ಅಂಬಾನಿ ಸ್ಕೂಲ್ ವಾರ್ಷಿಕೋತ್ಸವ: ಐಶ್ ಪುತ್ರಿ ಶಾರುಖ್ ಪುತ್ರನ ಹವಾ
ಮುಂಬೈನ ಧೀರುಬಾಯ್ ಅಂಬಾನಿ ಶಾಲೆಯ ವಾರ್ಷಿಕೋತ್ಸವದಲ್ಲಿ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ ಹಾಗೂ ಶಾರುಖ್ ಖಾನ್ ಹಾಗೂ ಗೌರರಿ ಕಿರಿಯ ಪುತ್ರ ಅಬ್ರಾಮ್ ಮಿಂಚಿದ್ರು ಈ ಕಾರ್ಯಕ್ರಮಕ್ಕೆ ಶಾರುಖ್, ಐಶ್ವರ್ಯಾ ಸೇರಿದಂತೆ ಹಲವು ಸ್ಟಾರ್‌ಗಳು ಮಕ್ಕಳನ್ನ ಹುರಿದುಂಬಿಸಲು ಬಂದಿದ್ರು.

ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಿತು. ನಿನ್ನೆ ರಾತ್ರಿ ನಡೆದ ವಾರ್ಷಿಕೋತ್ಸವದಲ್ಲಿ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಶಾರುಖ್ ಖಾನ್ ಪುತ್ರನ ಜೊತೆ ಪ್ರದರ್ಶನ ನೀಡಿದರು.
ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವದಲ್ಲಿ ಆರಾಧ್ಯಾ ಬಚ್ಚನ್ ಮತ್ತು ಅಬ್ರಾಮ್ ಖಾನ್ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮನಗೆದ್ದರು.
ಆರಾಧ್ಯಾ ಬಚ್ಚನ್ ಮತ್ತು ಅಬ್ರಾಮ್ ಖಾನ್ ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕದ ಭಾಗವಾಗಿದ್ದರು. ಇಬ್ಬರೂ ವರ್ಣರಂಜಿತ ನಾಟಕದ ಉಡುಪಿನಲ್ಲಿ ಕಾಣಿಸಿಕೊಂಡರು.
ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವಕ್ಕೆ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಕೂಡ ತಮ್ಮ ಮಕ್ಕಳನ್ನು ಹುರಿದುಂಬಿಸಲು ಬಂದಿದ್ದರು.
ತಮ್ಮ ಪುತ್ರ ಅಬ್ರಾಮ್‌ನನ್ನು ಪ್ರೋತ್ಸಾಹಿಸಲು ಶಾರುಖ್ ಖಾನ್ ಪತ್ನಿ ಗೌರಿ ಮತ್ತು ಪುತ್ರಿ ಸುಹಾನಾ ಜೊತೆ ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವಕ್ಕೆ ಬಂದಿದ್ದರು.
ಹಾಗೆಯೇ ಕರಿಷ್ಮಾ ಕಪೂರ್, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವದಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ತೈಮೂರ್ ಅಲಿ ಖಾನ್ ಕೂಡ ಮಸ್ತಿ ಮೂಡ್‌ನಲ್ಲಿದ್ದರು.
ಅಂಬಾನಿ ಕುಟುಂಬ ವಾರ್ಷಿಕೋತ್ಸವದಲ್ಲಿ: ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕೋತ್ಸವದ ನಂತರ ನೀತಾ ಅಂಬಾನಿ, ಈಶಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿರುವುದು ಕಂಡು ಬಂತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.