- Home
- Entertainment
- Cine World
- ಅಮಿರ್ ಖಾನ್ ಮನೆಯಲ್ಲಿ ಅಲ್ಲು ಅರ್ಜುನ್… ಬ್ಲಾಕ್ ಬಸ್ಟರ್ ಸಿನಿಮಾ ನೀಡೋದಕ್ಕೆ ರೆಡಿಯಾಗ್ತಿದ್ದಾರ?
ಅಮಿರ್ ಖಾನ್ ಮನೆಯಲ್ಲಿ ಅಲ್ಲು ಅರ್ಜುನ್… ಬ್ಲಾಕ್ ಬಸ್ಟರ್ ಸಿನಿಮಾ ನೀಡೋದಕ್ಕೆ ರೆಡಿಯಾಗ್ತಿದ್ದಾರ?
ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಆಮಿರ್ ಖಾನ್ ಮನೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಂತೋಷದಿಂದ ಕುಣಿದಾಡುವಂತೆ ಮಾಡಿದೆ. ಆಮಿರ್ ಮತ್ತು ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ

'ಪುಷ್ಪ 2' (Pushpa 2) ಚಿತ್ರದ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ಮುಂಬೈನಲ್ಲಿರುವ ಆಮಿರ್ ಖಾನ್ ಮನೆಯಲ್ಲಿ ಕಾಣಿಸಿಕೊಂಡಿದ್ದರು, ನಂತರ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಆಮಿರ್ ಜೊತೆಗಿನ ಅಲ್ಲು ಅರ್ಜುನ್ ಅವರ ಫೋಟೋಗಳು ಹೊರಬಂದಿದ್ದೇ ತಡೆ, ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಇಬ್ಬರು ಸ್ಟಾರ್ ಗಳು ಸೇರಿ ಸೂಪರ್ ಹಿಟ್ ಸಿನಿಮಾ (Super Hit films) ನೀಡಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿವೆ.
ಅಲ್ಲು ಅರ್ಜುನ್ (Allu Arjun) ಮತ್ತು ಆಮಿರ್ ಖಾನ್ ಅವರ ಈ ಭೇಟಿಯ ಬಗ್ಗೆ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ. ವರದಿಯ ಪ್ರಕಾರ, ಅಲ್ಲು ಅರ್ಜುನ್ ಶೀಘ್ರದಲ್ಲೇ ಆಮಿರ್ ಖಾನ್ ಅವರ ಬ್ಯಾನರ್ ಅಡಿಯಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೂ ಮೊದಲು, 2023 ರಲ್ಲಿ ಅಲ್ಲು ಅರ್ಜುನ್ ಮತ್ತು ಆಮಿರ್ (Aamir Khan) ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರು ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸಂಶಯ ಕಾಡಿತ್ತು. ಇದೀಗ ಮತ್ತೆ ಸಂಶಯ ಬಲವಾಗಿದೆ.
ಆಮಿರ್ ಮತ್ತು ಅಲ್ಲು ಅರ್ಜುನ್ ಒಂದು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಾರಾ?
ಅಲ್ಲು ಅರ್ಜುನ್ ಮತ್ತು ಆಮಿರ್ ಖಾನ್ ಅವರ ಮೇಲೆ ಫಿಲಂ ಇಂಡಸ್ಟ್ರಿ (Film Industry)ಕಣ್ಣಿಟ್ಟಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇಬ್ಬರೂ ನಟರು ಇನ್ನೂ ಯಾವುದೇ ಅಧಿಕೃತ ದೃಢೀಕರಣ ಮಾಡಿಲ್ಲ. ಅಂದಹಾಗೆ, ಅಲ್ಲು ಅರ್ಜುನ್ ಅವರ 'ಪುಷ್ಪ 2' ಬಿಡುಗಡೆಯಾದಾಗ, ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿಗೆ ಆಮಿರ್ ಇಡೀ ತಂಡವನ್ನು ಅಭಿನಂದಿಸಿದ್ದರು. ನಂತರ ಅಲ್ಲು ಅರ್ಜುನ್ ಆಮಿರ್‌ಗೆ ಧನ್ಯವಾದ ಕೂಡ ತಿಳಿಸಿದ್ದರು..
ಸಿತಾರೆ ಜಮೀನ್ ಪರ್
ಜೂನ್ 20 ರಂದು ಬಿಡುಗಡೆಯಾಗಲಿರುವ ತಮ್ಮ ಸಿತಾರೆ ಜಮೀನ್ ಪರ್ (Sitare Zamin Par) ಚಿತ್ರಕ್ಕಾಗಿ ಅಮೀರ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಇದರ ಜೊತೆಗೆ, ಮಹಾಭಾರತವನ್ನು ಆಧರಿಸಿದ ಅವರ ಚಿತ್ರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಮಿರ್ ಇತ್ತೀಚೆಗೆ ತನ್ನ ಪಾತ್ರಗಳಿಗೆ ಪರ್ಫೆಕ್ಟ್ ಆಗಿರುವ ನಟರನ್ನು ಹುಡುಕುತ್ತಿರುವುದಾಗಿ ಹೇಳಿದರು.
ಅಟ್ಲೀ ಅವರ ಚಿತ್ರದಲ್ಲಿ ಅಲ್ಲು ಅರ್ಜುನ್
ಇನ್ನು ಅಲ್ಲು ಅರ್ಜುನ್ ಪ್ರಸ್ತುತ ಅಟ್ಲೀ (director Atlee) ಅವರ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ, ಇದನ್ನು ಪ್ರಸ್ತುತ AA22 ಎಂದು ಹೆಸರಿಸಲಾಗಿದೆ. ಇದು ಆಕ್ಷನ್-ಪ್ಯಾಕ್ಡ್ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವಾಗಿದೆ. ಇದರ ಜೊತೆಗೆ ಅವರು ಬಹಳ ಹಿಂದೆಯೇ ಘೋಷಿಸಲಾದ 'ಪುಷ್ಪ 3' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.