ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಶ್..! ಫೋಟೋಸ್ ವೈರಲ್
ಪತಿ ಅಭಿಷೇಕ್ ಮಗಳು ಆರಾಧ್ಯ ಜೊತೆ ಪ್ಯಾರೀಸ್‌ನಲ್ಲಿ ಐಶ್ ಫ್ಯಾಷನ್ ವೀಕ್‌ನಲ್ಲಿ ವೈಟ್ ಡ್ರೆಸ್‌ನಲ್ಲಿ ಮಿಂಚಿದ ನಟಿ

ಐಶ್ವರ್ಯ ರೈ ಬಚ್ಚನ್ ಪ್ಯಾರಿಸ್ ಫ್ಯಾಶನ್ ವೀಕ್ ಆಯೋಜಿಸಿದ ರನ್ ವೇ ಶೋ ಲೆ ಡಿಫೀಲೀ ಲೋರಿಯಲ್ ಪ್ಯಾರಿಸ್ ನ ನಾಲ್ಕನೇ ಆವೃತ್ತಿಯಲ್ಲಿ ಭಾಗಿಯಾಗಲು ಇತ್ತೀಚೆಗಷ್ಟೇ ಪ್ಯಾರಿಸ್‌ಗೆ ಹೋಗಿದ್ದರು. ಈಗ ನಟಿಯ ಫೋಟೋಗಳು ಎಲ್ಲೆಡೆ ವೈರಲ್ ಅಗಿವೆ.
ಮಾಜಿ ವಿಶ್ವ ಸುಂದರಿ ವಾರಾಂತ್ಯದಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಆಕೆಯ ಪತಿ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಮಗಳು ಆರಾಧ್ಯ ಇದ್ದರು. ಇದು ಐಶ್ವರ್ಯ ರೈ ಬಚ್ಚನ್ ಅವರ ಪ್ಯಾರಿಸ್ ಡೈರಿ. ವೈಟ್ ಡ್ರೆಸ್‌ನಲ್ಲಿ ಮಿಂಚಿದ ಐಶ್ ಫೋಟೋಸ್ ವೈರಲ್ ಆಗಿವೆ
ಐಫೆಲ್ ಟವರ್(Eiffel Tower) ಹಿನ್ನೆಲೆಯಲ್ಲಿ ಮತ್ತು ಐಶ್ವರ್ಯ ರೈ ಬಚ್ಚನ್ ರನ್ ವೇನಲ್ಲಿ ವಾಕ್ ಮಾಡಿದ್ದು ಮಾಜಿ ವಿಶ್ವಸುಂದರಿಯ ಲುಕ್ ಜನರನ್ನು ಫಿದಾ ಮಾಡಿದೆ.
ನಟಿ ಸ್ಟೈಲಿಷ್ ವೈಟ್ ಡ್ರೆಸ್‌ನಲ್ಲಿ ಬೆರಗುಗೊಳಿಸುವಂತಿದ್ದರು. ನಟಿ ಬ್ರೈಟ್ ಪಿಂಕ್ ಲಿಪ್‌ಸ್ಟಿಕ್ ಹಚ್ಚಿ ವೈಟ್-ಪಿಂಕ್ ಮ್ಯಾಚ್ ಗಮನಸೆಳೆಯುತ್ತಿತ್ತು. ಉಡುಪನ್ನು ಎತ್ತಿ ಬೀಸಿದ ಐಶ್ ಫೋಟೋಸ್ ಈಗ ವೈರಲ್ ಆಗಿವೆ
ಐಶ್ವರ್ಯ ರೈ ಬಚ್ಚನ್ 2018 ರಲ್ಲಿ ಫನ್ನಿ ಖಾನ್ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಮರಳಿ ಬರಲಿದ್ದಾರೆ ಯಶ್
ಐಶ್ವರ್ಯಗಾಗಿ ಹೆಲಿಕಾಪ್ಟರ್ ಅಮರ್ ಸಿಂಗ್‌ರನ್ನು ಬಿಟ್ಟು ಹೋದಾಗ ಏನಾಗಿತ್ತು ನೋಡಿ
ಮಗಳು ಪತಿಯೊಂದಿಗೆ ಐಶ್ವರ್ಯಾ ರೈ ಪ್ಯಾರಿಸ್‌ಗೆ ಹೊರಟಾಗ ಅವರ ಫ್ಯಾಷನ್, ಸ್ಟೈಲ್ ಕೂಡಾ ವೈರಲ್ ಆಗಿತ್ತು. ಅಷ್ಟಾಗಿ ಕ್ಯಾಮೆರಾಗೆ ಕಾಣಿಸಿಕೊಳ್ಳದ ನಟಿಯ ಬಹಳಷ್ಟು ಫೋಟೋಗಳನ್ನು ಪಾಪ್ಪರಾಜಿಗಳು ಶೇರ್ ಮಾಡಿದ್ದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.