ನಿನಾಸಂ ಸತೀಶ್ ತಮಿಳು ಚಿತ್ರಕ್ಕೆ ರಮ್ಯಾ ಸಾಥ್.. ಪೋಸ್ಟರ್ ಬಿಡುಗಡೆ ಮಾಡಿದ ಕ್ವೀನ್
ಬೆಂಗಳೂರು(ಸೆ. 08) ಸ್ಯಾಂಡಲ್ ವುಡ್ ಅನ್ನು ಒಂದು ಕಾಲದಲ್ಲಿ ಆಳಿದ್ದ ಕ್ವೀನ್ ನಟಿ ರಮ್ಯಾ ನಿಧಾನಕ್ಕೆ ನಟನೆಯಿಂದ ದೂರವಾಗಿದ್ದರು. ಆದರೆ ಸೋಶಿಯಲ್ ಮೀಡಿಯಾ ಮೂಲಕ ಆಗಾಗ ಅಪ್ ಡೇಟ್ ಕೊಡುತ್ತಲೇ ಇದ್ದರು. ಮತ್ತೊಂದು ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ನಟ ಸತೀಶ್ ನಿನಾಸಂ ಸಿನಿಮಾಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಾಥ್ ನೀಡಿದ್ದಾರೆ ಸತೀಶ್ ಅಭಿನಯದ ತಮಿಳಿನ ಚಿತ್ರದ ಪೋಸ್ಟರ್ ರಿವಿಲ್ ರಮ್ಯಾ ಮಾಡಲಿದ್ದಾರೆ.
ಪಗೈವನುಕು ಅರುಳ್ವಾಯ್ ಚಿತ್ರದಲ್ಲಿ ನಾಯಕನಾಗಿ ಸತೀಶ್ ಕಾಣಿಸಿಕೊಂಡಿದ್ದಾರೆ. ರಮ್ಯಾ ಅವರಿಗೆ ತಮಿಳಿನಲ್ಲಿಯೂ ಅಭಿಮಾನಿಗಳಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಬೆಂಬಲ ಕೊಡ್ತಿರೋ ರಮ್ಯಾ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಕನ್ನಡ ಸಿನಿಮಾಗಳ ಪ್ರಚಾರ ಮಾಡುತ್ತಿದ್ದಾರೆ.
ಸತೀಶ್ ಅಭಿನಯದ ತಮಿಳು ಚಿತ್ರದ ಪೋಸ್ಟರ್ ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್ ನಲ್ಲಿ ಬಿಡುಗಡೆ ಮಾಡಲಿದ್ದು ಸಹಜವಾಗಿ ರಮ್ಯಾ ಮತ್ತು ಸತೀಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸ್ಯಾಂಡಲ್ ವುಡ್ ಅನ್ನು ಒಂದು ಕಾಲದಲ್ಲಿ ಆಳಿದ್ದ ಕ್ವೀನ್ ನಟಿ ರಮ್ಯಾ ನಿಧಾನಕ್ಕೆ ನಟನೆಯಿಂದ ದೂರವಾಗಿದ್ದರು. ಆದರೆ ಸೋಶಿಯಲ್ ಮೀಡಿಯಾ ಮೂಲಕ ಆಗಾಗ ಅಪ್ ಡೇಟ್ ಕೊಡುತ್ತಲೇ ಇದ್ದರು. ಮತ್ತೊಂದು ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ರಮ್ಯಾ ತಮ್ಮ ಇಸ್ಟಾ ಪೇಜ್ ನಲ್ಲಿ ಚಿತ್ರದದ ಪೋಸ್ಟರ್ ಲಾಂಚ್ ಮಾಡಿ ನಿನಾಸಂ ಸತೀತ್ ಗೆ ಶುಭ ಕೋರಿದ್ದಾರೆ. ಸತೀಶ್ ಸಹ ರಮ್ಯಾ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.