- Home
- Entertainment
- Cine World
- ರಜನಿಕಾಂತ್ ಜೊತೆ ನಟಿಸಲು ನಾಲ್ಕು ಬಾರಿ 'ನೋ' ಎಂದ್ರು ಮಾಜಿ ವಿಶ್ವ ಸುಂದರಿ: ಅಷ್ಟಕ್ಕೂ ರಿಜೆಕ್ಟ್ ಮಾಡಿದ್ಯಾಕೆ?
ರಜನಿಕಾಂತ್ ಜೊತೆ ನಟಿಸಲು ನಾಲ್ಕು ಬಾರಿ 'ನೋ' ಎಂದ್ರು ಮಾಜಿ ವಿಶ್ವ ಸುಂದರಿ: ಅಷ್ಟಕ್ಕೂ ರಿಜೆಕ್ಟ್ ಮಾಡಿದ್ಯಾಕೆ?
ರಜನಿಕಾಂತ್ ಜೊತೆ ಒಂದೇ ಒಂದು ಸಿನಿಮಾದಲ್ಲಾದ್ರೂ ನಟಿಸೋ ಚಾನ್ಸ್ ಸಿಗಲ್ವಾ ಅಂತಾ ಹಲವು ನಟಿಯರು ಕಾಯ್ತಿರ್ತಾರೆ. ಹೀಗಿರುವಾಗ, ಸೂಪರ್‌ಸ್ಟಾರ್‌ಗೆ ಜೋಡಿಯಾಗೋ ಅವಕಾಶ ಬಂದಾಗ, ಬರೋಬ್ಬರಿ ನಾಲ್ಕು ಸಿನಿಮಾ ಆಫರ್‌ಗಳನ್ನು ತಿರಸ್ಕರಿಸಿದ ನಟಿ ಯಾರು ಗೊತ್ತಾ?

ಇಂಡಿಯನ್ ಸಿನಿಮಾ ಸೂಪರ್ ಸ್ಟಾರ್..
ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲೇ ರಜನಿಕಾಂತ್ ಸೂಪರ್‌ಸ್ಟಾರ್. 74ನೇ ವಯಸ್ಸಲ್ಲೂ ಯುವ ನಟರಿಗೆ ಪೈಪೋಟಿ ನೀಡ್ತಿದ್ದಾರೆ. ಇಂಥಾ ಸೂಪರ್‌ಸ್ಟಾರ್ ಜೊತೆ ನಟಿಸೋ ಅವಕಾಶವನ್ನು ಒಬ್ಬ ಸ್ಟಾರ್ ನಟಿ ನಾಲ್ಕು ಬಾರಿ ತಿರಸ್ಕರಿಸಿದ್ರು. ಮಂಗಳೂರು ಮೂಲದ ಆ ನಟಿ ಯಾರು?
ಸ್ಟಾರ್ ನಟಿಗೆ ಅವಕಾಶ
1999ರಲ್ಲಿ ಬಂದ ರಜನಿಕಾಂತ್‌ರ 'ನರಸಿಂಹ' (ಪಡೆಯಪ್ಪ) ಚಿತ್ರಕ್ಕೆ ಮೊದಲು ಈ ಸ್ಟಾರ್ ನಟಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದರು. ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಈ ನಟಿ, ರಜನಿಕಾಂತ್‌ರ 'ಬಾಬಾ' ಚಿತ್ರವನ್ನೂ ರಿಜೆಕ್ಟ್ ಮಾಡಿದರು. ಹೀಗಾಗಿ ಆ ಪಾತ್ರ ಮನಿಷಾ ಕೊಯಿರಾಲ ಪಾಲಾಯ್ತು.
ಮತ್ತೆ ನೋ ಎಂದ ಮಾಜಿ ವಿಶ್ವ ಸುಂದರಿ
ನಂತರ ಬ್ಲಾಕ್‌ಬಸ್ಟರ್ ಹಿಟ್ ಆದ 'ಚಂದ್ರಮುಖಿ' ಆಫರ್ ಕೂಡ ತಿರಸ್ಕರಿಸಿದರು. ಹೀಗಾಗಿ ಆ ಪಾತ್ರ ಜ್ಯೋತಿಕಾಗೆ ಸಿಕ್ತು. ಬಳಿಕ ಶಂಕರ್ ನಿರ್ದೇಶನದ 'ಶಿವಾಜಿ' ಚಿತ್ರಕ್ಕೂ ಇದೇ ನಟಿಯನ್ನು ಕೇಳಲಾಗಿತ್ತು. ಆದರೆ ಮಾಜಿ ವಿಶ್ವ ಸುಂದರಿ ಮತ್ತೆ ನೋ ಎಂದರು. ಹೀಗೆ ನಾಲ್ಕು ಸಿನಿಮಾ ಮಿಸ್ ಮಾಡಿಕೊಂಡ ನಟಿ ಬೇರಾರೂ ಅಲ್ಲ, ಐಶ್ವರ್ಯಾ ರೈ.
ಅಭಿಮಾನಿಗಳ ಕೋಪದಿಂದ ಪಾರು
ಹೀಗೆ ನಾಲ್ಕು ರಜನಿ ಚಿತ್ರಗಳನ್ನು ತಿರಸ್ಕರಿಸಿದ ನಟಿ ಐಶ್ವರ್ಯಾ ರೈ. ಕೊನೆಗೆ ಶಂಕರ್ ನಿರ್ದೇಶನದ 'ರೋಬೋ' (ಎಂದಿರನ್) ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟರು. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯ್ತು. ಕೊನೆಗೂ ರಜನಿ ಜೊತೆ ನಟಿಸುವ ಮೂಲಕ ಐಶ್ವರ್ಯಾ, ರಜನಿಕಾಂತ್ ಅಭಿಮಾನಿಗಳ ಕೋಪದಿಂದ ಪಾರಾದರು.