- Home
- Entertainment
- Cine World
- ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್! ಈ ರೀತಿ ಮಾಡಿದ್ರಾ?
ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್! ಈ ರೀತಿ ಮಾಡಿದ್ರಾ?
ರಾಧಿಕಾ ಶರತ್‌ಕುಮಾರ್ ಅವರ ರಾಡಾನ್ ಮೀಡಿಯಾ ನಿರ್ಮಿಸಿದ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಇನ್ನೂ ಸಂಭಾವನೆ ಸಿಕ್ಕಿಲ್ಲ ಅಂತ ನಟಿ ವಿಜಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ವಿಜಿ ಚಂದ್ರಶೇಖರ್ ಅವರು ಕೆ. ಬಾಲಚಂದರ್ ನಿರ್ದೇಶನದ 'ತಿಲ್ಲು ಮುಲ್ಲು' ಸಿನಿಮಾದಲ್ಲಿ ರಜನಿಕಾಂತ್ ಅವರ ತಂಗಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ ಸರಿತಾ ಅವರ ತಂಗಿಯಾದ ಇವರು, ಮೊದಲ ಚಿತ್ರದ ನಂತರ ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. 12 ವರ್ಷಗಳ ನಂತರ ಭಾರತಿರಾಜ ಅವರ 'ಕಿಳಕ್ಕು ಸೀಮೈಲೆ' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ತಮಿಳು, ಮಲಯಾಳಂ, ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
3೦ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಇವರ ನೈಜ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ವಿಜಿ ಚಂದ್ರಶೇಖರ್ ಚಿತ್ರರಂಗದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.
ಚಂದ್ರಕುಮಾರಿ ಧಾರಾವಾಹಿಯಲ್ಲಿನ ತಮ್ಮ ಕಹಿ ಅನುಭವವನ್ನು ವಿಜಿ ಹಂಚಿಕೊಂಡಿದ್ದಾರೆ. ತಮಗೆ 18 ಲಕ್ಷ ರೂ. ವಂಚನೆಯಾಗಿದೆ ಎಂದು ವಿಜಿ ಆರೋಪಿಸಿದ್ದಾರೆ.
ವಂಚಕರನ್ನು ಕರ್ಮ ಬಿಡುವುದಿಲ್ಲ ಎಂದು ವಿಜಿ ಹೇಳಿದ್ದಾರೆ. ಅಂದಹಾಗೆ ರಾಧಿಕಾ ಶರತ್‌ಕುಮಾರ್ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.