ನಟಿ ಸಮಂತಾ ಮಾಜಿ ಗಂಡನ ಮನೆ ಅಕ್ಕಿನೇನಿ ಕುಟುಂಬಕ್ಕೂ, ತಮನ್ ಕುಟುಂಬಕ್ಕಿದೆ ವಿಶೇಷ ನಂಟು!
ತೆಲುಗು ಸಿನಿಮಾ ಇತಿಹಾಸದಲ್ಲಿ ಅಕ್ಕಿನೇನಿ ಕುಟುಂಬದ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಅವರ ಹೆಸರು ಚಿರಸ್ಥಾಯಿ ಆಗಿದೆ. ನಟಿ ಸಮಂತಾ ಅವರ ಮಾಜಿ ಗಂಡನ ಮನೆ ಅಕ್ಕಿನೇನಿ ಕುಟುಂಬಕ್ಕೂ ಹಾಗೂ ತಮನ್ ಕುಟುಂಬಕ್ಕೂ ತಲೆ ತಲೆಮಾರುಗಳ ನಂಟು ಇದೆ. ಇಲ್ಲಿದೆ ನೋಡಿ ಕುಟುಂಬಗಳ ಬಾಂಧವ್ಯದ ಮಾಹಿತಿ..
ತೆಲುಗು ಸಿನಿಮಾ ಇತಿಹಾಸದಲ್ಲಿ ಎ.ಎನ್.ಆರ್ ಅವರ ಹೆಸರು ಚಿರಸ್ಥಾಯಿ ಆಗಿದೆ. ತೆಲುಗು ಸಿನಿಮಾಗೆ ಮೊದಲ ಗುರುತನ್ನು ತಂದುಕೊಟ್ಟ ನಟ ಎ.ಎನ್.ಆರ್ ಆಗಿದ್ದಾರೆ. ತೆಲುಗು ಸಿನಿಮಾಗಾಗಿ ಚೆನ್ನೈನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ತೆಲುಗು ಚಿತ್ರರಂಗದಲ್ಲಿ ನೂರಾರು ವೈವಿಧ್ಯಮಯ ಚಿತ್ರಗಳನ್ನು ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ಎ.ಎನ್.ಆರ್ ತೆಲುಗು ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಪ್ರತಿಯೊಬ್ಬರ ವೃತ್ತಿಜೀವನದಲ್ಲಿ ಸಹಕರಿಸಿದ, ಸಹಾಯ ಮಾಡಿದ ವ್ಯಕ್ತಿಗಳು ಕೆಲವರು ಇರುತ್ತಾರೆ. ಎ.ಎನ್.ಆರ್ ಅವರ ಜೀವನದಲ್ಲಿ ಕೂಡ ಅಂತಹವರು ಇದ್ದರು. ಎ.ಎನ್.ಆರ್ ಅವರಿಗೆ ಪ್ರಸ್ತುತ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಸಂಗೀತ ನಿರ್ದೇಶಕ ತಮನ್ ಕುಟುಂಬದೊಂದಿಗೆ ಬಿಡಿಸಲಾರದ ನಂಟಿದೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರಿಂದ ಹಿಡಿದು ಪ್ರಸ್ತುತ ನಾಗ ಚೈತನ್ಯ, ಅಖಿಲ್ ವರೆಗೆ ಅಕ್ಕಿನೇನಿ ಕುಟುಂಬ ತಮನ್ ಕುಟುಂಬಕ್ಕೆ ಋಣಿಯಾಗಿದೆ ಎಂದು ಹೇಳುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: ಟಾಲಿವುಡ್ ಅಕ್ಕಿನೇನಿ ನಾಗಾರ್ಜುನರಿಗೆ ಮುತ್ತಿನಂಥಾ ಹೆಂಡತಿಯಿದ್ದರೂ ಕನ್ನಡದ ನಟಿಯೇ ಇಷ್ಟವಂತೆ!
ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ನಾಯಕನಾಗಿ ಪರಿಚಯಿಸಿದವರು ನಿರ್ದೇಶಕ ಕಂ ನಿರ್ಮಾಪಕ ಘಂಟಸಾಲ ಬಲರಾಮಯ್ಯ. ಎ.ಎನ್.ಆರ್ ಅವರ ಪ್ರತಿಭೆಯನ್ನು ಗುರುತಿಸಿದ ಘಂಟಸಾಲ ಬಲರಾಮಯ್ಯ ಅವರು 1942 ರಲ್ಲಿ ತಾವು ನಿರ್ದೇಶಿಸಿದ ಶ್ರೀ ಸೀತಾರಾಮ ಜನನಂ ಚಿತ್ರದಲ್ಲಿ ಅವಕಾಶ ನೀಡಿದರು. ಎ.ಎನ್.ಆರ್ ನಾಯಕನಾಗಿ ವೃತ್ತಿಜೀವನ ಆರಂಭಿಸಿದ್ದು ಈ ಚಿತ್ರದಿಂದಲೇ. ನಂತರ ಎ.ಎನ್.ಆರ್ ಅನೇಕ ಚಿತ್ರಗಳಲ್ಲಿ ಘಂಟಸಾಲ ಬಲರಾಮಯ್ಯ ನಿರ್ದೇಶನ ಮತ್ತು ನಿರ್ಮಾಣದಲ್ಲಿ ನಟಿಸಿದರು.
ಅಂತಹ ಘಂಟಸಾಲ ಬಲರಾಮಯ್ಯ ಇಂದಿನ ಸಂಗೀತ ನಿರ್ದೇಶಕ ತಮನ್ ಅವರ ಅಜ್ಜ. ಈ ವಿಷಯವನ್ನು ಎ.ಎನ್.ಆರ್ ಸ್ವತಃ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಬಲರಾಮಯ್ಯ ಕೂಡ ತಮನ್ ರಂತೆ ದಪ್ಪಗಿದ್ದರು. ಅವರ ಹೋಲಿಕೆ ತಮನ್‌ಗೆ ಬಂದಿದೆ ಎಂದು ತಮಾಷೆಯಾಗಿ ನಾಗೇಶ್ವರ ರಾವ್ ಹೇಳಿದ್ದಾರೆ. ತಮನ್ ಅವರ ನಿಜವಾದ ಹೆಸರು ಘಂಟಸಾಲ ಸಾಯಿ ಶ್ರೀನಿವಾಸ್ ಶಿವಕುಮಾರ್. ಬಲರಾಮಯ್ಯ ಅವರ ಮಗ ಶಿವಕುಮಾರ್.. ಅವರ ಮಗನೇ ತಮನ್. ಸಿನಿಮಾಗಳಿಗೆ ಬಂದ ನಂತರ ತಮ್ಮ ಹೆಸರನ್ನು ಎಸ್. ತಮನ್ ಎಂದು ಬದಲಾಯಿಸಿಕೊಂಡರು. ಎಸ್ ಎಂದರೆ ತಮ್ಮ ತಂದೆಯ ಹೆಸರು ಶಿವಕುಮಾರ್ ಎಂದರ್ಥ. ತಮನ್ ಹೆಸರಿನ ಹಿಂದೆ ಇಷ್ಟೊಂದು ಇತಿಹಾಸವಿದೆ.
ಸಂಗೀತ ನಿರ್ದೇಶಕ ತಮನ್
ತಮನ್ ತಮ್ಮ ವೃತ್ತಿಜೀವನದಲ್ಲಿ ಅಕ್ಕಿನೇನಿ ಕುಟುಂಬದಲ್ಲಿ ನಾಯಕರಾದ ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರಗಡ, ಗ್ರೀಕುವೀರುಡು, ತಡಖಾ, ಅಖಿಲ್ ಮುಂತಾದ ಚಿತ್ರಗಳಿಗೆ ತಮನ್ ಸಂಗೀತ ನೀಡಿದ್ದಾರೆ. ಇದು ತಮನ್ ಕುಟುಂಬಕ್ಕೂ ಎ.ಎನ್.ಆರ್ ಕುಟುಂಬಕ್ಕೂ ಇರುವ ಸಂಬಂಧ ಆಗಿದೆ.