ನಟಿ ಲಾರಾದತ್ತಾರ ಲಕ್ಷುರಿಯಸ್‌ ಮನೆಯ ಫೋಟೋ ವೈರಲ್‌!

First Published Feb 28, 2021, 5:25 PM IST

ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಲಾರಾ ದತ್ತಾ ಈ ದಿನಗಳಲ್ಲಿ ಸಿನಿಮಾಗಳ ಜೊತೆ ವೆಬ್‌ ಸೀರಿಸ್‌ನಲ್ಲೂ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಮೇ 21ರಂದು ಇವರು ನಟಿಸಿರುವ ಬೆಲ್‌ ಬಾಟಂ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ  ಅಕ್ಷಯ್‌ಕುಮಾರ್‌, ವಾಣಿ ಕಪೂರ್‌, ಹುಮಾ ಖುರೇಶಿ ಸಹ ನಟಿಸಿದ್ದಾರೆ. ಲಾರಾ ಹಾಗೂ ಟೆನ್ನಿಸ್‌ ಆಟಗಾರ ಮಹೇಶ್‌ ಭೂಪತಿ ದಂಪತಿ ಗೋವಾ ಮತ್ತು ಮುಂಬೈಯಲ್ಲಿ ಮನೆ ಹೊಂದಿದ್ದಾರೆ. ಈ ನಡುವೆ ಲಾರಾರ ಮುಂಬೈಯ ಮನೆಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಕಪಲ್‌ನ ಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.