ಈ ನಟಿ ಶಮ್ಮಿ ಕಪೂರ್‌ರನ್ನು ಮದುವೆಯಾಗಲು ನಿರಾಕರಿಸಿದ್ದೇಕೆ ಗೊತ್ತಾ?

First Published 31, Jul 2020, 8:17 PM

ಹಿಂದಿ ಸಿನಿಮಾದ ಪ್ರಸಿದ್ಧ ನಟಿ ಮುಮ್ತಾಜ್ 73ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜುಲೈ 31, 1947 ರಂದು ಮುಂಬೈನಲ್ಲಿ ಜನಿಸಿದ ಮುಮ್ತಾಜ್ 1961ರ ಸ್ಟ್ರೀಟ್ ಚಿತ್ರದೊಂದಿಗೆ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 60 ಮತ್ತು 70 ರ ದಶಕಗಳಲ್ಲಿ ರೋಮ್ಯಾಟಿಕ್‌ ಮತ್ತು ಎಮೋಷನಲ್‌ ನಟನೆಯಿಂದ ಪ್ರೇಕ್ಷಕರ ಮನ ಗೆದ್ದ ಬಾಲಿವುಡ್ ನಟಿಯರಲ್ಲಿ ಮುಮ್ತಾಜ್ ಒಬ್ಬರು. ಮುಮ್ತಾಜ್ ಜೊತೆ ಶಮ್ಮಿ ಕಪೂರ್ ಮತ್ತು ರಾಜೇಶ್ ಖನ್ನಾ ಜೋಡಿಯಾಗಿರುವ ಚಿತ್ರವನ್ನು ಜನರು ಹೆಚ್ಚು  ಇಷ್ಟ ಪಟ್ಟಿದ್ದರು. ಆದಾಗ್ಯೂ, 1974 ರಲ್ಲಿ ಮುಮ್ತಾಜ್ ಮಯೂರ್ ಮಾಧ್ವಾರನ್ನು ವಿವಾಹವಾದರು  ನಂತರ, ಅವರು ಆಯ್ದ ಕೆಲವು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡರು.

ಬಾಲಿವುಡ್‌ ಫೇಮಸ್‌ ನಟಿ ಮುಮ್ತಾಜ್  ಕರೀನಾಳ ಅಜ್ಜ ಶಮ್ಮಿ ಕಪೂರ್‌ರನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಏನು ನೋಡಿ, ಇಲ್ಲಿದೆ.

ಮುಮ್ತಾಜ್‌ಗೆ 18 ವರ್ಷ ವಯಸ್ಸಾಗಿದ್ದಾಗ, ಶಮ್ಮಿ ಕಪೂರ್ ಆಕೆಗೆ ಮದುವೆ ಪ್ರಪೋಸ್‌ ಮಾಡಿದ್ದರು. ಆ ಸಮಯದಲ್ಲಿ ಮುಮ್ತಾಜ್ ಕೂಡ ಶಮ್ಮಿಯನ್ನು ಪ್ರೀತಿಸುತ್ತಿದ್ದರು. ಸಿನಿಮಾ ಕೆರಿಯರ್‌ಯನ್ನು ಬಿಟ್ಟು ಮದುವೆಯಾಗಬೇಕೆಂದು ಶಮ್ಮಿ ಬಯಸಿದ್ದರು. ಆದರೆ ನಟಿಗೆ ಯಾವುದೇ ಕಾರಣಕ್ಕೂ ತನ್ನ ಪ್ರೊಫೇಶನಲ್ ಲೈಫ್‌ ಬಿಡಲು ಇಷ್ಟವಿರಲಿಲ್ಲ.

ಅಂತಹ ಪರಿಸ್ಥಿತಿಯಲ್ಲಿ, ಮುಮ್ಮತಾಜ್ ಶಮ್ಮಿ ಕಪೂರ್‌ನ್ನು ಮದುವೆಯಾಗಲು ನಿರಾಕರಿಸಿದರು ಮತ್ತು ಹೀಗೆ ಇಬ್ಬರ ಸಂಬಂಧ ಕೊನೆಗೊಂಡಿತು. 'ಬ್ರಹ್ಮಚಾರಿ' ಎಂಬ ಒಂದೇ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ಮುಮ್ತಾಜ್-ಶಮ್ಮಿ ಶೂಟ್‌ ಮಾಡಿದ್ದ  ಆ ಸಿನಿಮಾದ 'ಅಜಲ್ ತೇರೆ ಮೇರೆ ಪ್ಯಾರ್ ಕೆ ಚಾರ್ಚೆ ಹರ್ ಜುಬನ್ ..'  ಹಾಡು ಸಖತ್‌ ಫೇಮಸ್‌ ಆಗಿತ್ತು.

