ಸಮಂತಾ ನಂತರ ನಮ್ಮ ದೀಪಿಕಾಳ ರಿಪೋರ್ಟ್‌ಕಾರ್ಡ್‌ ವೈರಲ್‌

First Published Jun 3, 2020, 7:25 PM IST

ಸಿನಿಮಾದ ರಂಗದ ಬಗ್ಗೆ ಜನಸಾಮಾನ್ಯರಿಗೆ ಯಾವತ್ತಿಗೂ ಕುತೂಹಲ ಹಾಗೂ ಆಸಕ್ತಿ. ನಟನಟಿಯರ ಸಣ್ಣ ಪುಟ್ಟ ವಿಷಯಗಳು ಪ್ರಚಾರಗಿಟ್ಟಿಸಿಕೊಳ್ಳುತ್ತಿರುತ್ತವೆ. ಸ್ಪಲ್ಪ ಸಮಯದ ಹಿಂದೆ ಸೌತ್‌ ನಟಿ ಸಮಂತಾ ಅಕ್ಕಿನೇನಿಯ ಶಾಲೆಯ ರಿಪೋರ್ಟ್‌ ಕಾರ್ಡ್‌ ವೈರಲ್‌ ಆಗಿತ್ತು. ಈಗ ಬಾಲಿವುಡ್‌ ದಿವಾ ದೀಪಿಕಾ ಪಡುಕೋನೆಯ ಬಾರಿ. ಬಹಳ ಹಿಂದೆ ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ ಶಾಲೆಯ ರಿಪೋರ್ಟ್‌ ಕಾರ್ಡ್‌ ಈಗ ಮತ್ತೆ ಸುದ್ದಿಯಲ್ಲಿದೆ. ದೀಪಿಕಾಳ ರಿಪೋರ್ಟ್‌ ಕಾರ್ಡ್‌ ನೆಟ್ಟಿಗರ ಗಮನಸೆಳೆದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.