ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡ 'ಹೆಬ್ಬುಲಿ' ನಟಿ ಅಮಲಾ ಪೌಲ್
ಮಲಯಾಳಂ ನಟಿ ಮತ್ತು ಸ್ಟಾರ್ ಹೀರೋಯಿನ್ ಅಮಲಾ ಪಾಲ್ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡಿದ್ದಾರೆ. ಕೆಂಪು ಮತ್ತು ಬಿಳಿ ಬಣ್ಣದ ಸೀರೆಯುಟ್ಟು ಗಂಡನ ಜೊತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಫೋಟೋಸ್ ಇಲ್ಲಿವೆ.

ಮಲಯಾಳಂ ನಟಿ ಮತ್ತು ಸ್ಟಾರ್ ಹೀರೋಯಿನ್ ಅಮಲಾ ಪಾಲ್ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡಿದ್ದಾರೆ. ಕೆಂಪು ಮತ್ತು ಬಿಳಿ ಬಣದಣದ ಸೀರೆಯುಟ್ಟು ಗಂಡನ ಜೊತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಜಗತ್ ದೇಸಾಯಿ ಸಿಂಪಲ್ ಕುರ್ತಾ ಧರಿಸಿದ್ದಾರೆ.
ಅಮಲಾ ಪೌಲ್ ಇನ್‌ಸ್ಟಾಗ್ರಾಂನಲ್ಲಿ ಸಮಾರಂಭದ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸೂಪರ್ ಪ್ರೆಟ್ಟೀ ಮಾಮ್ ಟು ಬಿ, ವೈಟಿಂಗ್ ಫಾರ್ ದಿ ಲಿಟಲ್ ಒನ್ ಎಂದೆಲ್ಲಾ ಹೇಳಿದ್ದಾರೆ.
ಕಳೆದ ವರ್ಷ ಎರಡನೇ ಮದುವೆಯಾಗಿರುವುದಾಗಿ ಅಮಲಾಪಾಲ್ ಘೋಷಿಸಿದ್ದು ಗೊತ್ತೇ ಇದೆ. ತನ್ನ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರನ್ನು ನವೆಂಬರ್ 5 ರಂದು ವಿವಾಹವಾದರು.
ಕೆಲವು ದಿನಗಳ ಹಿಂದೆ ಆಕೆ ತಾನು ಗರ್ಭಿಣಿಯಾಗಿರುವುದನ್ನು ಘೋಷಿಸಿದರು. ಆ ನಂತರ ಹಲವು ಬಾರಿ ತಮ್ಮ ಪ್ರೆಗ್ನೆನ್ಸಿಯ ಬೇಬಿ ಬಂಪ್ ನಲ್ಲಿ ಫೋಟೋಶೂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರೆಡ್ ಡ್ರೆಸ್ ನಲ್ಲಿ ಪತಿಯೊಂದಿಗೆ ಬೀಚ್ ನಲ್ಲಿ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿತ್ತು. ಆ ನಂತರ ವೈಟ್ ಡ್ರೆಸ್‌ನಲ್ಲಿಯೂ ಫೋಟೋಶೂಟ್ ಮಾಡಿಕೊಂಡಿದ್ದರು.
ಅಮಲಾ ಪತಿ ಜಗತ್ ದೇಸಾಯಿ ಉದ್ಯಮಿಯಾಗಿದ್ದು, ಗೋವಾದ ಲಕ್ಸುರಿ ವಿಲ್ಲಾದಲ್ಲಿ ಮ್ಯಾನೇಜರ್ ಆಗಿದ್ದಾರೆ. ಗೋವಾದ ರೆಸಾರ್ಟೊಂದರಲ್ಲಿ ನಡೆದ ಈ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಅಮಲಾ ಪೌಲ್‌ಗೆ ಮಂಡಿಯೂರಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು ಜಗತ್ ದೇಸಾಯಿ.
ಇದಕ್ಕೂ ಮೊದಲು ಅಮಲಾ ಪೌಲ್, ನಿರ್ದೇಶಕ ಎ ಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. ಆದರೆ ಮೂರು ವರ್ಷಗಳ ದಾಂಪತ್ಯದ ನಂತರ ಅವರಿಬ್ಬರು ದೂರವಾಗಿದ್ದರು.
ಅಮಲಾಪೌಲ್ ತಮಿಳು, ಮಲೆಯಾಳಂ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಕೊನೆಯದಾಗಿ ಭೊಲಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.