- Home
- Entertainment
- Cine World
- ಕಮಲ್ ಹಾಸನ್ ಜೊತೆ ಲವ್ವು, ಗಂಡನ ಚಿತ್ರಹಿಂಸೆ; ಎಲ್ಲ ಆಸ್ತಿ ದಾನ ಮಾಡಿ ಪ್ರಾಣಬಿಟ್ಟ ದುರಂತ ನಟಿ!
ಕಮಲ್ ಹಾಸನ್ ಜೊತೆ ಲವ್ವು, ಗಂಡನ ಚಿತ್ರಹಿಂಸೆ; ಎಲ್ಲ ಆಸ್ತಿ ದಾನ ಮಾಡಿ ಪ್ರಾಣಬಿಟ್ಟ ದುರಂತ ನಟಿ!
ಕಮಲ್ ಹಾಸನ್ ಅವರನ್ನು ಪ್ರೀತಿ ಮಾಡಿದರೂ ಮದುವೆ ಮಾಡಿಕೊಳ್ಳಲಾಗಲಿದೆ. ಇತ್ತ ಮದುವೆಯಾದ ಗಂಡ ಕೊಡುತ್ತಿದ್ದ ಚಿತ್ರಹಿಂಸೆಯನ್ನು ಕೂಡ ಸಹಿಸಿಕೊಂಡಿದ್ದಳು. ಆದರೆ, ಗಂಭೀರ ಕಾಯಿಲೆಗೆ ತುತ್ತಾಗಿ ತನ್ನ ಸಂಪಾದನೆಯ ಎಲ್ಲಾ ಆಸ್ತಿಯನ್ನೂ ದಾನ ಮಾಡಿ ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸಿದ ಆ ಹೀರೋಯಿನ್ ಯಾರು ಗೊತ್ತಾ?

ಬೆಳ್ಳಿ ತೆರೆ ಮೇಲೆ ಮಿಂಚಿದ ನಟಿಯರ ನಗು ಹಿಂದೆ ಎಷ್ಟೋ ಕಷ್ಟದ ಕಥೆಗಳಿವೆ. ರಾಜಾ ತರ ಬದುಕಿ, ಮೋಸ ಹೋಗಿ ಕಷ್ಟ ಪಟ್ಟೋರು ಎಷ್ಟೋ ಜನ. ಅವರಲ್ಲಿ ಶ್ರೀವಿದ್ಯಾ ಕೂಡ ಒಬ್ಬರು. ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಶ್ರೀವಿದ್ಯಾ, ಆಮೇಲೆ ಹೀರೋಯಿನ್ ಆಗಿ ಕೆರಿಯರ್ ಬಿಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಆದ್ರು. ಹೀರೋ, ಹೀರೋಯಿನ್ ಅಮ್ಮನ ಪಾತ್ರ ಮಾಡ್ತಾ ಬ್ಯುಸಿ ಆದರು.
ತಂಗಿಂತ ದೊಡ್ಡ ಹೀರೋಗಳಿಗೂ ಅಮ್ಮನ ಪಾತ್ರ ಮಾಡಿದ್ರು. ಶ್ರೀವಿದ್ಯಾ ಕೆರಿಯರ್‌ನಲ್ಲಿ ಅನುಭವಿಸಿದ ಕಷ್ಟಗಳು ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಸೌತ್ ಫಿಲ್ಮ್ ಇಂಡಸ್ಟ್ರಿ ರೂಲ್ ಮಾಡಿದ್ರು, ಕಣ್ಣೀರಲ್ಲಿ ಮುಳುಗಿದ್ದರು. ಆದರೂ ಪ್ರೀತಿಸಿದ ವ್ಯಕ್ತಿಗೋಸ್ಕರ ತನ್ನ ಧರ್ಮವನ್ನೇ ಬದಲಿಸಿಕೊಂದು ಮದುವೆ ಮಾಡಿಕೊಂಡರು. ಇಷ್ಟಾದರೂ ಸುಖವಾಗಿ ಸಂಸಾರ ಮಾಡಲಾಗಲಿಲ್ಲ.
