MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಈ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಆಲಿಯಾ ರಣಬೀರ್‌ರ ಮಗು ನೋಡಲು ಮನೆಯೊಳಗೆ ಎಂಟ್ರಿಯಂತೆ

ಈ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಆಲಿಯಾ ರಣಬೀರ್‌ರ ಮಗು ನೋಡಲು ಮನೆಯೊಳಗೆ ಎಂಟ್ರಿಯಂತೆ

ಬಾಲಿವುಡ್‌ ಜೋಡಿ  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt Ranbir Kapoor) ಇತ್ತೀಚೆಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ಮಗಳಿಗೆ ಜನ್ಮ ನೀಡಿದ್ದು ಈಗ ಮಗಳೊಂದಿಗೆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ,  ತಂದೆ ರಣಬೀರ್ ಕಪೂರ್ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಈ ಮಧ್ಯೆ ಆಲಿಯಾ-ರಣಬೀರ್ ತಮ್ಮ ಮಗಳಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದೆ. ಇಂಡಸ್ಟ್ರಿಗೆ ಸಂಬಂಧಿಸಿದ ಸೆಲೆಬ್ರಿಟಿಗಳು ಮತ್ತು ಸಂಬಂಧಿಕರು  ಮಗುವನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ಮಗಳ ಆರೋಗ್ಯವನ್ನು ಪರಿಗಣಿಸಿ, ತಮ್ಮ ಮಗಳನ್ನು ನೋಡಲು ಬಯಸುವವರಿಗಾಗಿ ದಂಪತಿಗಳು   ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದ್ದಾರೆ, ಅದನ್ನು ಎಲ್ಲರೂ ಅನುಸರಿಸುವುದು ಕಡ್ಡಾಯವಾಗಿದೆ.  ಅಷ್ಟಕ್ಕೂ ಏನಿದೆ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತಾ?

2 Min read
Author : Suvarna News
| Updated : Nov 13 2022, 03:44 PM IST
Share this Photo Gallery
  • FB
  • TW
  • Linkdin
  • Whatsapp
17

ಆಲಿಯಾ ನವೆಂಬರ್ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೀಗ ಮನೆಗೆ ಬಂದಿದ್ದಾರೆ ಈ ನಡುವೆ ಮಗಳನ್ನು ನೋಡಲು ಮನೆಗೆ ಬರುವ ಸಂಬಂಧಿಕರಿಗೆ ದಂಪತಿ ಮಾರ್ಗಸೂಚಿ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಅದಕ್ಕಾಗಿಯೇ ಅವರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಬಾಲಿವುಡ್ ಲೈಫ್ ವರದಿ ಪ್ರಕಾರ,  ದಂಪತಿಗಳು ತಮ್ಮ ಮಗಳನ್ನು ಭೇಟಿಯಾಗುವವರಿಗೆ ವಿಶೇಷ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ.

37

ದಂಪತಿಗಳು ತಮ್ಮ ಮಗಳಿಗೆ ಮನೆಯಲ್ಲಿ ಆರೋಗ್ಯಕರ ವಾತಾವರಣವನ್ನು ಒದಗಿಸಲು ಬಯಸುತ್ತಾರೆ ಮತ್ತು ತಮ್ಮ ಮನೆಗೆ ಬರುವ ಯಾವುದೇ ಆಪ್ತ ಸ್ನೇಹಿತರು ಅಥವಾ ಸಂಬಂಧಿಕರು ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ನಿರ್ಧರಿಸಿದ್ದಾರೆ. ವರದಿ ನೆಗೆಟಿವ್ ಬಂದ ನಂತರವೇ ಅವರು ತಮ್ಮ ಮನೆಗೆ ಪ್ರವೇಶಿಸಬಹುದು. ಮಗಳ ಆರೋಗ್ಯದ ಬಗ್ಗೆ ದಂಪತಿ ಯಾವುದೇ ಚಾನ್ಸ್‌ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಲಾಗುತ್ತಿದೆ. 

47

ಇದಲ್ಲದೆ, ದಂಪತಿಗಳ ಮಾರ್ಗಸೂಚಿಗೆ ಮತ್ತೊಂದು ನಿಯಮವನ್ನು ಸೇರಿಸಲಾಗಿದೆ, ಯಾರಾದರೂ ತಮ್ಮ ಮಗಳನ್ನು ಭೇಟಿ ಮಾಡಲು ಬಂದರೆ, ಅವರು ತಮ್ಮ ಫೋನ್ ಬಳಸುವಂತಿಲ್ಲ. ವಾಸ್ತವವಾಗಿ, ಆಲಿಯಾ-ರಣಬೀರ್ ತಮ್ಮ ಮಗಳ ಮುಖವನ್ನು ಬಹಿರಂಗಪಡಿಸಲು ಬಯಸುವುದಿಲ್ಲ.


 

57

ಈ ವರ್ಷ ಏಪ್ರಿಲ್ 14 ರಂದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾದರು. ದಂಪತಿಗಳು ತಮ್ಮ ಮದುವೆಯನ್ನು ತುಂಬಾ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಇದರಲ್ಲಿ ಭಾಗಿಯಾಗಿದ್ದರು.
 

67

ಮದುವೆಯಾದ 2 ತಿಂಗಳ ನಂತರ ಆಲಿಯಾ ಗರ್ಭಿಣಿಯಾಗಿರುವ ಸುದ್ದಿ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರ ಪ್ರೇಮಕಥೆ  ಪ್ರಾರಂಭವಾಗಿ  ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

77

ಕೆಲಸದ ಮುಂಭಾಗದಲ್ಲಿ, ರಾಕಿ ಔರ್ ರಾಣಿ ಕಿ ಪ್ರೇಮ್ ಕಿ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಎದುರು ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಅವರ ಹಾಲಿವುಡ್ ಸಿನಿಮಾ ಕೂಡ ಬರಲಿದೆ. ಅದೇ ಸಮಯದಲ್ಲಿ ಅನಿಮಲ್‌ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಅವರು ಲವ್ ರಂಜನ್ ಅವರೊಂದಿಗೆ ಸಹ ಚಿತ್ರವನ್ನೂ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಆಲಿಯಾ ಭಟ್
ರಣಬೀರ್ ಕಪೂರ್
ಮಗಳು
ಬಾಲಿವುಡ್
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
Latest Videos
Recommended Stories
Recommended image1
ಬಾಯ್‌ಫ್ರೆಂಡ್ ಕೊಟ್ಟ ನೋವು ಅಷ್ಟಿಷ್ಟಲ್ಲ: ಬ್ರೇಕಪ್ ಕಥೆ ಬಿಚ್ಚಿಟ್ಟ ‘ಸೂರ್ಯಕಾಂತಿ’ ನಟಿ ರೆಜಿನಾ
Recommended image2
ಹೊಸ ಅವತಾರದಲ್ಲಿ ‘ಜಿಂಕೆಮರಿ ನಾ...’ ಖ್ಯಾತಿಯ ಚೆಲುವೆ: ನೀಲಿ ಸೀರೆಯಲ್ಲಿ ಮಿಂಚಿದ ನಂದಿತಾ ಫೋಟೋಸ್ ಇಲ್ಲಿವೆ!
Recommended image3
Suriya: 'ಸೀನ್' ಟ್ರೇಲರ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಸೂರ್ಯ ಅಬ್ಬರ; ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved