ಮಣಿರತ್ನಂ ಚಿತ್ರ ಶೂಟಿಂಗ್‌ನಲ್ಲಿರುವ ಐಶ್ವರ್ಯಾ ರೈ, ಫೋಟೋ ಶೇರ್‌ ಮಾಡಿದ ಕೋ ಸ್ಟಾರ್‌!

First Published Jan 29, 2021, 5:07 PM IST

ಕೆಲವು ದಿನಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್ ಅವರ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಐಶ್ವರ್ಯಾ ರೈ ಹೈದರಾಬಾದ್‌ನಲ್ಲಿದ್ದಾರೆ. ವಾಸ್ತವವಾಗಿ ಇಲ್ಲಿ ಅವರು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈಗ ಐಶ್ವರ್ಯಾ ಅವರ ಹೊಸ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಸಿನಿಮಾ ಶೂಟಿಂಗ್ ನಂತರ ತೆಗೆಯಲಾಗಿದೆ ಈ ಫೋಟೋ.