ಮದುವೆಗೆ ಮೊದಲು ಸೆಕ್ಸ್ ಮಾಡೋದ್ರಲ್ಲಿ ಒಂಚೂರು ತಪ್ಪಿಲ್ಲ ಎಂದ ಖ್ಯಾತ ನಟಿ
ಕೆಲ ನಟ-ನಟಿಯರು ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಗುಪ್ತ ವಿಷಯಗಳ ಬಗ್ಗೆ ಏನೇನೋ ಮಾತನಾಡಿ ವಿವಾದವನ್ನು ಸೃಷ್ಟಿಸುತ್ತಾರೆ. ಸದ್ಯ ಖ್ಯಾತ ನಟಿಯೊಬ್ಬರು ಸೆಕ್ಸ್ ಬಗ್ಗೆ ಬೋಲ್ಡ್ ಆಗಿ ಮಾತನಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಕೆಲ ನಟ-ನಟಿಯರು ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವುದು ಇತ್ತೀಚೆಗೆ ಒಂದು ಖಯಾಲಿ ಆಗಿದೆ. ಸದ್ಯ ತೆಲುಗಿನ ಖ್ಯಾತ ನಟಿಯೊಬ್ಬರು ಸೆಕ್ಸ್ ಬಗ್ಗೆ ಬೋಲ್ಡ್ ಆಗಿ ಮಾತನಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ತೆಲುಗು ನಟಿ ರಾಪಕಾ, ಸಂದರ್ಶನವೊಂದರಲ್ಲಿ ರಾಪಕಾ ಸೆಕ್ಸ್ ಬಗ್ಗೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಮದುವೆಗೂ ಮುಂಚೆ ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.
Rebaka
ಅದಕ್ಕೆ ಕಾರಣವನ್ನೂ ಸಹ ನೀಡಿರುವ ರಾಪಕಾ, ಮದುವೆಯಾದ ಬಳಿಕ ನಿಮ್ಮ ಸಂಗಾತಿ ಗಂಡಸಲ್ಲ ಎಂದು ಗೊತ್ತಾದರೆ ನಿಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿ ಅಡ್ವಾನ್ಸ್‌ಗೆ ಮೊದಲೇ ಸೆಕ್ಸ್ ಮಾಡಿಕೊಂಡು ಈ ಬಗ್ಗೆ ತಿಳಿಯುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಇದಕ್ಕೆ ತಮ್ಮ ಸ್ನೇಹಿತೆಯ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿ, ಉದಾಹರಣೆಯನ್ನು ಸಹ ನೀಡಿದ್ದಾರೆ.
ನನ್ನ ಸ್ನೇಹಿತೆ ವೈದ್ಯರೊಬ್ಬರನ್ನು ಮದುವೆ ಆಗಿದ್ದಳು. ಆಕೆಯ ಮೊದಲ ರಾತ್ರಿಯ ಸಮಯದಲ್ಲಿ ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬುದು ಆಕೆಗೆ ತಿಳಿದು ಬಂತು. ಆಕೆಯ ವೈವಾಹಿಕ ಬದುಕು ಸಂಪೂರ್ಣವಾಗಿ ಹಾಳಾಯಿತು. ಹೀಗಾಗಿ ಮದುವೆಗೂ ಮುಂಚೆ ಸೆಕ್ಸ್ ಮಾಡಿದರೆ ತನ್ನ ಸಂಗಾತಿಯ ಬಗ್ಗೆ ತಿಳಿಯುತ್ತದೆ ಎಂದು ರಾಪಕಾ ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸ್ ತುಂಬಾ ಮುಖ್ಯ. ಅದನ್ನು ಕೊಡಲಾಗದವನ್ನು ಮದುವೆಯಾಗಿ ಪಶ್ಚಾತ್ತಾಪ ಪಡುವುದು ಸರಿಯಲ್ಲ ಎಂದು ರಾಪಕಾ ಹೇಳಿದ್ದಾರೆ. ಇದೀಗ ರಾಪಕಾ ಅವರ ಬೋಲ್ಡ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆ ಆರಂಭವಗಿದೆ. ಕೆಲವರು ಆಕೆಯನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಆಕೆಯ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ.
ರಬಕಾ ಅವರ ಸಿನಿ ಪ್ರಯಾಣವು ತೆಲುಗು ಚಿತ್ರಗಳಿಗೆ ವಸ್ತ್ರ ವಿನ್ಯಾಸಕರಾಗಿ ಪ್ರಾರಂಭವಾಯಿತು. ನಂತರ ಅವರು, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ನಾಗನಾಥ್ ಚಿತ್ರದಲ್ಲಿ ನಟಿಸಿದರು. ಇದು ಅವರಿಗೆ ಸ್ಪಲ್ಪ ಮಟ್ಟಿಗೆ ಫೇಮ್ ತಂದಿತು. ತೀರಾ ಇತ್ತೀಚೆಗೆ, ರಾಪಕಾ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಮತ್ತೆ ಗಮನ ಸೆಳೆದರು.