Salman Khan: ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!
ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.

ಜೂನ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ (The great Indian Kapil Show)ಮೂರನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮೊದಲ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಕಳೆದ ವಾರ ಈ ಶೋನ ಒಂದು ಕಾಮಿಡಿ ಪ್ರೊಮೋ ರಿಲೀಸ್ ಆಗಿದ್ದು, ಈ ಸಂಚಿಕೆ ಇದೀಗ ಟ್ರೆಂಡಿಂಗ್ ನಲ್ಲಿದೆ. ಇದರಲ್ಲಿ ಸಲ್ಮಾನ್ ಖಾನ್ ಅವರು ಅಮಿರ್ ಖಾನ್ ತನ್ನ ಮೊದಲ ಇಬ್ಬರು ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ ನಂತರ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗಿನ ಸಂಬಂಧದ ಬಗ್ಗೆಯೂ ಹೇಳಿದ್ದರು, ಅಲ್ಲದೇ ಅವರ ಇತ್ತೀಚಿನ ಚಿತ್ರ ಸಿಕಂದರ್ ಬಗ್ಗೆಯೂ ಟೀಕೆ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು ಮತ್ತು ಭಾರೀ ಟ್ರೋಲ್‌ಗೆ ಒಳಗಾಗಿತ್ತು. ಇದಲ್ಲದೇ ಸಲ್ಮಾನ್ ತಮ್ಮ ತೇರೆ ನಾಮ್ ಲುಕ್ ಬಗ್ಗೆ ಕೂಡ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಅವರ ತೇರೇ ನಾಮ್ ಹೇರ್ ಸ್ಟೈಲ್ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರಿಂದ ಸ್ಫೂರ್ತಿ ಪಡೆದಿದೆ
ಕಪಿಲ್ ಶರ್ಮಾ ಅವರೊಂದಿಗಿನ ಮೋಜಿನ ಸಂಭಾಷಣೆಯ ಸಮಯದಲ್ಲಿ, ಸಲ್ಮಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ (Tere Naam Look) ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು. ಸಲ್ಮಾನ್ ತಮ್ಮ ಕೇಶವಿನ್ಯಾಸವು ನಮ್ಮ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದರು. “ಈ ತೇರೆ ನಾಮ್ ಲುಕ್ ವಾಸ್ತವವಾಗಿ ಅಬ್ದುಲ್ ಕಲಾಂ ಸಾಹಬ್ ಅವರಿಂದ ಸ್ಫೂರ್ತಿ ಪಡೆದಿದೆ ಮತ್ತು ಆ ಸಮಯದಲ್ಲಿ ರಾಹುಲ್ ರಾಯ್ ಕೂಡ ಅದೇ ಹೇರ್ ಸ್ಟೈಲ್ ಹೊಂದಿದ್ದರು ಎಂದಿದ್ದರು. . ಸಣ್ಣ ಪಟ್ಟಣದ ನಾಯಕರು ಯಾವಾಗಲೂ ಉದ್ದ ಕೂದಲು ಹೊಂದಿರುತ್ತಾರೆ ಎಂದು ನಾನು ಅಂದುಕೊಂಡಿದ್ದೆ, ಹಾಗಾಗಿ ಆ ಲುಕ್ ಟ್ರೈ ಮಾಡಿರೋದಾಗಿ ತಿಳಿಸಿದ್ದಾರೆ.
2003ರಲ್ಲಿ ಬಿಡುಗಡೆಯಾದ ತೇರೆ ನಾಮ್ ಸಲ್ಮಾನ್ ಖಾನ್ (Salman Khan) ಅವರ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಮಧ್ಯ ಬೈತಲೆ ತೆಗೆದು ಎರಡೂ ಪಾರ್ಟ್ ಮಾಡಿದ ಹೇರ್ ಸ್ಟೈಲ್, ಕೂಲ್ ಆಗಿರುವ ಡೆನಿಮ್ ಜಾಕೆಟ್‌ಗಳು ಮತ್ತು ಅವರ ಸಿಗ್ನೇಚರ್ ಬಳೆಗಳನ್ನು ಧರಿಸಿದ್ದ ಕಾಲೇಜು ಹಂಕ್ ರಾಧೆ ಮೋಹನ್ ಪಾತ್ರವು ಸಾವಿರಾರು ಅಭಿಮಾನಿಗಳಿಗೆ ಇನ್’ಸ್ಪೈರ್ ಮಾಡಿತ್ತು. ಸತೀಶ್ ಕೌಶಿಕ್ ನಿರ್ದೇಶಿಸಿದ ತೇರೆ ನಾಮ್, 1999 ರಲ್ಲಿ ವಿಕ್ರಮ್ ನಟಿಸಿದ ಸೂಪರ್‌ಹಿಟ್ ಚಿತ್ರ ಸೇತುವಿನ ಹಿಂದಿ ರಿಮೇಕ್ ಆಗಿದೆ.
ಸಿಕಂದರ್ ನಂತರ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ
ವರದಿಗಳ ಪ್ರಕಾರ, ಸೂಪರ್ ಸ್ಟಾರ್ ಅಪೂರ್ವ ಲಖಿಯಾ ಅವರ ಭಾರತ ಮತ್ತು ಚೀನಾ ನಡುವಿನ 2020 ರ ಗಾಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದ ವಾರ್ ಡ್ರಾಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಎದುರು ಚಿತ್ರಾಂಗದ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರ ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಇನ್ನೂ ಹೆಸರಿಡದ ಈ ಚಿತ್ರ ಜುಲೈನಲ್ಲಿ ಚಿತ್ರೀಕರಣ ಆರಂಭಿಸಲಿದ್ದು, ನವೆಂಬರ್ ವೇಳೆಗೆ ಚಿತ್ರೀಕರಣ ಮುಗಿಸಲು ತಯಾರಕರು ಪ್ರಯತ್ನಿಸುತ್ತಿದ್ದಾರೆ. ಅಪೂರ್ವ ಲಖಿಯಾ ಈ ಹಿಂದೆ ಏಕ್ ಅಜ್ನಬೀ, ಶೂಟೌಟ್ ಅಟ್ ಲೋಖಂಡ್ವಾಲಾ, ಜಂಜೀರ್ ಮತ್ತು ಹಸೀನಾ ಪಾರ್ಕರ್ ಎಂಬ ಆಕ್ಷನ್ ಥ್ರಿಲ್ಲರ್‌ಗಳನ್ನು ನಿರ್ದೇಶಿಸಿದ್ದಾರೆ.