ಐಶ್ವರ್ಯಾ ರೈ ಮದುವೆ ಸೀರೆಗೆ 75 ಲಕ್ಷ ರೂ; ಇದು ಸುಳ್ಳು ಎನ್ನೋದಾ ಡಿಸೈನರ್
ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಮದುವೆಯ ಉಡುಪನ್ನು ಇಲ್ಲಿಯವರೆಗಿನ ಅತ್ಯಂತ ದುಬಾರಿ ವಧುವಿನ ಲುಕ್ ಎಂದು ಪರಿಗಣಿಸಲಾಗಿದೆ. ಆದರೆ, ಈಗ ಅದರ ವಿನ್ಯಾಸಕಿ ನೀತಾ ಲುಲ್ಲಾ ಐಶ್ವರ್ಯಾ ಅವರ ಸೀರೆಯ ಬೆಲೆಯ ಸುತ್ತ ಇರುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಕೆಲವು ಸಮಯದ ಹಿಂದೆ ಐಶ್ವರ್ಯಾ ರೈ ಅವರ ಮದುವೆ ಉಡುಪಿನ ಬಗ್ಗೆ ವರದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ ನೀನಾ ಲುಲ್ಲಾ. ಹಾಗಾದರೆ ಅದರ ನಿಜವಾದ ಬೆಲೆ ಎಷ್ಷು ಗೊತ್ತಾ?
ನೀತಾ ಲುಲ್ಲಾ ವಿನ್ಯಾಸಗೊಳಿಸಿದ ನಟಿ ಐಶ್ವರ್ಯಾ ರೈ ಅವರ ಮದುವೆಯ ದಿರಿಸು ರೂ. 75 ಲಕ್ಷ. ಎಂದು ಹಲವು ವರದಿಗಳು ಬಂದಿವೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ನೀತಾ ಲುಲ್ಲಾ ಅವರು ಐಶ್ವರ್ಯಾ ರೈ ಅವರ ಮದುವೆ ಉಡುಪಿನ ಬೆಲೆ ರೂ. 75 ಲಕ್ಷಗಳು ಎಂಬುದು ರೂಮರ್ ' ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದಾರೆ.
ಐಶ್ವರ್ಯಾ ತಮ್ಮ ಮದುವೆಯಂದು 75 ಲಕ್ಷ ರೂಪಾಯಿ ಮೌಲ್ಯದ ಉಡುಪನ್ನು ಧರಿಸಿದ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನೀತಾ ಲುಲ್ಲಾ ಅವರನ್ನು ಕೇಳಿದಾಗ, ಡಿಸೈನರ್ ನಗುತ್ತಾ :'ನಿಜವಾಗಿಯೂ? ನೀವು ಈ ಸುಳ್ಳನ್ನು ನಂಬಿದ್ದೀರಾ? ಎಂದು ಹೇಳಿದರು.
ನೀವೇ ಅಂದಾಜು ಮಾಡಿ ಐಶ್ವರ್ಯಾ ಅವರು ಕನಿಷ್ಠ ಕಾಂಜೀವರಂ ಸೀರೆಯನ್ನು ಧರಿಸಿದ್ದರು, ಇದು ಒಂದು ಕೋಟಿ ಅಥವಾ 75 ಲಕ್ಷ ವೆಚ್ಚವಾಗುವುದಿಲ್ಲ ಎಂದು ಅವರು ಹೇಳಿದರು.
ಐಶ್ವರ್ಯಾ ಅವರ ಮೂಲ ಸೀರೆಯು ಉತ್ತಮವಾಗಿ ಅಳವಡಿಸಲಾದ ಕಸೂತಿ ಕುಪ್ಪಸ ಮತ್ತು ದೇವಾಲಯದ ಆಭರಣಗಳಿಂದ ಪೂರಕವಾಗಿದೆ ಎಂದು ಹೇಳಿದರು. ಆಕೆಯ ಧರಸಿದ್ದ ಆಭರಣಗಳು ಸೇರಿದಂತೆ ಜನರು ಮೊತ್ತವನ್ನು ಲೆಕ್ಕ ಹಾಕುತ್ತಿದ್ದಾರೆಯೇ ಎಂದು ಅವರು ಕೇಳಿದ್ದರು.
'ಕಾಂಜೀವರಂ ಸೀರೆ ಬೆಲೆ ಎಷ್ಟು? ಇದು ಒಂದು ಕೋಟಿ ಅಥವಾ 75 ಲಕ್ಷದಷ್ಟು ವೆಚ್ಚವಾಗಲಾರದು ಅಲ್ಲವೇ? ಚೆನ್ನಾಗಿ ಕತ್ತರಿಸಿದ, ಚೆನ್ನಾಗಿ ಅಳವಡಿಸಲಾದ ಕಸೂತಿ ಜರ್ಡೋಜಿ ಕುಪ್ಪಸ ಮತ್ತು ಆಭರಣಗಳೊಂದಿಗೆ ಮೂಲ ಸೀರೆ ಬೆಲೆ ಅಷ್ಟಾಗೋಲ್ಲ ಎಂದಿದ್ದಾರೆ.
ಐಶ್ವರ್ಯಾ ರೈ ಸಾಂಪ್ರದಾಯಿಕ ಹಳದಿ ಮತ್ತು ಚಿನ್ನದ ಕಂಜೀವರಂ ಸೀರೆ ಧರಿಸಿದ್ದರು, ಹರಳು ಮತ್ತು ಥ್ರೆಡ್ ವರ್ಕ್ ಕಸೂತಿ ಒಳಗೊಂಡಿತ್ತು. ಅವರು ಜಡೆ ಹೆಣೆದು ಮಲ್ಲಿಗೆ ಜೊತೆ ಕೇಶ ವಿನ್ಯಾಸವನ್ನು ಮಾಡಿಕೊಂಡಿದ್ದರು ಮತ್ತು ಸೊಗಸಾದ ಚಿನ್ನದ ಟೆಂಬಲ್ ಆಭರಣ ವನ್ನು ಮ್ಯಾಚ್ ಮಾಡಿಕೊಂಡಿದ್ದರು.
ಅದೇ ಸಂದರ್ಶನದಲ್ಲಿ, ಐಶ್ವರ್ಯಾ ಅವರ ಮದುವೆಯ ಉಡುಪಿನ ವೆಚ್ಚ ಬಹಿರಂಗಪಡಿಸಲು ನೀತಾ ಅವರನ್ನು ಕೇಳಿದಾಗ, ನನಗೆ ನೆನಪಿಲ್ಲ ಎಂದು, ನಯವಾಗಿ ಉತ್ತರಿಸಿದರು.
ಇದಕ್ಕೂ ಮೊದಲು, ಸಂದರ್ಶನವೊಂದರಲ್ಲಿ, ಐಶ್ವರ್ಯಾ ರೈ ಅವರ ವಿವಾಹದ ಸ್ಟೈಲಿಸ್ಟ್, ನೀತಾ ಲುಲ್ಲಾ ಅವರು ಮಾಜಿ ವಿಶ್ವ ಸುಂದರಿ ಮದುವೆಗೆ ಮಾಸ್ಟರ್‌ಪೀಸ್ ಉಡುಪನ್ನು ರಚಿಸುವ ಹಿಂದಿನ ಕಥೆಯನ್ನು ಬಹಿರಂಗಪಡಿಸಿದರು.
ವಿಶ್ವ ಸುಂದರಿ ತಮ್ಮ ಮದುವೆಯಲ್ಲಿ ಅದ್ಥುತವಾಗಿ ಕಾಣಿಸಲು ಡಿಸೈನರ್ ಉಡುಪು ತಯಾರಿಸಿದ ಬಗೆ ಸೇರಿ, ಮಾಡಿದ ಎಲ್ಲ ಪ್ಲ್ಯಾನ್ ಹೇಗಿತ್ತು ಎಂಬುದನ್ನು ರಿವೀಲ್ ಮಾಡಿದ್ದಾರೆ.