ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅಕ್ಷಯ್ ಕುಮಾರ್ ಹೀಗ್ ಮಾಡ್ತಾರಂತೆ!

First Published Jun 7, 2020, 1:42 PM IST

ಬಾಲಿವುಡ್‌ನ ಅತ್ಯಂತ ಯಶಸ್ವಿ ತಾರೆಗಳ ಬಗ್ಗೆ ಮಾತಾನಾಡುವಾಗ ಅಕ್ಷಯ್ ಕುಮಾರ್ ಹೆಸರು ಮೊದಲ ಸಾಲಲ್ಲಿ ಇರುತ್ತದೆ. 2019ರಲ್ಲಿ ಇವರ ನಾಲ್ಕು ಹಿಟ್ ಚಿತ್ರಗಳಲ್ಲಿ 3 ಸಿನಿಮಾಗಳು 200 ಕೋಟಿ ಗಡಿ ದಾಟಿದೆ. ಫೋರ್ಬ್ಸ್ 2020ರ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸೆಲೆಬ್ರೆಟಿ ಎಂದರೆ ಅಕ್ಷಯ್ ಕುಮಾರ್. ಹಲವು ಬಾಲಿವುಡ್ ಮತ್ತು ಹಾಲಿವುಡ್ ತಾರೆಯರನ್ನು ಹಿಂದಿಕ್ಕಿ ಪಟ್ಟಿಯಲ್ಲಿ 52ನೇ ಸ್ಥಾನವನ್ನು ಪಡೆದಿದ್ದಾರೆ. ವರದಿಯ ಪ್ರಕಾರ, 2019 ಜೂನ್‌ನಿಂದ ಮೇ 2020 ರವರೆಗೆ ಅವರ ಗಳಿಕೆ 5 48.5 ಮಿಲಿಯನ್, ಅಂದರೆ ಸುಮಾರು 366 ಕೋಟಿ ರೂ. ಅಂದಹಾಗೆ, 52ನೇ ವಯಸ್ಸಿನಲ್ಲಿಯೂ  ಫಿಟ್ ಆಗಿ ಕಾಣಿಸುವ ಅಕ್ಷಯ್‌ರ ರಹಸ್ಯವೇನು? ಇಲ್ಲಿದೆ ನಟನ ಡಯಟ್‌, ವರ್ಕೌಟ್‌ ಹಾಗೂ ಫಿಟ್ನೆಸ್‌ ವಿವರ.