- Home
- Entertainment
- Cine World
- ಬೇರೆ ಬೇರೆಯಾಗಿ 33 ವರ್ಷಗಳ ಬಳಿಕ ಒಂದಾದ ಕರೀನಾ ಕಪೂರ್ ತಂದೆ-ತಾಯಿ! ಈ ನಿರ್ಧಾರಕ್ಕೆ ಕಾರಣ ಏನು?
ಬೇರೆ ಬೇರೆಯಾಗಿ 33 ವರ್ಷಗಳ ಬಳಿಕ ಒಂದಾದ ಕರೀನಾ ಕಪೂರ್ ತಂದೆ-ತಾಯಿ! ಈ ನಿರ್ಧಾರಕ್ಕೆ ಕಾರಣ ಏನು?
ಬಾಲಿವುಡ್ ನಟಿ ಕರೀನಾ ಕಪೂರ್ ಅವರ ತಂದೆ ರಣಧೀರ್ ಕಪೂರ್, ತಾಯಿ ಬಬಿತಾ ಅವರು ಈಗ ಒಂದಾಗಿದ್ದಾರೆ. ಸಾಕಷ್ಟು ವರ್ಷಗಳ ಕಾಲ ದೂರವಿದ್ದ ಈ ಜೋಡಿ ಈಗ ಒಂದಾಗಿದೆ.

ಒಟ್ಟಿಗೆ ಬದುಕಲು ಆಗೋದಿಲ್ಲ ಎಂದು ಡಿವೋರ್ಸ್ ಆದವರು ಕೂಡ ಆಮೇಲೆ ಒಂದಾದ ಉದಾಹರಣೆ ಇದೆ. ನಟಿ ಕರೀನಾ ಕಪೂರ್ ಅವರ ತಂದೆ ರಣಧೀರ್ ಕಪೂರ್, ತಾಯಿ ಬಬಿತಾ ಅವರು ಡಿವೋರ್ಸ್ ತಗೊಳ್ಳದಿದ್ದರೂ ಕೂಡ ದಶಕಗಳ ಕಾಲ ಬೇರೆ ಬೇರೆಯಾಗಿ ಬದುಕಿದ್ದರು. ಈಗ ವೃದ್ಧಾಪ್ಯದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ.
ಅಪ್ಪ-ಅಮ್ಮ ಈಗ ಒಂದಾಗಿರೋದು ನೋಡಿ ಕರೀನಾ ಕಪೂರ್, ಕರೀಷ್ಮಾ ಕಪೂರ್ ಅವರು ಒಂದು ಮಹತ್ವದ ಕೌಟುಂಬಿಕ ಕ್ಷಣ ಎಂದು ಹೇಳಿದ್ದಾರೆ. ತಂದೆ-ತಾಯಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರೂ ಕೂಡ ಎಂದೂ ಡಿವೋರ್ಸ್ ಪಡೆದಿರಲಿಲ್ಲ, ಪರಸ್ಪರ ಗೌರವವನ್ನು ಕಾಪಾಡಿಕೊಂಡಿದ್ದರು ಎಂದು ಕರೀನಾ ಕಪೂರ್ ಹೇಳಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ, ಕರೀನಾ ಕಪೂರ್ ಅವರು "ಪ್ರತಿಯೊಬ್ಬರ ತಂದೆ-ತಾಯಿಯೂ ವಿಶ್ವದ ಶ್ರೇಷ್ಠ ತಂದೆ-ತಾಯಿ ಆಗಿರುತ್ತಾರೆ. ನನ್ನ ತಂದೆ-ತಾಯಿಯೂ ವಿಶ್ವದ ಶ್ರೇಷ್ಠ ಪಾಲಕರು. ಈಗ, ನನ್ನ ಪಾಲಕರು ಒಟ್ಟಾಗಿ ಬದುಕಲು ನಿರ್ಧರಿಸಿದ್ದಾರೆ. ಈಗ ಅವರ ಜರ್ನಿ ಶುರುವಾಗಿದೆ" ಎಂದು ಅವರು ಹೇಳಿದರು.
"ಇದು ಕರಿಷ್ಮಾ ಮತ್ತು ನನಗೆ ಒಂದು ಕಂಪ್ಲೀಟ್ ರೌಂಡ್ ಆಂಗಲ್ ಥರ ಭಾಸವಾಗಿದೆ. ಇದು ಒಂದು ರೀತಿಯ ದೇವರ ನಿರ್ಧಾರ ಎನಿಸುತ್ತಿದೆ. ನಾನು ಜೀವನದಲ್ಲಿ ಏನು ಮಾಡಲು ಬಯಸಿದರೂ ಕೂಡ, ನನ್ನ ತಂದೆ ಅದಕ್ಕೆ ಯಾವಾಗಲೂ ಬೆಂಬಲ ನೀಡಿದ್ದಾರೆ. ನಮ್ಮ ವೃತ್ತಿ ಜೀವನದ ಯಶಸ್ಸಿಗೆ ಅವರ ಪಾಲು ತುಂಬ ಇದೆ. ಕರಿಷ್ಮಾ ಚಿತ್ರರಂಗಕ್ಕೆ ಬಂದಾಗ, ಕಪೂರ್ ಕುಟುಂಬದಿಂದ ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಹುಡುಗಿ ಆಗಿದ್ದಳು. ಇದಕ್ಕೆ ತಾಯಿ ಬೆಂಬಲ ಇತ್ತು" ಎಂದಿದ್ದಾರೆ.
‘ಕಲ್ ಆಜ್ ಔರ್ ಕಲ್’ ಸಿನಿಮಾದಲ್ಲಿ ನಟಿಸುವಾಗ ರಣಧೀರ್ ಕಪೂರ್, ಬಬಿತಾ ಪರಿಚಯವಾಯಿತು. ಫ್ರೆಂಡ್ಸ್ ಆಗಿದ್ದ ಇವರಿಗೆ ಪ್ರೀತಿ ಹುಟ್ಟಿ ಮದುವೆ ಆಯ್ತು. ಆಮೇಲೆ ಬಬಿತಾ ನಟನೆಯಿಂದ ದೂರವಾದರು. 1988 ರಲ್ಲಿ, ಬಬಿತಾ ರಣಧೀರ್ ದೂರ ಆದರು. ಇಬ್ಬರು ಹೆಣ್ಣು ಮಕ್ಕಳ ಜೊತೆ ಬಬಿತಾ ಬೇರೆ ಮನೆಯಲ್ಲಿ ಬದುಕಲು ಆರಂಭಿಸಿದರು. ಆದರೆ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.