22 ವರ್ಷಕ್ಕೆ ಕೊನೆ ಉಸಿರೆಳೆದ ಖ್ಯಾತ ಯುಟ್ಯೂಬರ್; ತಂದೆ ತಿಳಿಸಿದ ಅಸಲಿ ಸತ್ಯವಿದು!
ಯುಟ್ಯೂಬ್ ಲೋಕದ ಸುಂದರಿ ಎಂದೇ ಜನಪ್ರಿಯತೆ ಪಡೆದಿದ್ದ ಲಿಲ್ ಬೋ ವೀಪ್ ನಿಧನರಾಗಿರುವ ವಿಚಾರ ನೆಟ್ಟಿಗರಿಗೆ ಬಿಗ್ ಶಾಕ್ ತಂದುಕೊಟ್ಟಿದೆ.....
ಆಸ್ಟ್ರೇಲಿಯನ್ Rapper ಕಮ್ ಯುಟ್ಯೂಬರ್ ಲಿಲ್ ಬೋ ವೀಪ್ 22ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ತಂದೆ ಫೇಸ್‌ಬುಕ್ ಮೂಲಕ ಹಂಚಿ ಕೊಂಡಿದ್ದಾರೆ.
ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡುತ್ತಾ, ಫಾಲೋವರ್ಸ್‌ಅನ್ನು ಎಂಟರ್ಟೈನ್ಡ್ ಮಾಡುತ್ತಿದ್ದ ಲಿಲ್ ಬೋ ಡ್ರಗ್ಸ್ ವ್ಯಸನಿ ಆಗಿದ್ದರು ಎನ್ನಲಾಗಿದೆ.
'ವಾರಾಂತ್ಯದಲ್ಲಿ, ಖಿನ್ನತೆ, ಆಘಾತಗಳಿಗೆ ಮಗಳು ಒಳಗಾಗುತ್ತಿದ್ದಳು. PTSD ಮತ್ತು ಮಾದಕ ವ್ಯಸನದ ವಿರುದ್ಧ ನನ್ನ ಮಗಳ ಜೀವನಕ್ಕಾಗಿ ನಾವು ಹೋರಾಡಿದ್ದೆವು. ನಾವು ಅವಳನ್ನು ಮರಳಿ ಪಡೆಯಲು ನಿರಂತರವಾಗಿ ಹೋರಾಡುತ್ತಿದ್ದೆವು,' ಎಂದು ಬರೆದುಕೊಂಡಿದ್ದಾರೆ.
'ಆಕೆಯನ್ನು ನಾವು ಅಮೆರಿಕದ ತುರ್ತು ವಾಪಸಾತಿ ಮೂಲಕ ಕರೆದುಕೊಂಡು ಬಂದಾಗಿನಿಂದಲೂ ನಾವು ಹೋರಾಡುತ್ತಿದ್ದೇವೆ. ಆದರೆ ಸೋಲನುಭವಿಸಿದ್ದೇವೆ,' ಎಂದು ತಂದೆ ಮ್ಯಾಥ್ಯೂ ಸ್ಕೋಫೀಲ್ಡ್ ಹೇಳಿದ್ದಾರೆ.
'ಅವಳ ತಂದೆಯಾಗಿ, ಅವಳು ನನ್ನ ಹೀರೋ, ನನ್ನ ಮಗಳು ಮತ್ತು ನಾನು ಪ್ರೀತಿಸುವ ನನ್ನ ಆತ್ಮೀಯ ಗೆಳತಿಯಾಗಿರುವುದರಿಂದ ನಾನು ಅವಳ ಬಗ್ಗೆ ಪದಗಳನ್ನು ಮೀರಿ ಹೆಮ್ಮೆಪಡುತ್ತೇನೆ, ವಿಶ್ವವು ತಮ್ಮ ದೇವತೆಯನ್ನು ಮರಳಿ ಬಯಸುತ್ತಿರುವಾಗ ಅವಳು ಈಗ ನಮ್ಮ ಮನಸ್ಸನ್ನು ನೋಯಿಸುತ್ತಿಲ್ಲ.
'ನನ್ನ ದೊಡ್ಡ ಭಾಗವು ಈ ಕ್ಷಣದಲ್ಲಿ ಕಳೆದುಹೋಗಿದೆ. ಆದರೆ ನನ್ನ ಆತ್ಮೀಯ ಸ್ನೇಹಿತರು ನಾನು ಈ ಮೂಲಕ ಹೊಸ ಮಾರ್ಗವನ್ನು ಪಡೆಯುವವರೆಗೆ ನನಗೆ ಕರೆ ಮಾಡದಿರಲು ಪ್ರಯತ್ನಿಸಬೇಕೆಂದು ನಾನು ಗೌರವದಿಂದ ಕೇಳುತ್ತೇನೆ
ಲಿಲ್ ಬೋ ವೀಪ್ ನಿಜವಾದ ಹೆಸರು ವಿನೋನಾ ಬ್ರೂಕ್ಸ್. 2015ರಲ್ಲಿ ಸೌಂಡ್ ಕ್ಲೌಡ್ ಮೂಲಕ ಮ್ಯೂಸಿಕ್ ಜರ್ನಿ ಆರಂಭಿಸಿ, ಲಕ್ಷಾಂತರ ಯುಟ್ಯೂಬ್ ಫಾಲೋವರ್ಸ್ ಪಡೆದುಕೊಂಡಿದ್ದರು.