ಹ್ಯಾಪಿ ಬರ್ತ್‌ಡೇ Allu: 38ಕ್ಕೆ ಕಾಲಿಟ್ಟ ಸ್ಟೈಲಿಷ್ ಸ್ಟಾರ್..!
First Published Apr 8, 2021, 11:57 AM IST
ಅಲ್ಲು ಅರ್ಜುನ್‌ಗೆ 38 ವರ್ಷ | ಮಾಲ್ಡೀವ್ಸ್ ವೆಕೇಷನ್ ಫೋಟೋ ಶೇರ್ ಮಾಡಿ ಪತಿಗೆ ವಿಶ್ ಮಾಡಿದ ಸ್ನೇಹಾ ರೆಡ್ಡಿ

ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ತಮ್ಮ 38 ನೇ ಹುಟ್ಟುಹಬ್ಬವನ್ನು ಹೈದರಾಬಾದ್‌ನಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಆಚರಿಸಿದ್ದಾರೆ.

ಅವರ ಪತ್ನಿ ಸ್ನೇಹಾ ರೆಡ್ಡಿ ಅವರು ಮಾಲ್ಡೀವ್ಸ್ನಲ್ಲಿ ತಮ್ಮ ರಜಾದಿನದಿಂದ ಥ್ರೋಬ್ಯಾಕ್ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಅಲ್ಲು ಅಯಾನ್‌ನ ಏಳನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಲಾಗಿತ್ತು.

ನಂತರ ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಏಪ್ರಿಲ್ 6ಎಂದು ಮಾಲ್ಡೀವ್ಸ್‌ನಿಂದ ಹಿಂದಿರುಗಿತ್ತು.

ಹೈದರಾಬಾದ್‌ನಲ್ಲಿ ನಡೆದ ಪುಷ್ಪಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಲ್ಲು ಭಾಗವಹಿಸಿದ್ದರು.

ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿ ಪತಿಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಅವರು ತಮ್ಮ ಸಂದದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಅವರ ಇತ್ತೀಚಿನ ಮಾಲ್ಡೀವ್ಸ್ ಪ್ರವಾಸದ ಸಮಯದಲ್ಲಿ ತೆಗೆಯಲಾಗಿತ್ತು.

ಅವರು ತಮ್ಮ ಮಕ್ಕಳಾದ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ಅವರೊಂದಿಗೆ ಮತ್ತೊಂದು ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಈ ಜೋಡಿ ಇತ್ತೀಚೆಗಷ್ಟೇ ಆಗ್ರಾದಲ್ಲಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ್ದರು