- Home
- Entertainment
- Cine World
- Pushpa Box Office Records: ಹಳೆ ದಾಖಲೆ ಮುರಿದ ಪುಷ್ಪಾ, ಅಲ್ಲು ನಟನೆಗೆ ಸಿನಿಪ್ರಿಯರು ಫಿದಾ
Pushpa Box Office Records: ಹಳೆ ದಾಖಲೆ ಮುರಿದ ಪುಷ್ಪಾ, ಅಲ್ಲು ನಟನೆಗೆ ಸಿನಿಪ್ರಿಯರು ಫಿದಾ
ಅಲ್ಲು ಅರ್ಜುನ್ (Allu Arjun) ನಟಿಸಿದ ಪುಷ್ಪ (Allu Arjun) ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಈ ಸಿನಿಮಾವು ಕಲೆಕ್ಷನ್‌ನಲ್ಲಿ ಅಲ್ಲು ಅರ್ಜುನ್ ಅವರ 'ಅಲಾವೈಕುಂಠಪುರಮುಲೂ' (Ala Vaikunthapurramuloo) ಸಿನಿಮಾವನ್ನು ಸೋಲಿಸಿ ಒಂದೇ ದಿನದಲ್ಲಿ 40 ಕೋಟಿ ಗಳಿಸುತ್ತದೆ. ಪುಷ್ಪ: ದಿ ರೈಸ್ ಸಿನಿಮಾವು ಅವರ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ನಟಿಸಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ಶುಕ್ರವಾರ, ಡಿಸೆಂಬರ್ 17 ರಂದು ಭಾರತದಾದ್ಯಂತ ಬಿಡುಗಡೆಯಾಯಿತು. ಓಮಿಕ್ರಾನ್ ಭಯದ ನಡುವೆ, ಈ ಸುಕುಮಾರ್ ನಿರ್ದೇಶನದ ಚಿತ್ರವು ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಪ್ರತಿಕ್ರಿಯೆ ಕಂಡುಬಂದಿದೆ.
ರಕ್ತ ಚಂದನದ ಕಳ್ಳಸಾಗಾಣಿಕೆಯನ್ನು ಆಧರಿಸಿದ ಈ ಚಿತ್ರವು ಮೊದಲ ದಿನವೇ ಸುಮಾರು 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಲ್ಲು ಅರ್ಜುನ್ 'ಪುಷ್ಪ' ಅವರ ಹಿಂದಿನ ಚಿತ್ರ 'ಅಲಾವೈಕುಂಠಪುರಮುಲು' ದಾಖಲೆಯನ್ನು ಮುರಿದಿದೆ. ಇದು ಸುಮಾರು 36.83 ಕೋಟಿ ಕಲೆಕ್ಷನ್ ಮಾಡಿತ್ತು.
ಇದರೊಂದಿಗೆ, 'ಪುಷ್ಪಾ' ಇಲ್ಲಿಯವರೆಗಿನ ಅಲ್ಲು ಅರ್ಜುನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ.ಚಿತ್ರವು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದರೊಂದಿಗೆ 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ತೆಲುಗು ಚಲನಚಿತ್ರವನ್ನು ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು - ಬಹು ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ಇದು ಡಬ್ಬಿಂಗ್ ಆವೃತ್ತಿಗಳಿಂದ ಇನ್ನೂ 5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಮೊದಲದಿನದ ಮೊತ್ತ 40 ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.
ಈ ಚಿತ್ರವು ನಿಜಾಮ್ ಪ್ರದೇಶದಿಂದ ಸಂಪೂರ್ಣವಾಗಿ 11.44 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮತ್ತೊಂದು ದಾಖಲೆಯನ್ನು ಮಾಡಿದೆ.ಪುಷ್ಪ ಸಿನಿಮಾವು ಹೆಚ್ಚಿನ ಹಣ ಸಂಗ್ರಹಿಸುವುದನ್ನು ಮುಂದುವರೆಸುತ್ತದೆ ಎಂಬುದನ್ನು ಚಿತ್ರದ ಮೊದಲ ದಿನದ ಕಲೆಕ್ಷನ್ ಸಾಬೀತುಪಡಿಸಿದೆ.
ಸಿನಿಮಾಕ್ಕೆ ರಿಲೀಸ್ ಆದ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಅದರಲ್ಲೂ ವಾರಾಂತ್ಯದಲ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡುವ ನಿರೀಕ್ಷೆ ಇದೆ. ಹಾಗೇ ಈ ಸಿನಿಮಾದ ಬಿಡುಗಡೆ ದಿನಾಂಕವು ಬೇರೆ ಯಾವುದೇ ಫಿಲ್ಮ್ ಜೊತೆ ಕ್ಲ್ಯಾಶ್ ಆಗಿಲ್ಲ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಸಿನಿಮಾವು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ. ವಿಶೇಷವಾಗಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರವನ್ನು ತುಂಬಾ ಮನ ಮುಟ್ಟುವಂತೆ ನಿರ್ವಹಿಸಿದ್ದು ಭಾರಿ ಮೆಚ್ಚುಗೆ ಗಳಿಸುತ್ತಿದ್ದಾರೆ.
ಪುಷ್ಪ: ದಿ ರೈಸ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸುನೀಲ್, ಮಲಯಾಳಂ ನಟ ಫಹದ್ ಫಾಸಿಲ್, ಪ್ರಕಾಶ್ ರಾಜ್, ಧನಂಜಯ್, ಜಗಪತಿ ಬಾಬು ಮತ್ತು ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವಿ ಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.