- Home
- Entertainment
- Cine World
- Richa Chadha: ನನ್ ಅ*ನ್, ನನ್ನ ಮಗು, ನನ್ನ ಮಾತು… ಟ್ರೋಲರ್ಸ್ ವಿರುದ್ಧ ಕೆಂಡ ಕಾರಿದ ರಿಚಾ ಚಡ್ಡಾ
Richa Chadha: ನನ್ ಅ*ನ್, ನನ್ನ ಮಗು, ನನ್ನ ಮಾತು… ಟ್ರೋಲರ್ಸ್ ವಿರುದ್ಧ ಕೆಂಡ ಕಾರಿದ ರಿಚಾ ಚಡ್ಡಾ
ಬಾಲಿವುಡ್ ನಟಿ ರಿಚಾ ಚಡ್ಡಾ ಇತ್ತೀಚೆಗೆ ತಮ್ಮ ತಾಯ್ತನದ ಪ್ರಯಾಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಜನ ಟ್ರೋಲ್ ಮಾಡಿದ್ದು, ಈಗ ನಟಿ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಬಾಲಿವುಡ್ ನಟಿ ರಿಚಾ ಚಡ್ಡಾ (Actress Richa Chadha) ತಮ್ಮ ಅಭಿಪ್ರಾಯವನ್ನು ಧೈರ್ಯದಿಂದ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಕಳೆದ ವರ್ಷ, ಅವರು ಮತ್ತು ಅವರ ಪತಿ ಅಲಿ ಫಜಲ್ ಮುದ್ದು ಮಗುವಿಗೆ ಪೋಷಕರಾಗಿ ಭಡ್ತಿ ಪಡೆದಿದ್ದರು. ಇತ್ತೀಚೆಗೆ, ನಟಿ ತಮ್ಮ ಮಗಳು ಜುನೈರಾ ಇಡಾ ಫಜಲ್ ಅವರ ಮೊದಲ ಹುಟ್ಟುಹಬ್ಬದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಜುಲೈ 16, 2025 ರಂದು, ರಿಚಾ ತಮ್ಮ ತಾಯ್ತನದ ಪ್ರಯಾಣದ ಭಾವನಾತ್ಮಕ ರೀಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರು, ಅದರಲ್ಲಿ ಅವರು ತಮ್ಮ ಗರ್ಭಧಾರಣೆಯ ಮತ್ತು ತಾಯಿಯಾಗುವ ಸುಂದರ ಕ್ಷಣಗಳನ್ನು ಹಂಚಿಕೊಂಡರು. ಆದರೆ ಈ ವಿಡಿಯೋದಿಂದಲೇ ಅವರು ಟ್ರೋಲ್ ಗಳಿಗೆ ಆಹಾರವಾದರು.
ರಿಚಾ ಚಡ್ಡಾ ತಮ್ಮ ಮಗಳ ಬಗ್ಗೆ ಏನು ಬರೆದಿದ್ದಾರೆ?
ನಟಿ ವೀಡಿಯೊವನ್ನು ಹಂಚಿಕೊಂಡಿದ್ದು, ಸಾಮಾನ್ಯ ಹೆರಿಗೆಯ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಬರೆದಿದ್ದಾರೆ. ಅವರು ಟಿಪ್ಪಣಿಯಲ್ಲಿ - ಹೆರಿಗೆ ನೋವಿನ (delivery pain) ನಂತರ ಪುಟ್ಟ ದೇವತೆ ಈ ಜಗತ್ತಿಗೆ ಹೇಗೆ ಬಂದರು ಎಂದೂ ಬರೆದಿದ್ದಾರೆ.
