- Home
- Entertainment
- Cine World
- ಟಾಲಿವುಡ್ ಅಕ್ಕಿನೇನಿ ನಾಗಾರ್ಜುನರಿಗೆ ಮುತ್ತಿನಂಥಾ ಹೆಂಡತಿಯಿದ್ದರೂ ಕನ್ನಡದ ನಟಿಯೇ ಇಷ್ಟವಂತೆ!
ಟಾಲಿವುಡ್ ಅಕ್ಕಿನೇನಿ ನಾಗಾರ್ಜುನರಿಗೆ ಮುತ್ತಿನಂಥಾ ಹೆಂಡತಿಯಿದ್ದರೂ ಕನ್ನಡದ ನಟಿಯೇ ಇಷ್ಟವಂತೆ!
ತೆಲುಗು ಚಿತ್ರರಂಗದ ಮನ್ಮಥನೆಂದೇ ಖ್ಯಾತಿಯಾಗಿರುವ ಕಿಂಗ್ ಅಕ್ಕಿನೇನಿ ನಾಗಾರ್ಜುನ ಅವರು ಸಿನಿಮಾ ಮಾಡುತ್ತಿರುವಾಗಲೇ ಅಮಲಾ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಅವರಿಗೆ ಈಗಲೂ ಕನ್ನಡ ಮೂಲದ ನಟಿ ಅಂದರೆ ಭಾರೀ ಇಷ್ಟವಂತೆ. ಈ ಬಗ್ಗೆ ಸ್ವತಃ ನಾಗಾರ್ಜುನ ಅವರೇ ರಿವೀಲ್ ಮಾಡಿದ್ದಾರೆ.

ಕಿಂಗ್ ನಾಗಾರ್ಜುನ ಟಾಲಿವುಡ್ ಮನ್ಮಥ. ಈಗಲೂ ಅದೇ ಟ್ಯಾಗ್ ಮೇಂಟೇನ್ ಮಾಡ್ತಿದ್ದಾರೆ. 70ಕ್ಕೆ ಹತ್ತಿರವಾದ್ರೂ ಯುವಕನಂತೆ ಕಾಣ್ತಾರೆ. ಟಾಲಿವುಡ್‌ನಲ್ಲಿ ಬೇರೆ ಯಾವ ನಟನಿಗೂ ಸಾಧ್ಯವಿಲ್ಲದ ಫಿಸಿಕ್ ಅವರದ್ದು. ಒಂದು ಕಾಲದಲ್ಲಿ ಲವ್ ಸ್ಟೋರಿ ಮಾಡಿ ಹುಡುಗಿಯರ ನೆಚ್ಚಿನ ನಟ ಆಗಿದ್ರು. `ಮನ್ಮಥುಡು` ಸಿನಿಮಾದಿಂದ ಮನ್ಮಥ ಆಗಿದ್ದಾರೆ.
ಅನೇಕ ಹುಡುಗಿಯರು ನಾಗಾರ್ಜುನರನ್ನ ಇಷ್ಟಪಡ್ತಾರೆ. ಮೂರು ತಲೆಮಾರಿನವರು ಅವರ ಫ್ಯಾನ್ಸ್. ಹಿಂದಿನ ರಮ್ಯಕೃಷ್ಣ, ಸೌಂದರ್ಯ, ಅನುಷ್ಕ, ತ್ರಿಷ, ಪ್ರಿಯಾಮಣಿ, ಈಗಿನ ನಟಿಯರು ಕೂಡ ನಾಗ್ ಗ್ಲಾಮರ್‌ಗೆ ಫ್ಯಾನ್ಸ್. ಮೂರು ತಲೆಮಾರಿನ ಹುಡುಗಿಯರ ಮನಗೆದ್ದ ನಾಗಾರ್ಜುನ ಒಬ್ಬ ಕನ್ನಡ ಮೂಲದ ನಟಿಯನ್ನು ನೋಡಿ ಫಿದಾ ಆಗಿದ್ದಾರಂತೆ. ಆಕೆಯ ಸೌಂದರ್ಯಕ್ಕೆ ಮೆಸ್ಮರೈಸ್ ಆಗಿದ್ದಾರಂತೆ. ಆಕೆಯ ಮುಖದಲ್ಲಿನ ಹೊಳಪು ತನ್ನನ್ನು ಆಕರ್ಷಿಸಿದೆ ಅಂತ ಹೇಳಿದ್ದಾರೆ.
ಮನ್ಮಥನನ್ನೇ ಫಿದಾ ಮಾಡಿದ ನಟಿ ಸ್ವೀಟಿ ಅನುಷ್ಕ. ಆಕೆಯನ್ನು ನೋಡಿದಾಗ ಫ್ಯೂಸ್ ಹಾರಿಹೋಯ್ತು ಅಂತ ಹೇಳಿದ್ದಾರೆ ನಾಗಾರ್ಜುನ. ಅಮಲ, ಟಬು ನಟಿಯರ ಜೊತೆ ನಟಿಸಿದ ನಾಗಾರ್ಜುನ ಅಮಲರನ್ನೇ ಮದುವೆ ಆದ್ರು. ಆದರೆ, ಈಗ ಅನುಷ್ಕಳ ಬಗ್ಗೆ ಪ್ರಶಂಸೆ ಮಾಡಿದ್ದಾರೆ. ಅತ್ಯಂತ ಸುಂದರ ನಟಿ ಯಾರು ಅಂತ ಕೇಳಿದಾಗ ಅನುಷ್ಕ ಅಂತ ಹೇಳಿದ್ದಾರೆ.
