- Home
- Entertainment
- Cine World
- ಕಲರ್‌ಫುಲ್ ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಸೀತಾ ರಾಮಂ ನಟಿ: ಮೃಣಾಲ್ ಅಂದಕ್ಕೆ ನಗುವೆ ಬಂಗಾರ ಎಂದ ಫ್ಯಾನ್ಸ್!
ಕಲರ್‌ಫುಲ್ ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಸೀತಾ ರಾಮಂ ನಟಿ: ಮೃಣಾಲ್ ಅಂದಕ್ಕೆ ನಗುವೆ ಬಂಗಾರ ಎಂದ ಫ್ಯಾನ್ಸ್!
ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೃಣಾಲ್ ಠಾಕೂರ್ ಟಾಲಿವುಡ್‌ನಲ್ಲಿ ದಿನದಿಂದ ದಿನಕ್ಕೆ ತಮ್ಮ ಸ್ಟಾರ್‌ಡಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶ ಗಿಟ್ಟಿಸಿಕೊಂಡು, ತೆಲುಗಿನಲ್ಲಿಯೇ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಸಿನಿಮಾ ಹೊರತುಪಡಿಸಿದರೆ, ಫ್ಯಾಷನ್ ವಿಚಾರದಲ್ಲೂ ಮೃಣಾಲ್ ಅಷ್ಟೇ ಮುಂದು. ಆಗಾಗ ಗ್ಲಾಮರಸ್ ಮತ್ತು ಹಾಟ್ ಲುಕ್‌ನಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಹೊಸ ಆಕರ್ಷಕ ಫೋಟೋಶೂಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್‌ನಲ್ಲಿ ನಟಿ ಮೃಣಾಲ್ ಠಾಕೂರ್ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ಮೃಣಾಲ್ ಬಹುವರ್ಣದ ಅನಾರ್ಕಲಿ ಡ್ರೆಸ್ ತೊಟ್ಟು ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ನೆಟ್ಟಿಗರು ಸಹ ಮೃಣಾಲ್ ಅಂದಕ್ಕೆ ಮನಸೋತಿದ್ದಾರೆ.
ಮೃಣಾಲ್ ಠಾಕೂರ್ ನಟಿಸಿರುವ ಹಾಯ್ ನಾನ್ನ ಸಿನೆಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಯಶನಾ ಮತ್ತು ವರ್ಷ ಎಂಬ ಎರಡು ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆಲುಗು, ತಮಿಳು ಮಾತ್ರವಲ್ಲದೆ ಕನ್ನಡದಲ್ಲಿಯೂ ಬಿಡುಗಡೆಯಾಗಿತ್ತು.
ಮೃಣಾಲ್ ಠಾಕೂರ್ ಅವರು ಹಿಂದಿ ಮತ್ತು ತೆಲುಗು ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಮುಜ್ಸೆ ಕುಚ್ ಕೆಹ್ತಿ ಹೆಸರಿನ ಟೆಲಿವಿಷನ್ ಕಾರ್ಯಕ್ರಮದಲ್ಲಿ ಮೊದಲು ಇವರು ಕಾಣಿಸಿಕೊಂಡರು.
2018ರಲ್ಲಿ ಲವ್ ಸೋನಿಯಾ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಸೂಪರ್ 30 ಮತ್ತು ಬಾಟ್ಲಾ ಹೌಸ್‌ನಲ್ಲಿ ಇವರ ನಟನೆ ಎಲ್ಲರ ಗಮನ ಸೆಳೆದಿತ್ತು. ಈ ಸಿನಿಮಾಗಳು ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟವು.
2022ರಲ್ಲಿ ಸೀತಾ ರಾಮಂ ಸಿನಿಮಾದಲ್ಲಿ ನಟಿಸಿದರು. ಇದು ಇವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ಸಿನೆಮಾದ ನಟನೆಗಾಗಿ ಇವರು ಎರಡು ಸೈಮಾ ಪ್ರಶಸ್ತಿ ಪಡೆದರು. ನಂತರ 2023ರಲ್ಲಿ ಹಾಯ್ ನಾನ್ನ ಸಿನಿಮಾದಲ್ಲಿ ನಟಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.