- Home
- Entertainment
- Cine World
- ಖ್ಯಾತ ನಿರ್ದೇಶಕನೊಂದಿಗೆ 2ನೇ ಮದುವೆಯಾಗಲು ಒಪ್ಪದಿದ್ದಕ್ಕೆ ಸಿನಿಮಾ ನಟನೆ ನಿಲ್ಲಿಸಿದ ಸ್ಟಾರ್ ನಟಿ!
ಖ್ಯಾತ ನಿರ್ದೇಶಕನೊಂದಿಗೆ 2ನೇ ಮದುವೆಯಾಗಲು ಒಪ್ಪದಿದ್ದಕ್ಕೆ ಸಿನಿಮಾ ನಟನೆ ನಿಲ್ಲಿಸಿದ ಸ್ಟಾರ್ ನಟಿ!
ದಕ್ಷಿಣ ಭಾರತದ ಖ್ಯಾತ ನಟಿಗೆ ಸಿನಿಮಾ ಜೀವನವನ್ನು ಕಟ್ಟಿಕೊಟ್ಟ ನಿರ್ದೇಶಕನ ಮದುವೆಯನ್ನು ತಿರಸ್ಕಾರ ಮಾಡಿದರು. ಇದಾದ ಬಳಿಕ ನಟಿಯ ಸಿನಿಮಾ ಜೀವನವೇ ನಿಂತು ಹೋಯಿತು. ಯಾರೀ ನಟಿ, ಅಂದು ನಡೆದಿದ್ದಾರೂ ಏನು ಎಂದು ಇಲ್ಲಿ ತಿಳಿದುಕೊಳ್ಳೋಣ.

'ಸೀತಾರ' ಸಿನಿಮಾದ ಮೂಲಕ ಪಾದಾರ್ಪಣೆ
ದಕ್ಷಿಣ ಭಾರತದಲ್ಲಿ ಭಾನುಪ್ರಿಯಾ ಕ್ಲಾಸಿಕಲ್ ಸಿನಿಮಾಗಳಿಂದ ಹೆಚ್ಚು ಜನಪ್ರಿಯರಾದ ನಟಿ. ಒಂದು ಕಾಲದಲ್ಲಿ ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡು ಮನಸೆಳೆದಿದ್ದಾರೆ.
ತಮಿಳಿನಲ್ಲಿ ನಾಯಕಿಯಾಗಿ ಪರಿಚಿತರಾದ ಭಾನುಪ್ರಿಯಾ ಅವರನ್ನು 'ಸೀತಾರ' ಚಿತ್ರಕ್ಕಾಗಿ ತೆಲುಗಿಗೆ ಕರೆತಂದವರು ನಿರ್ದೇಶಕ ವಂಶಿ. ಭಾನುಪ್ರಿಯಾ ಅವರನ್ನು ನೋಡಿ ಅನೇಕರು ತಿರಸ್ಕರಿಸಿದರೂ, ಅವರನ್ನು ನಂಬಿದವರು ಹಾಗೂ ಸಿನಿ ಜೀವನವನ್ನು ಕಟ್ಟಿಕೊಟ್ಟವರು ನಿರ್ದೇಶಕ ವಂಶಿ ಮಾತ್ರ.
`ಸೀತಾರ' ಚಿತ್ರದಿಂದ ಸ್ಟಾರ್ ಆದ ಭಾನುಪ್ರಿಯಾ
ತೆಲುಗು ಚಿತ್ರರಂಗದಲ್ಲಿ ತನ್ನ ಮೊದಲ ಚಿತ್ರ 'ಸೀತಾರ'ದಿಂದಲೇ ಭಾನುಪ್ರಿಯಾ ಗಮನ ಸೆಳೆದರು. ಅದೇ ಸಮಯದಲ್ಲಿ ತನ್ನ ಅದ್ಭುತ ನಟನೆಯಿಂದ ಮನಸೆಳೆದರು. ಮೊದಲ ಚಿತ್ರದಿಂದಲೇ ತೆಲುಗಿನಲ್ಲಿ ಸ್ಟಾರ್ ನಟಿಯಾದರು. ‘ಅನ್ವೇಷಣ’, ‘ವಿಜೇತ’, ‘ದೊಂಗಮೊಗುಡು’ ಸೇರಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಭಾನುಪ್ರಿಯಾ ಜೊತೆ 2ನೇ ಮದುವೆಗೆ ನಿರ್ದೇಶಕ ವಂಶಿ ಸಿದ್ಧ
ನಿರ್ದೇಶಕ ವಂಶಿ ಅವರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ಭಾನುಪ್ರಿಯಾ ಅವರನ್ನು 2ನೇ ಮದುವೆಗೆ ಸಿದ್ಧರಾಗಿದ್ದರು. ತಮ್ಮ ಉದ್ದೇಶವನ್ನು ನಟಿ ಭಾನುಪ್ರಿಯಾ ಕುಟುಂಬದ ಹಿರಿಯರ ಜೊತೆಗೂ ಮಾತನಾಡಿದರು. ಆದರೆ ಭಾನುಪ್ರಿಯಾ ಅವರ ಪೋಷಕರು 2ನೇ ಮದುವೆಗೆ ಒಪ್ಪಲಿಲ್ಲ.
