ಸಂಜು ನಂತ್ರ ಬೋನಿ ಕಪೂರ್ ಫ್ಯಾಮಿಲಿಗೆ ದುಬೈ ಗೋಲ್ಡನ್ ವೀಸಾ
- ಸಂಜಯ್ ದತ್ ನಂತ್ರ ಬೋನಿ ಕಪೂರ್‌ಗೆ ಸಿಕ್ತು ಗೋಲ್ಡನ್ ವೀಸಾ
- ಶ್ರೀದೇವಿ ಗಂಡನ ಇಡೀ ಕುಟುಂಬಕ್ಕೆ 10 ವರ್ಷದ ಗೋಲ್ಡನ್ ವೀಸಾ
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ಅವರ ಕುಟುಂಬ ಯುಎಇ ಗೋಲ್ಡನ್ ವೀಸಾ ಸಿಕ್ಕಿದೆ. ಸೆಪ್ಟೆಂಬರ್ 14ರಂದು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ಅವರ ಕುಟುಂಬವು ಪ್ರತಿಷ್ಠಿತ 10 ವರ್ಷಗಳ ದುಬೈ ಗೋಲ್ಡನ್ ವೀಸಾ ಪಡೆದಿದ್ದಾರೆ ಎಂದು ಹೇಳಿದ್ದಾರೆ.
65 ವರ್ಷದ ನಿರ್ಮಾಪಕರು ಈ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಾಹ್ನವಿ, ಖುಷಿ, ಅರ್ಜುನ್ ಹಾಗೂ ಅವರ ಸಹೋದರಿಯೂ ವೀಸಾ ಪಡೆದಿದ್ದಾರೆ
ನನಗೆ ಮತ್ತು ನನ್ನ ಕುಟುಂಬಕ್ಕೆ 10 ವರ್ಷಗಳ ಗೋಲ್ಡನ್ ವೀಸಾ ನೀಡಿದ್ದಕ್ಕಾಗಿ ದುಬೈ ಸರ್ಕಾರಕ್ಕೆ ಕೃತಜ್ಞತೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರವು 2019 ರಲ್ಲಿ ಜಾರಿಗೆ ತಂದಿದೆ. ಇದು ಹೂಡಿಕೆದಾರರು (ಕನಿಷ್ಠ 10 ಮಿಲಿಯನ್ ಎಇಡಿ) ಮತ್ತು ಉದ್ಯಮಿಗಳು, ಹಾಗೆಯೇ ವೃತ್ತಿಪರರು ಮತ್ತು ವಿಜ್ಞಾನ, ಜ್ಞಾನ ಮತ್ತು ಕ್ರೀಡಾ ಕ್ಷೇತ್ರದಂತಹ ವಿಶೇಷ ಪ್ರತಿಭೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ಈ ಗೋಲ್ಡನ್ ವೀಸಾಗಳನ್ನು ಐದು ಅಥವಾ 10 ವರ್ಷಗಳವರೆಗೆ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.
ಹಿಂದೆ, ದುಬೈನಿಂದ ಗೋಲ್ಡನ್ ವೀಸಾ ಪಡೆದ ಸಿನಿ ತಾರೆಯರಲ್ಲಿ ಶಾರುಖ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಟೊವಿನೋ ಥಾಮಸ್ ಸೇರಿದ್ದಾರೆ.