Sneha Reddy ಇದೆಂಥಾ ಸೀರೆ ಸೆರಗಿಲ್ಲ ಏನೂ ಇಲ್ಲ 1 ಲಕ್ಷ 75 ಸಾವಿರವಂತೆ?
ಅಲ್ಲು ಅರ್ಜುನ್ ಪತ್ನಿ ಸಿಲ್ವರ್ ಸೀರೆ ಲುಕ್ ಸಖತ್ ವೈರಲ್ ಅಗುತ್ತಿದೆ. ಸೆರಗು ಬದಲು ಎಳೆ ಡಿಸೈನಾ? ಥ್ರಿಲ್ ಆದ ನೆಟ್ಟಿಗರು...

ಟಾಲಿವುಡ್ ಸ್ಟೈಲಿಷ್ ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕೂಡ ಸೋಷಿಯಲ್ ಮೀಡಿಯಾ ಸ್ಟಾರ್. 8.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸ್ನೇಹಾ ಸಿನಿ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅಲ್ಲು ಅರ್ಜುನ್ ಎಷ್ಟು ಸ್ಟೈಲಿಷ್ ಅದಕ್ಕೂ ಒಂದು ಕೈ ಮೇಲೆ ಸ್ನೇಹಾ ಸ್ಟೈಲಿಂಗ್. ಲವ್ ಅಟ್ ಫಸ್ಟ್ ಸೈಟಿನಿಂದ ಪ್ರೀತಿಯಲ್ಲಿ ಬಿದ್ದು ಈಗ ಎರಡು ಮುದ್ದಾಗ ಮಕ್ಕಳಿಗೆ ಪೋಷಕರಾಗಿದ್ದಾರೆ.
ಟಾಪ್ ಸೆಲೆಬ್ರಿಟಿಗಳು ಸ್ನೇಹಾಳ ಉಡುಪು ಡಿಸೈನ್ ಮಾಡುತ್ತಾರೆ. ಮಾರ್ಕೆಟ್‌ನಲ್ಲಿ ಟ್ರೆಂಡ್ ಅಗುತ್ತಿರುವ ಡಿಸೈನ್ ಮಾಡಿ ಸ್ನೇಹಾ ಜೊತೆ ಪಾರ್ಟನರ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ.
ಇದೀಗ ಸ್ನೇಹಾ ಧರಿಸಿರುವ ಸಿಲ್ವರ್ ಬಣ್ಣದ ಸೀರೆ ಟ್ರೆಂಡ್ ಆಗುತ್ತಿದೆ. ತುಂಬಾನೇ ಶಿಮ್ಮರ್ ಇರುವ ಈ ಸೀರೆ ಹೈಲೈಟ್ ಸೆರಗು. ಎಳೆಗಳ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.
ಸೀರೆ ನೋಡಲು ತುಂಬಾನೇ ಸಿಂಪಲ್ ಆಗಿದೆ ಆದರೆ ಬೆಲೆ ಕೇಳಿದ್ದರೆ ನೀವು ಶಾಕ್ ಆಗುವುದು ಗ್ಯಾರಂಟಿ. ಏಕೆಂದರೆ ಈ ಸೀರೆ 1 ಲಕ್ಷ 75 ಸಾವಿರವಂತೆ.
ಸ್ನೇಹಾ ಸಿಗ್ನೇಚರ್ ಲುಕ್ ಏನೆಂದರೆ ಸಿಂಪಲ್ ಆಗಿ ಆಭರಣ ಧರಿಸುವುದು. ಹೌದು! ಡೈಮೆಂಡ್ ಚೋಕರ್ ಧರಿಸಿದ್ದಾರೆ ಅದಕ್ಕೆ ಯಾವ ಓಲೆ ಧರಿಸಿಲ್ಲ. ಇನ್ನು ಕೈಗಳಿಗೆ ಉಂಗುರ ಬಿಟ್ಟರೆ ಮತ್ತೇನು ಇಲ್ಲ.
ಸ್ನೇಹಾ ದುಬಾರಿ ಉಡುಪು ಧರಿಸುತ್ತಿರುವುದು ಇದೇನು ಮೊದಲಲ್ಲ ಏಕೆಂದರೆ ಸ್ನೇಹಾ ಪ್ರತಿ ಸಲವೂ ನೋಡಲು ಸಿಂಪಲ್ ಆಗಿರುತ್ತಾರೆ ಆದರೆ ಐಷಾರಾಮಿ ಡಿಸೈನರ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.