- Home
- Entertainment
- Cine World
- 4 ಚಿತ್ರಗಳು ಪ್ಲಾಫ್ ಆದ್ವು, ರಿಸ್ಕ್ ತೆಗೆದುಕೊಳ್ಳದ ಅಕ್ಷಯ್ ಕುಮಾರ್ ಪಯಣ ಮರಾಠಿ ಚಿತ್ರದತ್ತ!
4 ಚಿತ್ರಗಳು ಪ್ಲಾಫ್ ಆದ್ವು, ರಿಸ್ಕ್ ತೆಗೆದುಕೊಳ್ಳದ ಅಕ್ಷಯ್ ಕುಮಾರ್ ಪಯಣ ಮರಾಠಿ ಚಿತ್ರದತ್ತ!
ಅಕ್ಷಯ್ ಕುಮಾರ್ (Akshay Kumar) ಹೇರಾ ಫೆರಿ 3 (Hera Pheri 3) ಚಿತ್ರದ ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರದಿಂದ ಹೊರಗುಳಿದಿದ್ದು, ಕಾರ್ತಿಕ್ ಆರ್ಯನ್ (Kartik Aryan) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ, ಚಿತ್ರದಲ್ಲಿ ಅಕ್ಷಯ್ ಇಲ್ಲದಿರುವುದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಕ್ಷಯ್ ಕೂಡ ವದಂತಿಗಳಿಗೆ ಅಂತ್ಯ ಹಾಡಿದ್ದು, ಹೆರಾ ಫೇರಿ 3 ನಲ್ಲಿ ನಾನಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ (Script) ಮತ್ತು ಚಿತ್ರಕಥೆ (Screenplay) ನನಗೆ ಇಷ್ಟವಾಗಲಿಲ್ಲ ಹಾಗಾಗಿ ಚಿತ್ರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು. ಅಂದಹಾಗೆ, ಈ ವರ್ಷ ಬಂದ ಅಕ್ಷಯ್ ಅವರ ಒಂದೇ ಒಂದು ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ

ಮಾಧ್ಯಮ ವರದಿಗಳ ಪ್ರಕಾರ, 2022 ರಲ್ಲಿ ಅಕ್ಷಯ್ ಕುಮಾರ್ ಅವರ ಯಾವುದೇ ಚಿತ್ರಗಳು ಹೆಸರು ಮಾಡದ ಕಾರಣ, ಈ ವರ್ಷ ಯಾವುದೇ ಚಲನಚಿತ್ರಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ.
ಕಡಿಮೆ ಸಮಯದಲ್ಲಿ ಚಿತ್ರಗಳ ಚಿತ್ರೀಕರಣ ಮುಗಿಸುವುದು ಅಕ್ಷಯ್ ಕುಮಾರ್ ಅವರಿಗೆ ಇಷ್ಟ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಅವರು ಸುಮಾರು 35 ರಿಂದ 40 ದಿನಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಾರೆ.
ಈ ವರ್ಷ ಅಕ್ಷಯ್ ಕುಮಾರ್ ಆರಂಭ ಪಾಸಿಟಿವ್ ಆಗಿರಲಿಲ್ಲ. ಅವರ ಚಿತ್ರ ಬಚ್ಚನ್ ಪಾಂಡೆ ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. 180 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 73.31 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಕೃತಿ ಸನೋನ್, ಜಾಕ್ವೆಲಿನ್ ಫೆರ್ನಾಂಡಿಸ್ ಅವರೊಂದಿಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಸಮಯದಲ್ಲಿಯೇ ಈ ಚಿತ್ರ ಬಿಡುಗಡೆಯಾಯಿತು ಮತ್ತು ಬಚ್ಚನ್ ಪಾಂಡೆ ಪ್ರೇಕ್ಷಕರನ್ನು ಪಡೆಯದಿರಲು ಇದೇ ಕಾರಣ.
