ದಿಲ್ ಬೇಚಾರಾದ 'ಕಿಝಿ'ಗೆ ಕುಟುಂಬ ನೀಡಿದ ಸ್ವಾಗತ ಹೇಗಿತ್ತು?
ಮುಂಬೈ(ಜು. 26) ದಿಲ್ ಬೇಚಾರಾ ಸಿನಿಮಾದ ನಂತರ ನಮ್ಮ ನೆನಪಿನಲ್ಲಿ ಉಳಿಯುವುದು ನಾಯಕ ಸುಶಾಂತ್ ಸಿಂಗ್ ರಜಪೂತ್ ಮತ್ತು ನಾಯಕಿ ಸಂಜನಾ ಸಂಘಿ. ಆ ಪಾತ್ರಗಳ ಪೋಷಣೆಯೇ ಹಾಗಿದೆ. ಸುಶಾಂತ್ ನಮ್ಮಿಂದ ದೂರವಾಗಿದ್ದರೆ ಸಂಜನಾಗೆ ದಿಲ್ ಬೇಚಾರಾ ಸಿನಿಮಾ ಸ್ಟಾರ್ ಪಟ್ಟ ತಂದುಕೊಟ್ಟಿದೆ.
ಪ್ರಿಮಿಯರ್ ಶೋ ವೇಳೆ ಸಂಜನಾ ಕುಟುಂಬ ಆಕೆಗೆ ಶಕ್ತಿ ತುಂಬಲು ಏನು ಮಾಡಿತ್ತು ಎಂಬುದನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.
ತಮ್ಮ ಇಸ್ಟಾಗ್ರ್ಯಾಮ್ ಮೂಲಕ ವಿಷಯ ತಿಳಿಸಿರುವ ಸಂಜನಾ ಕುಟುಂಬದವರು ತನೆಗೆ ನೀಡಿದ ಸ್ವಾಗತದ ಪೋಟೋ ಶೇರ್ ಮಾಡಿದ್ದಾರೆ.
ಸಂಜನಾಗೆ ಕುಟುಂಬ ಕೆಂಪು ಹಾಸಿನ ಸ್ವಾಗತ ನೀಡಿದೆ.
ನಾನು ಸುಶಾಂತ್ ಸಿಂಗ್ ಅವರೊಂದಿಗೆ ಸೇರಿ ನಗರದಿಂದ ನಗರಕ್ಕೆ ತೆರಳಿ ಸಿನಿಮಾದ ಪ್ರಮೋಶನ್ ಮಾಡಬೇಕು ಎಂದುಕೊಂಡಿದ್ದೆ.
ಕೊರೋನಾ ಮತ್ತು ಬದಲಾದ ಪರಿಸ್ಥಿತಿ ಸಿನಿಮಾದ ಪ್ರಮೋಶನ್ ಗೆ ಅವಕಾಶ ನೀಡಲಿಲ್ಲ ಎಂದು ನಟಿ ಸಂದರ್ಶನವೊಂದರ ವೇಳೆ ಹೇಳಿಕೊಂಡಿದ್ದರು.
ಸುಶಾಂತ್ ಸಿಂಗ್ ನಮ್ಮನ್ನು ಮತ್ತು ಸಿನಿಮಾದ ಯಶಸ್ಸನ್ನು ನೋಡುತ್ತಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.
ಕ್ಯಾನ್ಸರ್ ರೋಗಿಗಳಾಗಿದ್ದವರ ಮಧ್ಯೆ ಹುಟ್ಟಿಕೊಳ್ಳುವ ಪ್ರೇಮ ಕತೆ ದಿಲ್ ಬೇಚಾರಾ
ಮುಖೇಶ್ ಛಾಬ್ರಾ ನಿರ್ದೇಶನದ ದಿಲ್ ಬೇಚಾರಾ ಸಿನಿಮಾ ಲಾಕ್ ಡೌನ್ ನಡುವೆ ಸಿನಿಮಾ ಮಂದಿರ ಇಲ್ಲದಿದ್ದರೂ ಆನ್ ಲೈನ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.