ಗುಲಾಬಿ ಸೀರೆಯುಟ್ಟ 'ಕೃತಿ' ಆಕೃತಿ ನೋಡೋದೆ ಲಕ್, ಹೊಸ ಅವತಾರದಲ್ಲಿ 'ಉಪ್ಪೇನಾ' ನಟಿ
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಕರಾವಳಿ ಚೆಲುವೆ ಕೃತಿ ಮುದ್ದಾದ ಫೋಟೋಗಳ ಮೂಲಕ ಅಭಿಮಾನಿಗಳ ಗಮನಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಈ ಚೆಲುವೆ ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
ಮಂಗಳೂರಿನ ಪ್ರತಿಭೆ ಕೃತಿ ಶೆಟ್ಟಿ ಟಾಲಿವುಡ್ನಲ್ಲಿ ಮಿಂಚುತ್ತಿರುವ ಚೆಲುವೆ. ಇವರು ಅನೇಕ ಸಿನಿಮಾಗಳನ್ನು ಮಾಡಿದ್ದರೂ ಕೂಡ, ಅಷ್ಟೊಂದು ಹಿಟ್ ಪಡೆದುಕೊಂಡಿಲ್ಲ. ಆದರೆ ಈ ಬೆಡಗಿ ತಮ್ಮ ಸೌಂದರ್ಯದಿಂದಲೇ ಪ್ರತಿ ಬಾರಿಯೂ ಸದ್ದು ಮಾಡುತ್ತಾರೆ.
ಸಿನಿಮಾಗಿಂತ ಹೆಚ್ಚು ಫೋಟೋಶೂಟ್ನಲ್ಲೇ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಮಸ್ತ್ ಮಸ್ತ್ ಸೂಪರ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಟ್ರೆಡಿಷನಲ್ ಜೊತೆಗೆ ಮಾಡರ್ನ್ ಲುಕ್ನಲ್ಲಿ ನೋಡುಗರನ್ನು ಆಕರ್ಷಿಸುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಚೆಲುವೆ ಮುದ್ದಾದ ಫೋಟೋಗಳ ಮೂಲಕ ಅಭಿಮಾನಿಗಳ ಗಮನಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಈ ಚೆಲುವೆ ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
ಪಿಂಕ್ ಬಣ್ಣದ, ಸಿಲ್ವರ್ ಝರಿಯ ಸೀರೆ ಉಟ್ಟ ಕೃತಿ ಶೆಟ್ಟಿ ಸಖತ್ತಾಗಿ ಕಾಣಿಸಿಕೊಂಡಿದ್ದು, ಸಾಂಪ್ರದಾಯಿಕ ಶೈಲಿಯಲ್ಲಿ ಹೇರ್ಸ್ಟೈಲ್ ಕೂಡಾ ಮಾಡಿಕೊಂಡಿದ್ದರು. ಅಲ್ಲದೇ ಜ್ಯುವೆಲ್ಲರಿ ಧರಿಸಿದ್ದರು.
ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದ ಕೃತಿ ಶೆಟ್ಟಿ ಕೈಯಲ್ಲಿ ಸಿಂಗಲ್ ಬಳೆ, ದೊಡ್ಡ ಗಾತ್ರದ ಝುಮುಕಿ ಧರಿಸಿದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ನೋಡಿ ಯುವಕರು ಫಿದಾ ಆಗಿದ್ದಾರೆ.
ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸಖತ್ ಹಿಟ್ ಆಗಿತ್ತು. ನಾಯಕಿಯಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಕೃತಿ ಸಿನಿ ಪ್ರೇಕ್ಷಕರ ಮನಗೆದ್ದರು.
ಉಪ್ಪೇನಾ ನಂತರ ನಾನಿ ಜತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಜೊತೆ ‘ಬಂಗಾರರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು.
ಇತ್ತೀಚಿಗೆ ಕೃತಿ ನಟಿಸಿದ ಸಾಲು ಸಾಲು ಚಿತ್ರಗಳ ಫ್ಲಾಪ್ ಆಗಿದ್ದಲ್ಲದೇ ಅವರಿಗೆ ಬರುತ್ತಿದ್ದ ಆಫರ್‌ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ‘ಕಸ್ಟಡಿ’ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.