ಆಕೆಯ ಸೌಂದರ್ಯ ಹೊಳೆಯುತ್ತಿದೆ, ಅದು ತನ್ನನ್ನು ಆಕರ್ಷಿಸಿದೆ ಅಂತ ಹೇಳಿದ್ದಾರೆ. ಅಮಲ ಹೆಸರು ಹೇಳಿದ್ರೆ ಬೋರ್ ಅಂತ, ಆದ್ರೆ ತಾನು ಮೆಸ್ಮರೈಸ್ ಆಗಿದ್ದು ಅನುಷ್ಕಗೆ ಅಂತ ಹೇಳಿದ್ದಾರೆ. ಜಯಪ್ರದ ಶೋನಲ್ಲಿ ನಾಗಾರ್ಜುನ ಇದನ್ನ ಹೇಳಿದ್ದಾರೆ.
ಅನುಷ್ಕಳನ್ನ ಸಿನಿಮಾಗೆ ಪರಿಚಯಿಸಿದ್ದು ನಾಗಾರ್ಜುನ. ಯೋಗ ಟೀಚರ್ ಆಗಿದ್ದ ಅನುಷ್ಕಳನ್ನ 'ಸೂಪರ್' ಸಿನಿಮಾಗೆ ನಟಿಯಾಗಿ ಆಯ್ಕೆ ಮಾಡಿದ್ದರು. ಆಕೆಗೆ ಆಡಿಷನ್ ಮಾಡಿ ಆಯ್ಕೆ ಮಾಡೋಣ ಅಂದ್ರಂತೆ ಪೂರಿ ಜಗನ್ನಾಥ್. ಆದರೆ ನಾಗಾರ್ಜುನ ಅವರು ಬೇಡ, ನಾವೇ ಟ್ರೈನಿಂಗ್ ಕೊಡೋಣ ಎಂದರಂತೆ.
ಆಗಲೇ ಆಕೆಯ ಸೌಂದರ್ಯಕ್ಕೆ ನಾಗಾರ್ಜುನ ಮಾರು ಹೋಗಿದ್ರೇನೋ. ಅದಕ್ಕೆ ಆಕೆಯನ್ನ ನಟಿಯಾಗಿ ಆಯ್ಕೆ ಮಾಡಿದರು. ಆಕೆಯ ಜೊತೆ ಹೆಚ್ಚು ಸಿನಿಮಾ ಮಾಡಿದ್ದಾರೆ. ಐದಾರು ಸಿನಿಮಾಗಳಲ್ಲಿ ಅನುಷ್ಕ ಜೊತೆ ನಟಿಸಿದ್ದಾರೆ. ಎತ್ತರ, ಗ್ಲಾಮರ್, ನಟನೆ, ಮುಗ್ಧತೆ ನಾಗಾರ್ಜುನ ಅವರನ್ನ ಆಕರ್ಷಿಸಿರಬಹುದು.
'ಸೂಪರ್' ಸಿನಿಮಾದಿಂದ ಟಾಲಿವುಡ್‌ಗೆ ಬಂದ ಅನುಷ್ಕ ಹಿಂತಿರುಗಿ ನೋಡಬೇಕಾಗಿಲ್ಲ. ಈ ಸಿನಿಮಾ ಸೋತರೂ ಆಕೆಗೆ ಆಫರ್‌ಗಳು ಬಂದವು. 'ಮಹಾನಂದಿ' ಚಿತ್ರದಿಂದ ಗೆಲುವು, 'ವಿಕ್ರಮಾರ್ಕುಡು' ದಿಂದ ದೊಡ್ಡ ಬ್ರೇಕ್ ಸಿಕ್ತು.
'ಅರುಂಧತಿ', 'ರುದ್ರಮದೇವಿ', 'ಬಾಹುಬಲಿ' ಚಿತ್ರಗಳಲ್ಲಿ ಅನುಷ್ಕಾ ಮಿಂಚಿದ್ದಾರೆ. ನಾಗಾರ್ಜುನ ಜೊತೆ ಅನುಷ್ಕಾ ಅವರು 'ಡಾನ್', 'ಕಿಂಗ್' (ಹಾಡು), 'ಕೆಡಿ' (ಹಾಡು), 'ರಗಡ', 'ಧಮರುಗಂ', 'ಓಂ ನಮೋ ವೆಂಕಟೇಶಾಯ' ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅನುಷ್ಕ 'ಘಾಟಿ' ತೆಲುಗು ಸಿನಿಮಾ ಮತ್ತು ಮಲಯಾಳಂ ಸಿನಿಮಾ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.