ಕೆ. ಬಾಲಚಂದರ್ ಡೈರೆಕ್ಷನ್ ಮಾಡಿದ ‘ಅಪೂರ್ವ ರಾಗಂಗಳ್’ನಲ್ಲಿ ರಜನೀಕಾಂತ್, ಕಮಲ್ ಹಾಸನ್ ಜೊತೆ ನಟಿಸಿದ ಶ್ರೀವಿದ್ಯಾ, ಕಮಲ್ ಜೊತೆ ಜಾಸ್ತಿ ಸಿನಿಮಾ ಮಾಡಿದ್ದಕ್ಕೆ ಇಬ್ಬರ ಮಧ್ಯೆ ಪ್ರೇಮ ಚಿಗುರಿತ್ತು. ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರಿಂದ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ, ಶ್ರೀವಿದ್ಯಾ ಅವರ ಅಮ್ಮ ಇವರ ಮದುವೆಗೆ ಒಪ್ಪಿಗೆ ಕೊಡಲಿಲ್ಲ. ಹೀಗಾಗಿ, 1978ರಲ್ಲಿ ಮಲಯಾಳಂ ಡೈರೆಕ್ಟರ್ ಜಾರ್ಜ್ ಥಾಮಸ್ ಜೊತೆ ಮದುವೆ ಆಯ್ತು.
ಆದರೆ, ಥಾಮಸ್ ಅವರೊಂದಿಗೆ ಮಾಡಿಕೊಂಡ ಮದುವೆ ಜೀವನ ನರಕವಾಯಿತು. ಮದುವೆ ಆದ್ಮೇಲೆ ಗಂಡ ಹೇಳಿದ ಅಂತ ಸಿನಿಮಾ ಬಿಟ್ಟರು. ಆಸ್ತಿ ಎಲ್ಲಾ ಗಂಡನಿಗೆ ಹೋಯಿತು. ಆಮೇಲೆ ಗಂಡ ತುಂಬಾ ಕಾಟ ಕೊಡೋಕೆ ಶುರು ಮಾಡಿದರು. ಜಗಳ ಜಾಸ್ತಿ ಆದಮೇಲೆ 1980ರಲ್ಲಿ ಡಿವೋರ್ಸ್ ತೆಗೆದುಕೊಂಡರು. ಆಮೇಲೆ ಶ್ರೀವಿದ್ಯಾ ಕಷ್ಟ ಪಡೋಕೆ ಶುರು ಮಾಡಿದರು. ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ 2ನೇ ಇನ್ನಿಂಗ್ಸ್ ಆರಂಭಿಸಿದರು.
ಆದರೆ, ಈ ಬಾರಿ ಹೀರೋಯಿನ್ ಆಗಿ ಅಲ್ಲ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಲೈಫ್ ಶುರು ಮಾಡಿದರು. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸೀರಿಯಲ್ ಹಾಗೂ ಸಿನಿಮಾ ಮಾಡಲಾರಂಭಿಸಿದರು. ತಮ್ಮ ದುಡಿಮೆಯ ದುಡ್ಡಿನಲ್ಲಿ ಜೀವನ ನಡೆಸುತ್ತಾ ಖುಷಿಯಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಶ್ರೀವಿದ್ಯಾ ಜೀವನ ಪುನಃ ಕಷ್ಟಕ್ಕೆ ಸಿಲುಕಿತು. ಗಂಭೀರ ಕಾಯಿಲೆಯೊಂದು ಅವರಿಕೆ ವಕ್ಕರಿತು.
ಕಳೆದೆರಡು ದಶಕದ ಹಿಂದೆ ಗುಣಮುಖವಾಗದ ಕಾಯಿಲೆ ಎಂದು ಹೇಳುತ್ತಿದ್ದ ಕ್ಯಾನ್ಸರ್ ಕಾಯಿಲೆಗೆ ತುತ್ತಾದರು. ಹೀಗಾಗಿ, 2003ರಲ್ಲಿ ತಾನು ದುಡಿದು ಸಂಪಾದನೆ ಮಾಡಿದ ಆಸ್ತಿಯನ್ನು ಸಂಗೀತ, ಡ್ಯಾನ್ಸ್ ಕಾಲೇಜ್‌ನಲ್ಲಿ ಓದುವ ಬಡ ಮಕ್ಕಳಿಗೆ ದಾನ ಮಾಡಿದರು. ಒಂದು ಫೌಂಡೇಶನ್ ಶುರು ಮಾಡಿ, ನಟರಿಂದ ದುಡ್ಡು ತಗೊಂಡು ಬಡ ಮಕ್ಕಳಿಗೆ ಕೊಟ್ಟಿದ್ದರು. ಕೊನೆಗೆ ಕ್ಯಾನ್ಸರ್ ಖಾಯಿಲೆಯಿಂದ ಬಳಲಿ 2006ರಲ್ಲಿ 53 ವರ್ಷಕ್ಕೆ ಅಸುನೀಗಿದರು.