- Home
- Entertainment
- Cine World
- ನಾನು ಸ್ಟಾರ್ ಕಿಡ್ ಅಲ್ಲ ಅಂತಲೇ ಪವನ್ ಕಲ್ಯಾಣ್, ಪ್ರಭಾಸ್‌ರ ರಹಸ್ಯ ಬಾಯ್ಬಿಟ್ಟ ನಟಿ ನಿಧಿ ಅಗರ್ವಾಲ್!
ನಾನು ಸ್ಟಾರ್ ಕಿಡ್ ಅಲ್ಲ ಅಂತಲೇ ಪವನ್ ಕಲ್ಯಾಣ್, ಪ್ರಭಾಸ್‌ರ ರಹಸ್ಯ ಬಾಯ್ಬಿಟ್ಟ ನಟಿ ನಿಧಿ ಅಗರ್ವಾಲ್!
ಯಂಗ್ ಬ್ಯೂಟಿ ನಿಧಿ ಅಗರ್ವಾಲ್ ಈಗ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಒಂದು ಕಡೆ ಪವನ್ ಕಲ್ಯಾಣ್ ಜೊತೆ 'ಹರಿಹರ ವೀರಮಲ್ಲು', ಇನ್ನೊಂದು ಕಡೆ ಪ್ರಭಾಸ್ ಜೊತೆ 'ರಾಜಾ ಸಾಬ್'.

ಯಂಗ್ ಬ್ಯೂಟಿ ನಿಧಿ ಅಗರ್ವಾಲ್ ಈಗ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಒಂದು ಕಡೆ ಪವನ್ ಕಲ್ಯಾಣ್ ಜೊತೆ 'ಹರಿಹರ ವೀರಮಲ್ಲು', ಇನ್ನೊಂದು ಕಡೆ ಪ್ರಭಾಸ್ ಜೊತೆ 'ರಾಜಾ ಸಾಬ್'. ಈ ಎರಡೂ ಸಿನಿಮಾಗಳ ಬಗ್ಗೆ ನಿಧಿ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. 2022ರ ನಂತರ ನಿಧಿಯ ಒಂದೂ ಸಿನಿಮಾ ಬಿಡುಗಡೆಯಾಗಿಲ್ಲ.
ನಾನು ಸ್ಟಾರ್ ಕಿಡ್ ಅಲ್ಲ, ಸಿನಿಮಾ ಬ್ಯಾಗ್ರೌಂಡ್ ಇಂದ ಬಂದವಳಲ್ಲ. ನನಗೆ ಅವಕಾಶಗಳು ಸಿಕ್ತಿರೋದೇ ದೊಡ್ಡದು. ಎಲ್ಲ ನಟಿಯರಿಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಒಳ್ಳೆ ಕಥೆಗಳನ್ನ ಆಯ್ಕೆ ಮಾಡ್ಕೊಳ್ಳೋದು ಮುಖ್ಯ. ನಾನು ಈಗ ನಂಬಿಕೆ ಇರೋ ಕಥೆಗಳನ್ನೇ ಆರಿಸ್ಕೊಳ್ತಿದ್ದೀನಿ. ಒಂದೇ ರೀತಿ ಸಿನಿಮಾ ಮಾಡ್ತಿದ್ರೆ ಟೀಕೆಗಳು ಬರುತ್ತೆ.
ಅದಕ್ಕೆ ಒಳ್ಳೆ ಕಥೆಗಳ ಮೇಲೆ ನಾನು ಫೋಕಸ್ ಮಾಡ್ತಿದ್ದೀನಿ. 'ಹರಿಹರ ವೀರಮಲ್ಲು' ನನ್ನ ಕೆರಿಯರ್ ನ ಬೆಸ್ಟ್ ಪಾತ್ರ. ಈ ಸಿನಿಮಾಗಾಗಿ ನಾನು ಕುದುರೆ ಸವಾರಿ, ಕಥಕ್ ನೃತ್ಯ ಕಲಿತಿದ್ದೀನಿ. ಈ ಚಿತ್ರದಲ್ಲಿ ನಟಿಸಿರೋದು ನನ್ನ ಅದೃಷ್ಟ ಅಂತ ನಿಧಿ ಹೇಳಿದ್ದಾರೆ.
'ರಾಜಾ ಸಾಬ್' ವಿಷಯಕ್ಕೆ ಬಂದ್ರೆ, ಹಾರರ್ ಸಿನಿಮಾ ಅಂದ್ರೆ ಭಯ ಇತ್ತು. ಆದ್ರೆ ಈ ಚಿತ್ರದಲ್ಲಿ ಖುಷಿ ಪಟ್ಟು ನಟಿಸ್ತಿದ್ದೀನಿ. ಪವನ್ ಕಲ್ಯಾಣ್, ಪ್ರಭಾಸ್ ಇಬ್ಬರ ಪ್ರೋತ್ಸಾಹ ಮರೆಯೋಕೆ ಆಗಲ್ಲ. ಪವನ್ ಸೆಟ್ ನಲ್ಲಿ ತುಂಬಾ ಏಕಾಗ್ರತೆಯಿಂದ ಇರ್ತಾರೆ. ಬೇರೆ ವಿಷಯಗಳನ್ನ ಲೆಕ್ಕಕ್ಕೆ ತಗೋಳ್ಳಲ್ಲ. ಅವರಿಂದ ನಾನು ಆ ಗುಣ ಕಲಿತಿದ್ದೀನಿ. 'ರಾಜಾ ಸಾಬ್', 'ಹರಿಹರ ವೀರಮಲ್ಲು' ಎರಡೂ ಸಿನಿಮಾಗಳು ಸಮ್ಮರ್ ಗೆ ರಿಲೀಸ್ ಆಗ್ತಿದೆ.