ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಮದುವೆ ಹಾಗೂ ಮೆಹೆಂದಿ ಫೋಟೋಸ್
ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಭಾರತದ ಪವರ್‌ಫುಲ್ ಹಾಗೂ ಫೇಮಸ್ ಕಪಲ್‌ಗಳಲ್ಲಿ ಒಬ್ಬರು. ಇವರ ಮದುವೆ ಕೂಡ ಸೆಲೆಬ್ರೆಟಿಗಳಿಂದ ತುಂಬಿದ ಹೈ-ಪ್ರೊಫೈಲ್ ವಿವಾಹವಾಗಿತ್ತು. ಈ ಜೋಡಿಯ ಮದುವೆ ಹಾಗೂ ಮೆಹಂದಿ ಸಮಾರಂಭದ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅಪರೂಪದ ಪೋಟೋಗಳು ಇಲ್ಲಿವೆ, ಮಿಸ್ ಮಾಡಿಕೊಳ್ಳಬೇಡಿ.
ಸ್ಟಾರ್ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 13 ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿಕೊಂಡರು.
2007ರಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಉದ್ಯಮದ ಆಪ್ತ ಸ್ನೇಹಿತರ ಉಪಸ್ಥಿತಿಯ ನಡುವೆ ಗ್ರಾಂಡ್ ರಾಯಲ್ ಸೆಟಪ್‌ನಲ್ಲಿ ಈ ಜೋಡಿ ಹಸೆಮಣೆ ಏರಿತು. ಇಡೀ ಬಚ್ಚನ್ ಕುಟುಂಬವು ಮದುವೆಗೆ ರೆಡ್ ಶೇಡ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಡಿತ್ತು.
ಇದು ಬಾಲಿವುಡ್‌ನ ಹೈ-ಪ್ರೊಫೈಲ್ ವೆಡ್ಡಿಂಗ್‌ಗಳಲ್ಲಿ ಒಂದಾಗಿದೆ.
ತುಳು ವಿವಾಹ ಪದ್ಧತಿಯ ಪ್ರಕಾರ ಅಭಿಷೇಕ್ ಮತ್ತು ಐಶ್ವರ್ಯಾ ವಿವಾಹವಾದರು.
ಗೋಲ್ಡನ್ ಸೀರೆಯನ್ನು ಧರಿಸಿದ್ದ ಐಶ್ವರ್ಯಾ ಅತ್ಯಂತ ಸುಂದರವಾದ ದಕ್ಷಿಣ-ಭಾರತೀಯ ವಧುವಿನಂತೆ ಕಾಣುತ್ತಿದ್ದಳು.
ಐಶ್ವರ್ಯ ಧರಿಸಿದ್ದು ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸೀರೆ.
ಬಚ್ಚನ್ಸ್ ಔಟ್‌ಫಿಟ್ ಅವರ ನೆಚ್ಚಿನ ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸ ಮಾಡಿದ್ದರು.
ಈ ಡಿಸೈನರ್ ಜೋಡಿಯೇ ಅಭಿಷೇಕ್ ಮತ್ತು ಕುಟುಂಬಕ್ಕಾಗಿ ಎಲ್ಲಾ ಬಟ್ಟೆಯನ್ನು ಮದುವೆ ಮತ್ತಿತರೆ ಫಂಕ್ಷನ್‌ಗಳಿಗೆ ಡಿಸೈನ್ ಮಾಡಿದ್ದಾರೆ.
ಮದುವೆಯ ಡೆಕೊರೇಷನ್‌ನಿಂದ ಹಿಡಿದು ಫ್ಯಾಮಿಲಿಯ ಬಟ್ಟೆಗಳು ಮತ್ತು ಸಂಪೂರ್ಣ ಸೆಟ್ಟಿಂಗ್ ಎಲ್ಲವೂ ರಾಯಲ್ ಆಗಿದ್ದವು.
ಐಶ್ವರ್ಯಾ ಕಾಪರ್ ಹಾಗೂ ಗೋಲ್ಡ್ ಶೇಡ್‌ಗಳ ಸೀರೆಯನ್ನು ಕೆಲವು ಸಾಂಪ್ರದಾಯಿಕ ಚಿನ್ನ ಮತ್ತು ಕುಂದನ್ ಆಭರಣಗಳೊಂದಿಗೆ ಮ್ಯಾಚ್ ಮಾಡಿಕೊಂಡಿದ್ದರು.
ಮಾಜಿ ಮಿಸ್ ವರ್ಲ್ಡ್ ಮದುವೆಯ ದಿನ ಸಾಂಪ್ರದಾಯಿಕ ದಕ್ಷಿಣ ಭಾರತದ ವಧುವಿನಂತೆ ಅಲಂಕರಿಸಿಕೊಂಡಿದ್ದರು .
ಮೆಹಂದಿ ಸೆರಮನಿಯ ಝಲಕ್.
ಅಭಿಷೇಕ್ ಬಚ್ಚನ್ ವಿವಾಹದ ಶೆರ್ವಾನಿ ಹಾಫ್ ವೈಟ್ ಆಗಿತ್ತು.
ಐಶ್ವರ್ಯಾಳ ಮೆಹಂದಿ ಸೆರಮನಿ.
ದುವೆಯಾದ ಕೂಡಲೇ ಐಶ್ವರ್ಯ ಮತ್ತು ಅಭಿಷೇಕ್ ಕುಟುಂಬ ವಿವಾಹದ ನಂತರದ ವಿಶೇಷ ಪೂಜೆಯನ್ನು ನಡೆಸಲು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿತ್ತು.