ಟಿಲ್ಲು ಸ್ಕ್ವೇರ್ ಸಿನಿಮಾದ ಲಿಪ್‌ಲಾಕ್ ದೃಶ್ಯವನ್ನು ಬಿರಿಯಾನಿಗೆ ಹೋಲಿಸಿದ ಅನುಪಮಾ ಪರಮೇಶ್ವರನ್
ಸೌತ್ ಇಂಡಿಯಾದ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲೆಯಾಳಿ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಕಿಸ್ಸಿಂಗ್, ಲಿಪ್‌ಲಾಕ್ ಹಾಗೂ ವಯಸ್ಕರ ಪೋಲಿ ಡೈಲಾಗ್‌ಗಳನ್ನು ಹೇಳಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಬಿರಿಯಾನಿ ಪ್ರತಿದಿನ ತಿನ್ನೋಕಾಗಲ್ಲ, ಈಗ ಚಾನ್ಸ್ ಸಿಕ್ಕಿತು ತಿಂದಿದ್ದೇನೆ ಎಂದು ಹೇಳಿ ಸಂಪ್ರದಾಯಸ್ಥ ಅಭಿಮಾನಿಗಳ ಎದೆಗೆ ಕೊಳ್ಳಿ ಇಟ್ಟಿದ್ದಾರೆ.
ದಕ್ಷಿಣ ಭಾರತದಲ್ಲಿ ವಯಸ್ಕರನ್ನು ನಿದ್ದೆಗಡಿಸುತ್ತಿರುವ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ತುಂಬಾ ಹಾಟ್ ಅಂಡ್ ಸೆಕ್ಸಿಯಾಗಿ ನಟಿಸಿದ್ದಾರೆ. ಜೊತೆಗೆ, ಈ ಚಿತ್ರದ ನಾಯಕ ಸಿದ್ದು ಅವರೊಂದಿಗೆ ಲಿಪ್ ಲಾಕ್ ಕೂಡ ಮಾಡಿದ್ದಾರೆ.
ಮೂಲತಃ ಮಲೆಯಾಳಂ ನಟಿಯಾಗಿರುವ ಅನುಪಮಾ ತೆಲುಗು ಚಿತ್ರಗಳಲ್ಲಿ ಭಾರಿ ಯಶಸ್ಸು ಕಾಣುತ್ತಿದ್ದಾರೆ. ಜೊತೆಗೆ, ದಕ್ಷಿಣ ಭಾರತದ ಕನ್ನಡ, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿಯೂ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ.
ನಟಿ ಅನುಪಮಾ ಪರಮೆಶ್ವರನ್ ನಟಿಸಿದ ಟಿಲ್ಲು ಸ್ಕ್ವೇರ್ ಸಿನಿಮಾ ಇದೇ ಮಾ.29ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ನಟ ಸಿದ್ದು ಜೊನ್ನಲಗುಡ್ಡ ಅವರೊಂದಿಗೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ನಟಿಸಿದ್ದಾರೆ.
ಕೇವಲ ಸಾಂಪ್ರದಾಯಿಕ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ಈಗ ಏಕಾಏಕಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದಕ್ಕೆ ಭಾರಿ ಚರ್ಚೆ ಆಗುತ್ತಿದೆ. ಆದರೆ, ಎಲ್ಲ ಚರ್ಚೆಗೂ ನಟಿ ಕೂಲ್ ಆಗಿಯೇ ಉತ್ತರಿಸಿದ್ದಾರೆ.
ನಾವು ರೆಗುಲರ್ ಆಗಿ ಹಾಕುವ ಸಾಮಾನ್ಯ ಬಟ್ಟೆಗಳ ತರಹ ಕೆಲವು ರೆಗ್ಯೂಲರ್ ಪಾತ್ರಗಳಿರುತ್ತವೆ. ಅವು ಎಂದಿಗೂ ನನಗೆ ಕಂಪರ್ಟಬಲ್ ಆಗಿರುತ್ತವೆ. ಆದರೆ, ನಮಗೂ ಆಗಾಗ ಬೇರೆ ತರಹದ ಬಟ್ಟೆ ಧರಿಸುವ ಆಸೆ ಇರುತ್ತದೆ ಅಲ್ಲವೇ? ಅದೇ ರೀತಿ ಈ ಟಿಲ್ಲು ಸ್ಕ್ವೇರ್ ಸಿನಿಮಾದಲ್ಲೂ ವಿಭಿನ್ನ ಪಾತ್ರ ಮಾಡಿದ್ದೇನೆ ಎಂದು ಹೇಳಿದರು.
ನನಗೂ ಕೂಡ 28 ವರ್ಷವಾಗಿದೆ. ಸಿನಿಮಾಗೆ ಬಂದು ಹಲವು ವರ್ಷಗಳಾದರೂ ಒಂದೇ ತರಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಹೀಗಾಗಿ, ವಿಭಿನ್ನ ಪಾತ್ರ ಹುಡುಕುತ್ತಿದ್ದೆನು.
ಟಿಲ್ಲು ಸ್ಕ್ವೇರ್ ಸಿನಿಮಾದ ಪಾತ್ರವನ್ನು ತಿರಸ್ಕರಿಸಿದ್ದರೆ ನಾನು ಮೂರ್ಖಳಾಗುತ್ತಿದ್ದೆನು. ಕಮರ್ಷಿಯಲ್ ಸಿನಿಮಾದಲ್ಲಿ ನಾಯಕಿಗೆ ಒಳ್ಳೆಯ ಪಾತ್ರ ಸಿಗುವುದು ತುಂಬಾ ಕಷ್ಟವಾಗುತ್ತಿತ್ತು.
ಯಾರಿಗಾದರೂ ಒಂದೇ ತರಹದ ಪಾತ್ರಗಳನ್ನು ಪದೆ ಪದೇ ಮಾಡಿದರೆ ಬೋರ್ ಆಗುತ್ತದೆ ಎಲ್ಲವೇ? ಅದೇ ರೀತಿ ನನಗೆ ಬೋರ್ ಆಗಿದ್ದರಿಂದ ಇಂತಹ ಬೋಲ್ಡ್ ಪಾತ್ರಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಆದರೂ, ನನಗಿರುವ ಮಿತಿಗಳಲ್ಲಿಯೇ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ, ಕಥೆ ಕೇಳಿದ ನನಗೆ ಈ ಪಾತ್ರ ಬಿಡಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆಹಾರ ಪ್ರಿಯರಾದ ನಮಗೆ ಬಿರಿಯಾನಿ ಇಷ್ಟವಿರುತ್ತದೆ. ಹಾಗಂತ ಪ್ರತಿದಿನ ಬಿರಿಯಾನಿ ತಿನ್ನೋಕೆ ಆಗುವುದಿಲ್ಲ. ಬೇರೆ ಬೇರೆ ಅಡುಗೆ ಮಾಡಿಕೊಂಡು ತಿನ್ನಬೇಕು. ಜೊತೆಗೆ, ಬೇರೆ ತರಹದ ಅಡುಗೆಗಳನ್ನೂ ಟ್ರೈ ಮಾಡಿದಾಗಲೇ ನಮಗೆ ಅದರ ರುಚಿ ಗೊತ್ತಾಗುತ್ತದೆ. ನನಗೂ ಟಿಲ್ಲು ಸ್ಕ್ವೇರ್ ಸಿನಿಮಾದ ಪಾತ್ರ ಕೂಡ ಅದೇ ರೀತಿ ಎಂದು ತಿಳಿಸಿದ್ದಾರೆ.