ಭಾನುಪ್ರಿಯಾ ಅವರಿಗೆ ಜೀವನ ನೀಡಿದ ನಿರ್ದೇಶಕ ವಂಶಿ
ತೆಲುಗಿನಲ್ಲಿ ಭಾನುಪ್ರಿಯಾ ಅವರಿಗೆ ಜೀವನ ನೀಡಿದ್ದು ನಿರ್ದೇಶಕ ವಂಶಿ. ಅವರನ್ನು ತೆಲುಗಿಗೆ ಪರಿಚಯಿಸುವುದಲ್ಲದೆ, ಅವರಿಗೆ ಅಗತ್ಯವಿರುವಾಗ ವೃತ್ತಿಪರವಾಗಿ ಬೆಂಬಲ ನೀಡಿದರು. ಇದೇ ಕಾರಣಕ್ಕಾಗಿ ಇಬ್ಬರ ನಡುವೆ ತೀರಾ ಸಲುಗೆ ಬೆಳೆದಿದ್ದು, ವಂಶಿ ಅವರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ, ಭಾನುಪ್ರಿಯಾ ಅವರನ್ನು ಎರಡನೇ ಮದುವೆಗೆ ಸಿದ್ಧರಾಗಿದ್ದರು.
ವಂಶಿ ಜೊತೆ ಮದುವೆಗೆ ಒಪ್ಪದ ಭಾನುಪ್ರಿಯಾ ತಾಯಿ
'ವಂಶಿಗೆ ಈಗಾಗಲೇ ಮದುವೆಯಾಗಿ, ಮಕ್ಕಳಿದ್ದಾರೆ. ಅಂಥವರನ್ನು ಮದುವೆಯಾಗುವುದೇನು? ಎಂದು ಭಾನುಪ್ರಿಯಾ ತಾಯಿ ಬೈದರಂತೆ.
ಅವರು ಈ ಮದುವೆಯನ್ನು ಬಲವಾಗಿ ವಿರೋಧಿಸಿದ್ದರಿಂದ ಭಾನುಪ್ರಿಯಾ ಮತ್ತು ವಂಶಿ ಹಿಂದೆ ಸರಿಯಬೇಕಾಯಿತು. ಈ ವಿಚಾರವನ್ನು ಸ್ವತಃ ನಟಿ ಭಾನುಪ್ರಿಯಾ ಅವರೇ ಐಡ್ರೀಮ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಭಾನುಪ್ರಿಯಾ ಈ ವಿಷಯ ತಿಳಿಸಿದ್ದಾರೆ.
ಸಿನಿಮಾಕ್ಕೆ ಸಂಬಂಧವಿಲ್ಲದ ವ್ಯಕ್ತಿಯೊಂದಿಗೆ ಮದುವೆ
ನಂತರ 1998 ರಲ್ಲಿ ಭಾನುಪ್ರಿಯಾ ಡಿಜಿಟಲ್ ಗ್ರಾಫಿಕ್ ಇಂಜಿನಿಯರ್ ಆದರ್ಶ್ ಕೌಶಲ್ ಅವರನ್ನು ವಿವಾಹವಾದರು. ಕ್ಯಾಲಿಫೋರ್ನಿಯಾದಲ್ಲಿ ಅವರ ಮದುವೆ ನಡೆಯಿತು. ಇದಾದ ನಂತರ ಸಿನಿಮಾ ಜೀವನದಿಂದಲೇ ಅವರು ದೂರ ಉಳಿದುಬಿಟ್ಟರು. ಭಾನುಪ್ರಿಯಾ ಮತ್ತು ಆದರ್ಶ್ ಅವರ ಸಂಸಾರಕ್ಕೆ ಸಾಕ್ಷಿಯಾಗಿ ಅಭಿನಯ ಎಂಬ ಮಗಳು ಇದ್ದಾಳೆ. ಭಾನುಪ್ರಿಯಾ ಅವರ ಪತಿ ಆದರ್ಶ್ 2018 ರಲ್ಲಿ ಹೃದಯಾಘಾತದಿಂದ ನಿಧನರಾದರು. ಇದಾದ ನಂತರ ಇತ್ತೀಚೆಗೆ ಸಂದರ್ಶನ ಸೇರಿದಂತೆ ಇತರೆಡೆ ಭಾನುಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