ನೈಸರ್ಗಿಕ ಹೆರಿಗೆಯ ಬಗ್ಗೆ ಚರ್ಚೆ
ನಮ್ಮ ಜೀವನಕ್ಕೆ ತುಂಬಾ ಬಣ್ಣವನ್ನು ಸೇರಿಸಿದ್ದಕ್ಕಾಗಿ ಜುನ್ನಿ ಧನ್ಯವಾದಗಳು! ಒಂದು ವರ್ಷದ ಹಿಂದೆ ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಹೆರಿಗೆ ನೋವು ಕೆಲವು ಗಂಟೆಗಳ ಕಾಲ ನಡೆಯಿತು, ಹೆರಿಗೆ ಕೇವಲ 20 ನಿಮಿಷಗಳಲ್ಲಿ ಸಂಭವಿಸಿತು. ನ್ಯಾಚುರಲ್ ಡೆಲಿವರಿ (Natural delivery)! ಅಂದಿನಿಂದ ಜೀವನವು ಒಂದೇ ಆಗಿಲ್ಲ, ವಿಶೇಷವಾಗಿ ನನ್ನದು... ನಾನು ಒಳಗಿನಿಂದ ಹೊರಗಿನಿಂದ ಸಂಪೂರ್ಣವಾಗಿ ಬದಲಾಗಿದ್ದೇನೆ ಎಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ. .
ತನ್ನ ಮಗಳನ್ನು ನನಗೆ ಸಿಕ್ಕ ಆಶೀರ್ವಾದ ಎಂದ ನಟಿ
ನನ್ನ ಮನಸ್ಸು, ನನ್ನ ಹೃದಯ, ನನ್ನ ದೇಹ, ನನ್ನ ಆತ್ಮ. ಜುನೈರಾ ಒಂದು ವರ್ಷದ ಹಿಂದೆ ಜನಿಸಿದಳು ಮತ್ತು ನಾನು ತಾಯಿಯಾಗಿ ಜನಿಸಿದೆ. ಸಂಪೂರ್ಣವಾಗಿ ಹೊಸ ಅಸ್ತಿತ್ವ. ನನ್ನ ಕನಸಿನ ರಾಜಕುಮಾರ ಮತ್ತು ಮಗುವಿನೊಂದಿಗಿನ ಜೀವನ... ಇದು ಆಶೀರ್ವಾದವಲ್ಲದೇ ಮತ್ತಿನ್ನೇನು ಎಂದು ಬರೆದುಕೊಂಡಿದ್ದಾರೆ.
"ವಜೈನಲ್ ಡೆಲಿವರಿ"
ರಿಚಾ ಅವರ ಪೋಸ್ಟ್ ನಂತರ, ಜನರು ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು. ಒಬ್ಬ ಬಳಕೆದಾರರು ಬರೆದಿದ್ದಾರೆ, ಪ್ರತಿ ಹೆರಿಗೆಯೂ ಸಹಜ, ವಿಜ್ಞಾನಕ್ಕೆ ಧನ್ಯವಾದಗಳು, ಇತ್ತೀಚಿನ ದಿನಗಳಲ್ಲಿ ತಾಯಿ ಮತ್ತು ಮಗು ಇಬ್ಬರಿಗೂ ಸಹಾಯ ಮಾಡಲಾಗುತ್ತಿದೆ. ಮತ್ತೊಬ್ಬ ಬಳಕೆದಾರರು ಅವರು ವಜೈನಲ್ ಡೆಲಿವರಿ (vaginal delivery) ಎನ್ನುವ ಪದ ಬಳಕೆ ಮಾಡಿ ಎಂದಿದ್ದಾರೆ.
ನಟಿ ಹೇಳಿದ್ದೇನು?
ರಿಚಾ ಇದಕ್ಕೆ ಉತ್ತರಿಸುತ್ತಾ, ನಾನು ‘ವಜೈನಲ್ ಡೆಲಿವರಿ’ ಎಂದು ಹೇಳಲು ಬಯಸದಿದ್ದರೆ ಏನು? ಇದು ನನ್ನ ಪೋಸ್ಟ್, ನನ್ನ ದೇಹ, ನನ್ನ ಯೋನಿ ಮತ್ತು ನನ್ನ ಮಗು. ಸ್ತ್ರೀವಾದವು ನನಗೆ ನನ್ನ ಸ್ವಂತ ಪದಗಳನ್ನು ಆಯ್ಕೆ ಮಾಡಬಹುದು ಎಂದು ಕಲಿಸಿದೆ ಎಂದು ಹೇಳಿದ್ದಾರೆ. ಆಮೇಲೆ ಈ ಮೆಸೇಜ್ ಡಿಲೀಟ್ ಮಾಡಿದ್ದಾರೆ.