- Home
- Entertainment
- Cine World
- ತಲೆಕೆಳಗಾಗಿ ನೇತಾಡುವ ಫೋಟೋ ಹಂಚಿಕೊಂಡ ಅಲಿಯಾ; ತಪ್ಪಾಗಿ ಪೋಸ್ಟ್ ಮಾಡಿದ್ದೀರಿ ಎಂದ ನಟ ಸೋನು ಸೂದ್
ತಲೆಕೆಳಗಾಗಿ ನೇತಾಡುವ ಫೋಟೋ ಹಂಚಿಕೊಂಡ ಅಲಿಯಾ; ತಪ್ಪಾಗಿ ಪೋಸ್ಟ್ ಮಾಡಿದ್ದೀರಿ ಎಂದ ನಟ ಸೋನು ಸೂದ್
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮಗುವಿಗೆ ಜನ್ಮ ನೀಡಿದ ಬಳಿಕ ಯೋಗ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತೆ ಸಿನಿಮಾಗೆ ಮರಳು ತಯಾರಿ ನಡೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಆಗಲೇ ಜಿಮ್, ಯೋಗ ಪ್ರಾರಂಭಿಸಿದ್ದಾರೆ. ಈಗಾಗಲೇ ವರ್ಕೌಟ್ ಪ್ರಾರಂಭಿಸುವ ಮೂಲಕ ಅಲಿಯಾ ಭಟ್ ಅಚ್ಚರಿ ಮೂಡಿಸಿದ್ದರು.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್ 6 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಮಗು ಜನಿಸಿ ಎರಡು ತಿಂಗಳಾಗುತ್ತಾ ಬಂತು ಆದರೆ ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಇತ್ತೀಚಿಗಷ್ಟೆ ಅಲಿಯಾ ದಂಪತಿ ಮಗಳ ಹೆಸರನ್ನು ಬಹಿರಂಗ ಪಡಿಸಿದರು. ಮುದ್ದಾದ ಮಗಳಿಗೆ ಅಲಿಯಾ ದಂಪತಿ ರಾಹಾ ಎಂದು ಹೆಸರಿಟ್ಟಿದ್ದಾರೆ.
ಸದ್ಯ ಯೋಗ ಮಾಡುತ್ತಿರುವ ಅಲಿಯಾ ಭಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲಿಯಾ ಭಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಲೆಕೆಳಗಾಗಿ ನೇತಾಡುತ್ತಿರುವ ಫೋಟೋ ಇದಾಗಿದೆ. ಮಗುವಿಗೆ ಜನ್ಮ ನೀಡಿ ಕೆಲವೇ ದಿನಗಳಲ್ಲಿ ಈ ರೀತಿಯ ಸಾಹಸ ಮಾಡಿದ ಅಲಿಯಾ ಭಟ್ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
ಅಂದಹಾಗೆ ಫೋಟೋ ಶೇರ್ ಮಾಡಿ ಅಲಿಯಾ ಭಟ್, ಡಿಲಿವರಿಯಾಗಿ ಒಂದೂವರೆ ತಿಂಗಳ ಬಳಿಕ ನಾನು ಮತ್ತೆ ನನ್ನ ಕೋರ್‌ಗೆ ಮರಳುತ್ತಿದ್ದೀನಿ. ನನ್ನ ಮಾರ್ಗದರ್ಶಕರೊಂದಿಗೆ ನಾನು ಇದನ್ನು ಮಾಡಿದೆ' ಎಂದು ಹೇಳಿದ್ದಾರೆ. ಇನ್ನೂ ಎಲ್ಲಾ ತಯಂದಿರಿಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.
ಅಲಿಯಾ ಭಟ್ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿ ಸೆಲೆಬ್ರಿಟಗಳು ಕೂಡ ಕಾಮೆಂಟ್ ಮಾಡಿ ವಾವ್ ಎನ್ನುತ್ತಿದ್ದಾರೆ. ನಟ ಸೋನು ಸೂದ್ ಕಾಮೆಂಟ್ ಮಾಡಿ, 'ತಪ್ಪಾಗಿ ನಿಮ್ಮ ಚಿತ್ರವನ್ನು ತಲೆಕೆಳಗಾಗಿ ಪೋಸ್ಟ್ ಮಾಡಿದ್ದೀರಿ' ಎಂದು ಹೇಳಿದ್ದಾರೆ. ಇನ್ನು ಇಶಾನ್ ಕಟ್ಟರ್ ಸೇರಿದಂತೆ ಅನೇಕರು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅಲಿಯಾ ಭಟ್ ಈ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಿದರು. ಏಪ್ರಿಲ್ 14ರಂದು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ಅಲಿಯಾ ದಾಂಪತ್ಯಕ್ಕೆ ಕಾಲಿಟ್ಟರು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಅಂದಹಾಗೆ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸದ್ಯ ಅಲಿಯಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇನ್ನು ಹಾಲಿವುಡ್ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಸದ್ಯ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಸದ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ.