ಐಶ್ವರ್ಯಾ ರೈ ಒಟ್ಟು ಆಸ್ತಿ ಎಷ್ಟು ಗೊತ್ತಾ? ದಿನವೊಂದರ ಕಾರ್ಯಕ್ರಮಕ್ಕೆ ನಟಿಯ ಸಂಭಾವನೆ ಕೇಳಿದ್ರೆ ಬೆರಗಾಗ್ತೀರಿ!
ವಿಶ್ವದ ಅತಿ ಸುಂದರ ಮಹಿಳೆ ಎನಿಸಿಕೊಂಡಿರುವ ಐಶ್ವರ್ಯಾ ರೈ ಬಾಲಿವುಡ್‌ನ ಬಹಳ ಸುಂದರ ನಟಿಯರಲ್ಲೊಬ್ಬರು. ಈ ಕರಾವಳಿ ಚೆಲುವೆ ಒಟ್ಟು ಆಸ್ತಿ ಎಷ್ಟು? ಚಿತ್ರವೊಂದಕ್ಕೆ ನಟಿಯ ಸಂಭಾವನೆ ಎಷ್ಟು? ರೈ ಬಳಿ ಇರೋ ದುಬಾರಿ ವಸ್ತುಗಳೇನೇನು? ಎಲ್ಲವನ್ನೂ ನೋಡೋಣ ಬನ್ನಿ..
ವಿಶ್ವದ ಅತಿ ಸುಂದರ ಮಹಿಳೆ ಎನಿಸಿಕೊಂಡಿರುವ ಐಶ್ವರ್ಯಾ ರೈ ಬಾಲಿವುಡ್‌ನ ಬಹಳ ಸುಂದರ ನಟಿಯರಲ್ಲೊಬ್ಬರು. ಈ ಕರಾವಳಿ ಚೆಲುವೆ ಒಟ್ಟು ಆಸ್ತಿ ಎಷ್ಟು? ಚಿತ್ರವೊಂದಕ್ಕೆ ನಟಿಯ ಸಂಭಾವನೆ ಎಷ್ಟು? ರೈ ಬಳಿ ಇರೋ ದುಬಾರಿ ವಸ್ತುಗಳೇನೇನು? ಎಲ್ಲವನ್ನೂ ನೋಡೋಣ ಬನ್ನಿ..
1994ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಮತ್ತು ಪದ್ಮಶ್ರೀ (2009) ಮತ್ತು ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ (2012) ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ನಟಿಯು ನವೆಂಬರ್ 1, 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು.
ಐಶ್ವರ್ಯಾ ರೈ ಬಚ್ಚನ್ 50 ನೇ ವಯಸ್ಸಿನಲ್ಲಿಯೂ ಸಹ ಆ ಸೌಂದರ್ಯ ಮತ್ತು ನಟನಾ ಪ್ರತಿಭೆಯನ್ನು ಹೊಂದಿದ್ದಾರೆ ಮತ್ತು ವರದಿಗಳ ಪ್ರಕಾರ ನಟಿಯ ವೈಯಕ್ತಿಕ ಒಟ್ಟು ಆಸ್ತಿ 776 ಕೋಟಿ ರೂ.ಗಳಾಗಿವೆ.
ಐಶ್ವರ್ಯಾ ರೈ ಚಿತ್ರವೊಂದಕ್ಕೆ 10-12 ಕೋಟಿ ರೂ.ಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು, ಯಾವುದಾದರೂ ಸಾರ್ವಜನಿಕ ಸಮಾರಂಭವಾದರೆ ದಿನವೊಂದಕ್ಕೆ 5-6 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಾರೆ.
ಇಷ್ಟೆಲ್ಲ ಆಸ್ತಿ ಇರುವ ಐಶ್ವರ್ಯಾ ಬಳಿ ಇರುವ ಅತಿ ದುಬಾರಿ ವಸ್ತುಗಳನ್ನು ಹಾಗೂ ನಟಿ ಯಾವುದರಲ್ಲಿ ಹೂಡಿಕೆ ಮಾಡಿದ್ದಾರೆ ನೋಡೋಣ.
2021ರಲ್ಲಿ ನಟಿಯು ಪಾಸಿಬಲ್ ಎಂಬ ನ್ಯೂಟ್ರಿಶನ್ ಬೇಸ್ಡ್ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಇನ್ನು ಬೆಂಗಳೂರು ಮೂಲದ ಆ್ಯಂಬಿ ಎಂಬ ಸ್ಟಾರ್ಟಪ್‌ನಲ್ಲಿ 1 ಕೋಟಿ ಹೂಡಿಕೆ ಮಾಡಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿರುವ ಜಲ್ಸಾದಲ್ಲಿ ವಾಸಿಸುತ್ತಿದ್ದರು. ಮತ್ತೀಗ ಬಚ್ಚನ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಅವರು ದುಬೈನಲ್ಲಿ 15 ಕೋಟಿ ರೂ. ಬೆಲೆಯ ಐಷಾರಾಮಿ ಆಸ್ತಿಯನ್ನು ಹೊಂದಿದ್ದಾರೆ. ದುಬೈನ ಅತ್ಯಂತ ಐಷಾರಾಮಿ ಸ್ಥಳಗಳಲ್ಲಿ ಒಂದಾದ ಜುಮೇರಾ ಗಾಲ್ಫ್ ಎಸ್ಟೇಟ್‌ನಲ್ಲಿರುವ ಸ್ಯಾಂಕ್ಚುರಿ ಫಾಲ್ಸ್‌ನಲ್ಲಿ ಈ ಮನೆಯಿದೆ.
ಹೂಡಿಕೆಯ ವಿಷಯಕ್ಕೆ ಬಂದಾಗ ಮುಂಬೈನಲ್ಲಿ ಕೆಲವು ಲಾಭದಾಯಕ ಆಸ್ತಿಗಳನ್ನು ಪಡೆಯಲು ನಟಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. 2015 ರಲ್ಲಿ ಐಶ್ವರ್ಯಾ ಬಾಂದ್ರಾದಲ್ಲಿ 5BHK ಬಂಗಲೆಯನ್ನು ಖರೀದಿಸಿದಾಗ ಅದರ ಅಂದಾಜು ಮೊತ್ತ ರೂ. 21 ಕೋಟಿ.
ಐಶ್ವರ್ಯಾ ರೈ ಬಚ್ಚನ್ ಅವರ ಕಾರ್ ಕಲೆಕ್ಷನ್ ನೋಡಿದರೆ ನಟಿ ಬಾಲಿವುಡ್‌ನಲ್ಲಿ ಕೆಲವು ಅತ್ಯುತ್ತಮ ಕಾರ್‌ಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಐಶ್ವರ್ಯಾ ಅವರು ರೋಲ್ಸ್ ರಾಯ್ಸ್ ಘೋಸ್ಟ್ (ರೂ. 6.95 ಕೋಟಿ), ಆಡಿ ಎ8ಎಲ್ (ರೂ. 1.34 ಕೋಟಿ), ಮರ್ಸಿಡಿಸ್-ಬೆನ್ಜ್ ಎಸ್ 500 (ರೂ. 1.98 ಕೋಟಿ), ಮರ್ಸಿಡಿಸ್ ಬೆಂಜ್ ಎಸ್ 350ಡಿ ಕೂಪೆ (ರೂ. 1.60 ಕೋಟಿ), ಲೆಕ್ಸಸ್ ಲೀ. 570 (ರೂ. 2.84 ಕೋಟಿ) ಸೇರಿದಂತೆ ಇನ್ನೂ ಅನೇಕ ಕಾರ್ ಕಲೆಕ್ಷನ್ ಹೊಂದಿದ್ದಾರೆ.
ಹೆಚ್ಚಿನ ನಟಿಯರಂತೆಯೇ, ಐಶ್ವರ್ಯಾ ರೈ ಬಚ್ಚನ್ ಕೂಡ ಅತಿ ದುಬಾರಿ ಬ್ಯಾಗ್‌ಗಳ ಗಣ್ಯ ಸಂಗ್ರಹವನ್ನು ಹೊಂದಿದ್ದಾರೆ. ಅವರ ಪ್ರಸಿದ್ಧ ಡಿಯರ್ ಸ್ಲಿಂಗ್ ಬ್ಯಾಗ್ ಬೆಲೆ 2.2 ಲಕ್ಷ ರೂ.
ಐಶ್ವರ್ಯಾ ರೈ ಬಚ್ಚನ್ ಮದುವೆಯ ಸೀರೆ ನಿಜವಾದ ಚಿನ್ನದಿಂದ ಮಾಡಲ್ಪಟ್ಟಿತ್ತು. ಏಸ್ ಫ್ಯಾಶನ್ ಡಿಸೈನರ್ ನೀತಾ ಲುಲ್ಲಾ ಅವರು ಸುಂದರವಾದ ಉಡುಪನ್ನು ವಿನ್ಯಾಸಗೊಳಿಸಿದರು. ಸೀರೆಯ ಬೆಲೆ ಸುಮಾರು ರೂ. 75 ಲಕ್ಷ.