ಇಲ್‌ ನೋಡಿ ಇನ್ನೊಬ್ಬಳು ಐಶ್ವರ್ಯಾ ರೈ ಕಾರ್ಬನ್‌ ಕಾಪಿ ! ಯಾರದು?

First Published Jun 7, 2020, 1:56 PM IST

ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್‌ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಅಮ್ಮುಜ್‌ ಅಮೃತಾ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಐಶ್ವರ್ಯಾರ ಸಿಸಿಮಾದ ಸೀನ್‌ ಅನ್ನು ರೀಕ್ರಿಯೇಟ್‌ ಮಾಡಿರುವ ವಿಡಿಯೋವನ್ನು ಅಮ್ಮುಜ್‌ ಅಮೃತಾ  ಟಿಕ್‌ಟಾಕ್ ಪ್ರೊಫೈಲ್‌ನಲ್ಲಿ  ಅಪ್‌ಲೋಡ್ ಮಾಡಿದ್ದಾರೆ.