21 ಕೋಟಿ ಮೌಲ್ಯದ ಫ್ಲಾಟ್ ಬಿಟ್ಟು, ಐಶ್ವರ್ಯಾ, ಬಚ್ಚನ್ ಮನೆಯಲ್ಲಿರಲು ಕಾರಣವಿದೆ!
ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಬಚ್ಚನ್ ಅವರಿಗೆ 47ರ ಸಂಭ್ರಮ. 1973ರ ನವೆಂಬರ್ 1 ರಂದು ಮಂಗಳೂರಿನಲ್ಲಿ ಜನಿಸಿದ ಐಶ್ 9ನೇ ತರಗತಿಯಲ್ಲಿಯೇ ಕ್ಯಾಮ್ಲಿನ್ ಕಂಪನಿಯಿಂದ ತನ್ನ ಮೊದಲ ಮಾಡೆಲಿಂಗ್ ಆಫರ್ ಪಡೆದರು. ಇದರ ನಂತರ, ಮಾಡೆಲಿಂಗ್‌ಗೆ ತೆರಳಿದ ಐಶ್, 1991ರಲ್ಲಿ ನಡೆದ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದರು. ಫೋರ್ಡ್ ಸ್ಪರ್ಧೆಯಲ್ಲಿ ಜಯಗಳಿಸಿದ ನಂತರ ಐಶ್ವರ್ಯಾ ವೋಗ್ ನಿಯತಕಾಲಿಕದ ಅಮೆರಿಕನ್ ಆವೃತ್ತಿಯಲ್ಲಿ ಸ್ಥಾನ ಗಳಿಸಿದರು. ನಂತರ ಅವರು ಎಂದಿಗೂ ಹಿಂದಿರುಗಿ ನೋಡಲಿಲ್ಲ ಮತ್ತು ಯಶಸ್ಸಿನ ಮೆಟ್ಟಿಲುಗಳನ್ನು ಏರಿದರು. ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್ವರ್ಯಾ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 5500 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಈ ಫ್ಲ್ಯಾಟ್‌ನ ಬೆಲೆ 21 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಆದರೆ ಈ ಮನೆಯಲ್ಲಿ ಅವರು ವಾಸಿಸುತ್ತಿಲ್ಲ. ಕಾರಣ ಇಲ್ಲಿದೆ.

ಐಶ್ವರ್ಯಾ ತನ್ನ ಅತ್ತೆ ಮಾವಂದಿರ ಜೊತೆ ಜಲ್ಸಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದರ ಹಿಂದಿನ ಕಾರಣವನ್ನು ಐಶ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.

ಐಶ್ವರ್ಯಾ ಅಭಿಷೇಕ್ ಜೋಡಿ ಕೋಟ್ಯಾಂತರ ಬೆಲೆ ಬಾಳುವ ಈ ಐಷಾರಾಮಿ ಮನೆಯನ್ನು ಕೊಂಡಿದೆ.

ಈ ಹೊಸ ಅಪಾರ್ಟ್ಮೆಂಟ್‌ಗೆ ಇನ್ನೂ ಶಿಫ್ಟ್ ಆಗಿಲ್ಲ. ಅವರು ತಮ್ಮ ಹೆತ್ತವರೊಂದಿಗೆ ಇರಲು ಬಯಸುವುದು ಇದಕ್ಕೆ ಕಾರಣವಂತೆ.

'ನಾನು ಬಾಲ್ಯದಿಂದಲೂ ಕುಟುಂಬದೊಂದಿಗೆ ಇರುವ ಮೌಲ್ಯವನ್ನು ಪೋಷಕರಿಂದ ಕಲಿತಿದ್ದೇನೆ. ಒಟ್ಟಿಗೆ ಇರುವುದರಿಂದ ಮಾತ್ರ ಕುಟುಂಬದಲ್ಲಿ ಪ್ರೀತಿ ಬೆಳೆಯುತ್ತದೆ. ಮತ್ತು ನಾವು ಪರಸ್ಪರ ಹತ್ತಿರ ಬರಲು ಸಾಧ್ಯವಾಗುತ್ತದೆ. ಎಲ್ಲಾ ಜನರು ಒಟ್ಟಿಗೆ ವಾಸಿಸಿದಾಗ ಮಾತ್ರ ಕುಟುಂಬವು ಬಲವಾಗಿರುತ್ತದೆ' ಎಂದಿದ್ದರು ಐಶ್ವರ್ಯಾ ರೈ.

ಸುಂಟೆಕ್ ಇನ್ ಟೀಮ್ ಡಿಸೈನ್ ಮಾಡಿರುವ ಐಶ್ವರ್ಯಾರ ಮನೆ ಮುಂಬೈನ ಸುಂಟೆಕ್ ರಿಯಾಲಿಟಿಯಲ್ಲಿದೆ.

ಅಡುಗೆಮನೆಯನ್ನು ಅತ್ಯುತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಲ್ಲಾ ಸೌಲಭ್ಯಗಳ ಲಕ್ಷುರಿಯಸ್ ಲುಕ್‌ನ ಈ ಅಪಾರ್ಟ್ಮೆಂಟ್‌ನ ಸ್ವಿಮ್ಮಿಂಗ್ ಪೂಲ್ ಸಹ ಹೊಂದಿದೆ

ಬೆಡ್ ರೂಮ್ ದೊಡ್ಡ ಗ್ಲಾಸ್‌ನ ಕಿಟಕಿಗಳನ್ನು ಹೊಂದಿದ್ದು, ಇದರಿಂದ ಹೊರಗಿನ ಸುಂದರ ವ್ಯೂವ್ ಕಾಣಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.