- Home
- Entertainment
- Cine World
- ಬರ್ತಡೇ ದಿನವೇ ಬಾಲಿವುಡ್ ನಟಿಯ ಹಸಿಬಿಸಿ ಫೋಟೋ ವೈರಲ್; 'ಮೇಲಿನದೊಂದು ತೆಗೆದುಬಿಡಮ್ಮ..' ನೆಟ್ಟಿಗರಿಂದ ಟ್ರೋಲ್!
ಬರ್ತಡೇ ದಿನವೇ ಬಾಲಿವುಡ್ ನಟಿಯ ಹಸಿಬಿಸಿ ಫೋಟೋ ವೈರಲ್; 'ಮೇಲಿನದೊಂದು ತೆಗೆದುಬಿಡಮ್ಮ..' ನೆಟ್ಟಿಗರಿಂದ ಟ್ರೋಲ್!
ನಟಿ ಆಯಿಷಾ ಶರ್ಮಾ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋಗಳಿಂದಾಗಿ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಆಯಿಷಾ ಶರ್ಮಾ ಹುಟ್ಟುಹಬ್ಬದ ಸಂಭ್ರಮ
ಜನವರಿ 25, 1992 ರಂದು ಬಿಹಾರದ ಭಾಗಲ್ಪುರದಲ್ಲಿ ಜನಿಸಿದ ಆಯಿಷಾ ಶರ್ಮಾ ತಮ್ಮ 32 ನೇ ಹುಟ್ಟುಹಬ್ಬವನ್ನು ಪಾಪರಾಜಿಗಳೊಂದಿಗೆ ಕೇಕ್ ಕತ್ತರಿಸಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಆಯಿಷಾ ಅವರ ಸಹೋದರಿ ನೇಹಾ ಶರ್ಮಾ ಕೂಡ ಇದ್ದರು.
ಆಯಿಷಾ ಶರ್ಮಾ ಉಡುಗೆ
ಆಯಿಷಾ ಶರ್ಮಾ ಕೇಕ್ ಕತ್ತರಿಸುವಾಗ ನೀಲಿ ಬಣ್ಣದ ರಿವೀಲಿಂಗ್ ಟಾಪ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಕೇಕ್ ಕತ್ತರಿಸುವಾಗಿನ ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಅಲ್ಲದ ಟ್ರೋಲ್‌ಗೊಳಗಾಗಿವೆ.
ಆಯಿಷಾ ಮತ್ತು ನೇಹಾ
ಆಯಿಷಾ ಅವರೊಂದಿಗೆ ಅವರ ಅಕ್ಕ ನೇಹಾ ಶರ್ಮಾ ಕೂಡ ಇದ್ದರು. ಆಯಿಷಾ ಕೇಕ್ ಕತ್ತರಿಸಿ ಮೊದಲು ನೇಹಾಗೆ ಮತ್ತು ನಂತರ ಪಾಪರಾಜಿಗಳಿಗೂ ತಿನ್ನಿಸಿದರು. ಹುಟ್ಟು ಹಬ್ಬದ ದಿನವೇ ಫೋಟೋಗಳು ವೈರಲ್ ಆಗಿವೆ.
ಹುಟ್ಟುಹಬ್ಬದ ಫೋಟೋಗಳು ವೈರಲ್
ಆಯಿಷಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿ ಜನರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ, ಆದರೆ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ನೆಟ್ಟಿಗರಿಂದ ಟ್ರೋಲ್
ಒಂದು ವೀಡಿಯೊದಲ್ಲಿ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, "ಈ ಇಬ್ಬರು ಸಹೋದರಿಯರಿಗೆ ಬಟ್ಟೆ ಹಾಕಿಕೊಳ್ಳುವ ತಮೀಜೇ ಇಲ್ಲ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಬಟ್ಟೆ ಹಾಕೋದೇನಿತ್ತು' ಎಂದು ಬರೆದಿದ್ದಾರೆ.
ಟ್ರೋಲ್ ಗೆ ಗುರಿಯಾದ ನಟಿಯರು
ಆಯಿಷಾ ಮತ್ತು ನೇಹಾ ಅವರನ್ನು ಟ್ರೋಲ್ ಮಾಡಿರುವ ನೆಟ್ಟಿಗರೊಬ್ಬರು, 'ಡ್ರೆಸ್ ನೋಡಿ ಇವರದ್ದು... ಇಷ್ಟೊಂದು ಬಟ್ಟೆ ಹಾಕೋ ಅಗತ್ಯ ಏನಿತ್ತು' ಎಂದು ಬರೆದಿದ್ದಾರೆ. "ಅಟೆನ್ಷನ್ ಸೀಕರ್ಸ್" ಎಂದು ಮತ್ತೊಬ್ಬ ಬಳಕೆದಾರರ ಕಾಮೆಂಟ್. "ಬಾಲಿವುಡ್‌ನಲ್ಲಿ ಅಶ್ಲೀಲತೆ ಹೊರತು ಬೇರೆ ಕೆಲಸವಿಲ್ಲ" ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ.
ಶಾಸಕರ ಪುತ್ರಿಯರು
ಆಯಿಷಾ ಶರ್ಮಾ ಮತ್ತು ನೇಹಾ ಶರ್ಮಾ ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ ಅವರ ಪುತ್ರಿಯರು, ಅವರು ಭಾಗಲ್ಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ
ಆಯಿಷಾ ಚಿತ್ರರಂಗ ಪ್ರವೇಶ
ಮೂಲತಃ ಮಾಡೆಲ್ ಮತ್ತು ನಟಿಯಾಗಿರುವ ಆಯಿಷಾ ಶರ್ಮಾ 2018 ರಲ್ಲಿ ಬಿಡುಗಡೆಯಾದ 'ಸತ್ಯಮೇವ ಜಯತೇ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಜಾನ್ ಅಬ್ರಹಾಂ ಮತ್ತು ಮನೋಜ್ ಬಾಜಪೇಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ನೇಹಾ ಚಿತ್ರರಂಗ ಪ್ರವೇಶ
ಆಯಿಷಾ ಅವರ ಅಕ್ಕ ನೇಹಾ ಶರ್ಮಾ 2007 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ತೆಲುಗು ಚಿತ್ರ 'ಚಿರುತ' ದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ಆದರೆ ಹಿಂದಿಯಲ್ಲಿ ಅವರ ಚಿತ್ರ 'ಕ್ರೂಕ್' 2010 ರಲ್ಲಿ ಬಿಡುಗಡೆಯಾಯಿತು.
ನೇಹಾ ಮುಂದಿನ ಚಿತ್ರ
ಕೊನೆಯದಾಗಿ 'ಬ್ಯಾಡ್ ನ್ಯೂಸ್' ನಲ್ಲಿ ಐಟಂ ನಂಬರ್ ಮಾಡಿದ್ದ ನೇಹಾ ಶರ್ಮಾ ಅವರ ಮುಂದಿನ ಚಿತ್ರ 'ದೇ ದೇ ಪ್ಯಾರ್ ದೇ 2'.ಒಟ್ಟಿನಲ್ಲಿ ಅಕ್ಕ-ತಂಗಿಯರ ಹಸಿಬಿಸಿ ದೃಶ್ಯ ನೆಟ್ಟಿಗರ ಟೆಂಪರೇಚರ್ ಹೆಚ್ಚಿಸಿದ್ದಂತೂ ಹೌದು.