13ನೇ ವಯಸ್ಸಿಗೇ ಸಿನಿಮಾಜಗತ್ತಿಗೆ ಕಾಲಿಟ್ಟ ಮುಮ್ತಾಜ್ ಪ್ರಸಿದ್ಧಿಯಾಗುತ್ತಿದ್ದಂತೆ, ಆಕೆಯ ಆಫೇರ್‌ ಕಥೆಗಳೂ ಜನಪ್ರಿಯವಾಗಿದ್ದವು. ಅವರ ಹೆಸರು  ಹಲವಾರು ಸಹನಟರೊಂದಿಗೆ ಕೇಳಿ ಬಂದಿತ್ತು.

ಮುಮ್ತಾಜ್ ತಾಯಿ ನಾಜ್ ಮತ್ತು ಆಂಟಿ ನಿಲೋಫಾರ್ ಇಬ್ಬರೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು, ಆದರೆ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿ  ಮಾತ್ರ ಕೆಲಸ ಮಾಡಿದರು. 60ರ ದಶಕದಲ್ಲಿ, ಮೊದಲು ಸಣ್ಣ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದ ಮುಮ್ತಾಜ್ ದಾರಾ ಸಿಂಗ್ ಜೊತೆ ಕೆಲಸ ಮಾಡಿದಾಗ ಅದೃಷ್ಟ ಖುಲಾಯಿಸಿರು.

ಆ ಸಮಯದಲ್ಲಿ, ದಾರಾ ಸಿಂಗ್‌ರಂತಹ ಪ್ರಬಲ ನಟರೊಂದಿಗೆ ಕೆಲಸ ಮಾಡಲು ನಟಿಯರು ಕಾಯುತ್ತಿದ್ದರು. ಆದರೆ ಮುಮ್ತಾಜ್ ದಾರಾ ಸಿಂಗ್‌ ಜೊತೆಗೆ ಒಂದರ ನಂತರ ಒಂದರಂತೆ 16 ಚಿತ್ರಗಳನ್ನು ಮಾಡಿದರು. ಸುಮಾರು 10 ಚಿತ್ರಗಳು ಹಿಟ್ ಎಂದು ಸಾಬೀತಾಯಿತು. ಇಲ್ಲಿಂದಲೇ ಮುಮ್ತಾಜ್ ಅವರ ಯಶಸ್ಸಿನ ಜರ್ನಿ ಪ್ರಾರಂಭವಾಯಿತು.

ದಾರಾ ಸಿಂಗ್ ನಂತರ ಮುಮ್ತಾಜ್ ದೇಶದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಸೇರಿದರು. ಈ ಅವಧಿ ಮುಮ್ತಾಜ್ ಕೆರಿಯರ್‌ನ ಗೋಲ್ಟನ್‌ ಎರಾ  ಎಂದು ಸಾಬೀತಾಯಿತು. ರಾಜೇಶ್ ಖನ್ನಾ ಮತ್ತು ಮುಮ್ತಾಜ್ ಜೋಡಿ  'ದೋ ರಾಸ್ತಾ', 'ಸಚ್ಚಾ ಝೂಟಾ', 'ಆಪ್ಕಿ ಕಸಮ್', 'ಅಪ್ನಾ ದೇಶ', 'ಪ್ರೇಮ್ ಕಹಾನಿ', 'ದುಷ್ಮನ್', 'ಬಂಧನ್' ಮತ್ತು 'ರೋಟಿ' ಅಂತಹ ಅನೇಕ ಸೂಪರ್‌ಹಿಟ್‌ ಹಾಗೂ ಸದಾ ನೆನಪುಳಿಯುವ ಸಿನಿಮಾಗಳನ್ನು ನೀಡಿತ್ತು.

ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುವಾಗ, ಈ ಕಪಲ್‌ ರಿಯಲ್‌ ಲೈಫ್‌ನಲ್ಲೂ  ತುಂಬಾ ಹತ್ತಿರವಾಯಿತು ಎಂದು ಹೇಳಲಾಗುತ್ತದೆ. ಮುಮ್ತಾಜ್ 1974 ರಲ್ಲಿ ಮಯೂರ್ ಮಾಧ್ವಾನಿರನ್ನು ಮದುವೆಯಾದಾಗಲೂ ರಾಜೇಶ್ ಖನ್ನಾ ತುಂಬಾ ಬೇಸರಗೊಂಡಿದ್ದರು. ಮುಮ್ತಾಜ್ ಇಷ್ಟು ಬೇಗ ಮದುವೆಯಾಗುವುದು ರಾಜೇಶ್ ಖನ್ನಾಗೆ ಇಷ್ಟವಿರಲಿಲ್ಲ.

2007 ರಲ್ಲಿ ಮುಮ್ತಾಜ್ ಮುಂಬೈನಲ್ಲಿದ್ದಾಗ, ತನ್ನ ಸೋದರಳಿಯ ಶಾದ್ ರಾಂಧವರ ಚಿತ್ರ ಆವರಪನ್ ಚಿತ್ರದ ಶೂಟಿಂಗ್ ನೋಡಲು ಹೋಗಿದ್ದರು ಎಂದು ಮುಮ್ತಾಜ್ ಸಹೋದರ ಶಾರುಖ್ ಅಸ್ಕರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಶೂಟಿಂಗ್ ಸಮಯದಲ್ಲಿ,  ಇಂದಿನ ನಟರಿಗೆ ಎಷ್ಟು ಅನುಕೂಲವಿದೆ. ನಮ್ಮ ಸಮಯದಲ್ಲಿ, ಅನೇಕ ಬಾರಿ ನಾವು ಕಾಡಿನಲ್ಲಿ ಬಟ್ಟೆ ಬದಲಾಯಿಸಬೇಕಾಗಿತ್ತು. ಇಬ್ಬರು ಬಟ್ಟೆಯನ್ನು ಪರದೆಯಾಗಿ ಹಿಡಿಯುತ್ತಿದ್ದರು. ಅಲ್ಲಿಯೇ ಬಟ್ಟೆ ಬದಲಾಯಿಸಬೇಕಾಗಿತ್ತು' ಎಂದು ಮುಮ್ತಾಜ್ ವ್ಯಾನಿಟಿ ವ್ಯಾನ್ ನೋಡಿ ಹೇಳಿದರಂತೆ.

ಮುಮ್ತಾಜ್  2000 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದರ ವಿರುದ್ಧ ಹೋರಾಡಿ ಈಗ  ಸಂಪೂರ್ಣ ಗುಣವಾಗಿದ್ದಾರೆ. ಲಂಡನ್‌ನಲ್ಲಿ ಬಹಳ ಕಾಲ ವಾಸಿಸುತ್ತಿದ್ದರು.

ಅವರ ಹಿರಿಯ ಮಗಳು ನತಾಶಾ ಫಿರೋಜ್ ಖಾನ್‌ರ ಮಗ ಫರ್ದೀನ್‌ರನ್ನು ಮದುವೆಯಾಗಿ, ಆವರೂ ಲಂಡನ್‌ನಲ್ಲಿ ನೆಲೆಸಿದರು. ಕಿರಿಯ ಮಗಳು ತಾನ್ಯಾ ರೋಮ್‌ನಲ್ಲಿದ್ದಾರೆ.

ಪತಿ ಮಯೂರ್ ಮಾಧ್ವಾನಿ ಮತ್ತು ಹೆಣ್ಣು ಮಕ್ಕಳೊಂದಿಗೆ ಮುಮ್ತಾಜ್.

ಪತಿ ಮಯೂರ್ ಮಾಧ್ವಾನಿ ಜೊತೆ ಮುಮ್ತಾಜ್.

ಪತಿ ಮಯೂರ್ ಮಾಧ್ವಾನಿ ಜೊತೆ ಮುಮ್ತಾಜ್.

loader