Allu Arjun : ಪುಷ್ಪಾ ನಂತರ ಅಲ್ಲು ಅರ್ಜುನ್-ಪೂಜಾ ಮೋಡಿ...ಮಿಂಚಿನ ಟ್ರೇಲರ್
ಹೈದರಾಬಾದ್(ಜ. 29) ಪುಷ್ಪಾ ಯಶಸ್ಸಿನ ಅಲೆಯಲ್ಲಿರುವ ಅಲ್ಲು ಅರ್ಜುನ್ (Allu Arjun) ಮತ್ತೊಂದು ಸಾಹಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲು ಅರ್ಜುನ್, ಪೂಜಾ ಹೆಗ್ಡೆ (Pooja Hegde) ಮುಖ್ಯ ಭೂಮಿಕೆಯಲ್ಲಿರುವ 'ಅಲಾ ವೈಕುಂಠಪುರಮುಲೂ' (Ala Vaikunthapurramuloo) ಚಿತ್ರದ ಹಿಂದಿ ಟ್ರೇಲರ್ ಸದ್ದು ಮಾಡುತ್ತಿದೆ.
ಬಾಲಿವುಡ್ ನಟಿ ಟಬು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಶಾಂತ್, ನವದೀಪ್, ನಿವೇತಾ ಪೇತುರಾಜ್, ಜಯರಾಮ್ ಮತ್ತು ಸತ್ಯರಾಜ್ ಪೋಷಕ ಪಾತ್ರಗಳಲ್ಲಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್‌ಗೆ ಎಸ್‌ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ .
ಈ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ ಅಲ್ಲು ಅರವಿಂದ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅಲ್ಲು ಅರ್ಜುನ್ ಈ ಬಾರಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಚಿತ್ರ ಥಿಯೇಟರ್ ಗೆ ಬರುವುದಿಲ್ಲ. ಬದಲಾಗಿ ಸಿನಿಮಾವನ್ನು ಫೆಬ್ರವರಿ 6 ರಂದು ರಾತ್ರಿ 8 ಗಂಟೆಗೆ Dhinchaak ಟಿವಿ ಚಾನೆಲ್‌ನಲ್ಲಿ ಬಿಡಗಡೆ ಮಾಡಲಾಗುತ್ತಿದೆ.
ಪುಷ್ಪಾ ಚಿತ್ರದ ವಿಶೇಷ ಪಾತ್ರದ ಮುಖೇನ ಅಲ್ಲು ಅರ್ಜುನ್ ಮತ್ತಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಎಲ್ಲ ಭಾಷೆಗಳ ನಂತರ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರ ಸಾಕಷ್ಟು ಹೆಸರು ಗಳಿಸಿಕೊಂಡಿತು.