ನಂತರ ಜೂನ್‌ನಲ್ಲಿ ಬಿಡುಗಡೆಯಾದ ಯಶ್ ರಾಜ್ ಫಿಲಂಸ್‌ನ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಿಂದ ಅಕ್ಷಯ್ ಕುಮಾರ್ ಮೇಲೆ ತಯಾರಕರು ಹೆಚ್ಚಿನ ಭರವಸೆಯನ್ನು ಹೊಂದಿದ್ದರು. ಆದರೆ ಎಲ್ಲವೂ ನೆಲಕಚ್ಚಿತು. 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಗಳಿಸಿದ್ದು ಬರಿ 90.32 ಕೋಟಿ ರೂ.. ಚಿತ್ರದಲ್ಲಿ ಅಕ್ಷಯ್ ಜೊತೆಗೆ ಸಂಜಯ್ ದತ್, ಸೋನು ಸೂದ್ ಮತ್ತು ಮಾನುಷಿ ಚಿಲ್ಲರ್ ಲೀಡ್ ರೋಲ್‌ನಲ್ಲಿದ್ದರು. ಈ ಚಿತ್ರ ಬಿಡುಗಡೆಯಾದಾಗ ಸೌತ್ ಸ್ಟಾರ್ ಅವರ ಚಿತ್ರ ಕೆಜಿಎಫ್ 2 ಹವಾ ಇತ್ತು.
ಆಗಸ್ಟ್‌ನಲ್ಲಿ ರಕ್ಷಾ ಬಂಧನದ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ತಮ್ಮ ರಕ್ಷಾ ಬಂಧನ ಚಿತ್ರವನ್ನು ಬಿಡುಗಡೆ ಮಾಡಿದರು. ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಅವರ ಚಿತ್ರದೊಂದಿಗೆ ಬಿಡುಗಡೆಯಾಯಿತು. ಎರಡು ದಿಗ್ಗಜರ ಚಿತ್ರಗಳ ನಡುವಿನ ಘರ್ಷಣೆಯಿಂದಾಗಿ ಎರಡೂ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಎಂದು ಸಾಬೀತಾಯಿತು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಹಿಷ್ಕಾರದ ಟ್ರೆಂಡ್ ಕಾರಣದಿಂಧ ಚಿತ್ರಗಳು ನಷ್ಟಕ್ಕೀಡಾಗಿವೆ. 70 ಕೋಟಿ ಬಜೆಟ್‌ನಲ್ಲಿ ತಯಾರಾದ ರಕ್ಷಾ ಬಂಧನಕ್ಕೆ ಬರೋಬ್ಬರಿ 65 ಕೋಟಿ ಗಳಿಸಿದೆ.
ದೀಪಾವಳಿಯ ಸಂದರ್ಭದಲ್ಲಿ, ಅಕ್ಷಯ್ ಕುಮಾರ್ ಅವರ ರಾಮ್ ಸೇತು ಚಿತ್ರವನ್ನು ಬಿಡುಗಡೆಯಾಯಿತು. ಆದರೆ ಈ ಸಮಯದಲ್ಲಿ ಅಕ್ಷಯ್ ಕುಮಾರ್ ಅವರ ಚಿತ್ರವು ಅಜಯ್ ದೇವಗನ್ ಅವರ ಚಿತ್ರವಾದ ಥ್ಯಾಂಕ್ ಗಾಡ್‌ನೊಂದಿಗೆ ಕ್ಲಾಷ್ ಆಯಿತು. ಇದರಿಂದ ಎರಡೂ ಚಿತ್ರಗಳು ಕೋಟಿ ಕೋಟಿ ನಷ್ಟ ಅನುಭವಿಸಿವೆ. 150 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ರಾಮಸೇತು ಕೇವಲ 94.46 ಕೋಟಿ ವ್ಯವಹಾರ ಮಾಡಲು ಸಾಧ್ಯವಾಯಿತು. ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನುಶ್ರತ್ ಭರುಚಾ ಅವರೊಂದಿಗೆ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಒಂದರ ಹಿಂದೆ ಒಂದರಂತೆ ಸತತ 4 ಚಿತ್ರಗಳು ಫ್ಲಾಪ್ ಆದ ಕಾರಣ ಈ ವರ್ಷ ಅಕ್ಷಯ್ ಕುಮಾರ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ಈ ಹಿಂದೆ ಅವರ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ.
ಅಲಿ ಅಬ್ಬಾಸ್ ಜಾಫರ್ ಅವರ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರೀಕರಣವು ಜನವರಿ 2023 ರಲ್ಲಿ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಟೈಗರ್ ಶ್ರಾಫ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.