- Home
- Entertainment
- Cine World
- ರೆಡ್ ಕಲರ್ ಡ್ರೆಸ್, ಓಪನ್ ಹೇರು... ಶಿವರುದ್ರೇಗೌಡರ ಮಗಳ ಅಂದ-ಚಂದ ನೋಡಿ ಹುಚ್ಚರಾದ ಪಡ್ಡೆಹೈಕ್ಳು!
ರೆಡ್ ಕಲರ್ ಡ್ರೆಸ್, ಓಪನ್ ಹೇರು... ಶಿವರುದ್ರೇಗೌಡರ ಮಗಳ ಅಂದ-ಚಂದ ನೋಡಿ ಹುಚ್ಚರಾದ ಪಡ್ಡೆಹೈಕ್ಳು!
ನಟಿ ಹೆಬ್ಬಾ ಪಟೇಲ್ ಅಧ್ಯಕ್ಷ ಸಿನಿಮಾದ ಮೂಲಕ ಕನ್ನಡಿಗರಿಗೆ ಹತ್ತಿರವಾದ ಚೆಲುವೆ. ಇದೀಗ ಹೆಬ್ಬಾ ಪಟೇಲ್ ಹಂಚಿಕೊಂಡಿರುವ ಕೆಲವೊಂದಿಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಶರಣ್ ನಟನೆಯ 'ಅಧ್ಯಕ್ಷ' ಸಿನಿಮಾವನ್ನು ಮರೆಯೋ ಹಾಗಿಲ್ಲ. ಆ ಮಟ್ಟಿಗೆ ಕಾಮಿಡಿ ಕಿಕ್ ಕೊಟ್ಟ ಸಿನಿಮಾವಿದು. ಇದೇ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್ ಕೂಡ ಕನ್ನಡಿಗರ ಮನದಲ್ಲಿ ಹಾಗೇ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ.
'ಅಧ್ಯಕ್ಷ' ಸಿನಿಮಾ ಬಳಿಕ ಟಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನ 'ಅಲಾ ಎಲಾ' ಅನ್ನುವ ಸಿನಿಮಾ ಮೂಲಕ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮತ್ತೆ ಕನ್ನಡ ಸಿನಿಮಾಗಳ ಕಡೆಗೆ ಮುಖ ಮಾಡುವ ಪ್ರಯತ್ನ ಕೂಡ ಮಾಡಿಲ್ಲ.
ಇತ್ತೀಚೆಗಷ್ಟೇ ನಟಿ ಹೆಬ್ಬಾ ಪಟೇಲ್ ಓಪನ್ ಹೇರು ಬಿಟ್ಕೊಂಡು ಲೇಟೆಸ್ಟ್ ಫೋಟೋಶೂಟ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಹೆಬ್ಬಾ ಅವರ ಫೋಟೋಗಳು ಸಖತ್ ಟ್ರೆಂಡ್ ಆಗ್ತಿದೆ. ಗ್ಲಾಮರ್ ಜೊತೆಗೆ ಹಾಟ್ ಟಚ್ ಕೊಟ್ಟು ಹೆಬ್ಬಾ ಪಟೇಲ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
'ಕುಮಾರಿ 21 ಎಫ್' ಚಿತ್ರದ ಮೂಲಕ ಹೆಬ್ಬಾ ಪಟೇಲ್ ಜನಮನ್ನಣೆ ಗಳಿಸಿದರು. ಈ ಚಿತ್ರದ ಮೂಲಕ ಬೋಲ್ಡ್ ನಟಿಯಾಗಿ ಫೇಮಸ್ ಆಗಿದ್ದರು. ಕನ್ನಡ, ತೆಲುಗು ಜೊತೆಗೆ ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ತೆಲುಗಿನಲ್ಲಿ ಇವರಿಗೆ ಹೆಚ್ಚು ಜನಮನ್ನಣೆ ಸಿಕ್ಕಿದೆ.
ಗ್ಲಾಮರಸ್ ಫೋಟೊಗಳನ್ನು ಪೋಸ್ಟ್ ಮಾಡಿರುವ ಹೆಬ್ಬಾ ಪಟೇಲ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ನೀವು ಎಷ್ಟು ಬ್ಯೂಟಿಫುಲ್?' 'ನಿಮ್ಮನ್ನು ನೋಡಿ ಹುಚ್ಚರಾಗಿದ್ದೇವೆ' ಎಂದೆಲ್ಲ ಕಾಮೆಂಟ್ಸ್ ಬರುತ್ತಿವೆ. ಸದ್ಯ ಹೆಬ್ಬಾ ಪಟೇಲ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸುತ್ತಿವೆ.
ನಟನೆಯಲ್ಲಿ ಎಷ್ಟು ಆಕ್ಟಿವ್ ಆಗಿದ್ದಾರೋ ಅಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದ್ಭುತವಾದ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿ ಹುಡುಗರ ಹೃದಯ ಕದ್ದಿದ್ದಾರೆ.
ಹೆಬ್ಬಾ ಪಟೇಲ್ ಕನ್ನಡ ಮೂಲದವರೇ. ಕನ್ನಡದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಈಕೆ ಹೆಸರು ನೋಡಿ ಗುಜರಾತಿ ಮೂಲದ ನಟಿ ಎಂದು ಭಾವಿಸಿದ್ದರು. ಕನ್ನಡ ಮೂಲದವರಾದರೂ, ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.