ್ಲ.