- Home
- Entertainment
- Cine World
- ಇತ್ತೀಚೆಗೆ ವಿವಾಹವಾದ 38ರ ಮಹಿರಾ ಖಾನ್ ಗರ್ಭಿಣಿ! ಹಲವು ಬಿಗ್ ಪ್ರಾಜೆಕ್ಟ್ ಕೈ ಬಿಟ್ರಾ ನಟಿ?
ಇತ್ತೀಚೆಗೆ ವಿವಾಹವಾದ 38ರ ಮಹಿರಾ ಖಾನ್ ಗರ್ಭಿಣಿ! ಹಲವು ಬಿಗ್ ಪ್ರಾಜೆಕ್ಟ್ ಕೈ ಬಿಟ್ರಾ ನಟಿ?
2017 ರ ರಯೀಸ್ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಜೊತೆಗೆ ನಟಿಸಿ ಭಾರತದಲ್ಲಿ ಅಪಾರ ಹೆಸರು ಮಾಡಿದಾಕೆ ನಟಿ ಮಹಿರಾ ಖಾನ್. ಇತ್ತೀಚೆಗಷ್ಟೇ ತನ್ನ 38 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರುವ ನಟಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಾಕಿಸ್ತಾನಿ ಉದ್ಯಮಿ ಸಲೀಂ ಕರೀಮ್ ಅವರೊಂದಿಗೆ ವಿವಾಹದ ನಂತರ ಪಾಕಿಸ್ತಾನಿ ನಟಿ ಮಹಿರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿಯಾಗಿದೆ. ನೆಟ್‌ಫ್ಲಿಕ್ಸ್‌ನ ಜೋ ಬಾಚೆಯ್ ಸಂಗ್ ಸಮಿತ್ ಲೋ ಮತ್ತು ಇನ್ನೂ ಹೆಸರಿಡದ ಮತ್ತೊಂದು ಚಿತ್ರದಿಂದ ಮಹಿರಾ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ಮಹಿರಾ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ತನ್ನ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಪಾಕಿಸ್ತಾನ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಆಗಿರುವ ಮಹಿರಾ ಖಾನ್ ದೊಡ್ಡ ಚಿತ್ರದ ಜೊತೆಗೆ ಗೌರವಾನ್ವಿತ ನೆಟ್‌ಫ್ಲಿಕ್ಸ್ ಪ್ರಾಜೆಕ್ಟ್‌ನಿಂದ ಹೊರಗುಳಿದ್ದಾರೆ ಎಂದು ಸುದ್ದಿಯಾಗಿದೆ.
ಮಹಿರಾ ಖಾನ್ ತಮ್ಮ ಬಹುಕಾಲದ ಆಪ್ತ ಸ್ನೇಹಿತ ಮತ್ತು ಉದ್ಯಮಿ ಸಲೀಂ ಕರೀಮ್ ಅವರನ್ನು ಕಳೆದ ಅಕ್ಟೋಬರ್ 1 ರಂದು ಪಾಕಿಸ್ತಾನದ ಪಂಜಾಬ್‌ನಲ್ಲಿ ವಿವಾಹವಾದರು. ಇದಕ್ಕೂ ಮೊದಲು 2007 ರಲ್ಲಿ ಅವರು ಅಲಿ ಅಸ್ಕರಿ ಅವರನ್ನು ವಿವಾಹವಾಗಿದ್ದರು. ಆದರೆ 2015 ರಲ್ಲಿ ಇಬ್ಬರೂ ಬೇರೆಯಾದರು. ಮಹಿರಾ ಮತ್ತು ಅಲಿ 13 ವರ್ಷದ ಅಜ್ಲಾನ್ ಎಂಬ ಮಗನನ್ನು ಹೊಂದಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ತನ್ನ ಮೊದಲ ಪತಿ ಅಲಿ ಅಕ್ಸಾರಿಯನ್ನು ಭೇಟಿಯಾಗಿದ್ದ ನಟಿ ಕುಟುಂಬದ ಇಚ್ಚೆಗೆ ವಿರುದ್ಧವಾಗಿ 23ನೇ ವಯಸ್ಸಿಗೆ ಮದುವೆಯಾದರು. ಆ ಮದುವೆ ಎರಡೇ ವರ್ಷಕ್ಕೆ ಮುರಿದುಬಿತ್ತು. ಹೀಗಾಗಿ 25 ನೇ ವರ್ಷಕ್ಕೆ ವಿಚ್ಚೇದನ ಪಡೆದರು. ವಿಚ್ಛೇದನ ಪಡೆದು ಪರಸ್ಪರ ಒಪ್ಪಿಗೆ ಮೇರೆಗೆ ಮಹಿರಾ ಖಾನ್ ಅವರ ಮಗನನ್ನು ತನ್ನ ಪಾಲನೆಗೆ ಪಡೆದರು.
ಆದರೆ ಈ ಎಲ್ಲಾ ಸುದ್ದಿಗಳಿಗೆ ಮಹಿರಾ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಗರ್ಭಿಣಿಯಾಗಿರುವುದು ನಿಜವಲ್ಲ. ಮತ್ತು ನಾನು ನೆಟ್‌ಫ್ಲಿಕ್ಸ್ ಸರಣಿಯನ್ನು ತೊರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.