- Home
- Entertainment
- Cine World
- ಒಂದೇ ಸಿನಿಮಾದಲ್ಲಿ 45 ಪಾತ್ರ ಮಾಡಿ ಎಲ್ಲರಿಗೂ ಶಾಕ್ ಕೊಟ್ಟ ನಟ ಯಾರು?: ಕಮಲ್ ಹಾಸನ್‌ಗೂ ಇದು ಸಾಧ್ಯವಾಗ್ಲಿಲ್ವೇ?
ಒಂದೇ ಸಿನಿಮಾದಲ್ಲಿ 45 ಪಾತ್ರ ಮಾಡಿ ಎಲ್ಲರಿಗೂ ಶಾಕ್ ಕೊಟ್ಟ ನಟ ಯಾರು?: ಕಮಲ್ ಹಾಸನ್‌ಗೂ ಇದು ಸಾಧ್ಯವಾಗ್ಲಿಲ್ವೇ?
ಒಂದೇ ಸಿನಿಮಾದಲ್ಲಿ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ಹೀರೋ ಯಾರು ಅಂತ ಕೇಳಿದ್ರೆ, ತಕ್ಷಣಕ್ಕೆ ಕಮಲ್ ಹಾಸನ್ ಹೆಸರು ಹೇಳ್ತಾರೆ. ಆದ್ರೆ ಕಮಲ್ ಅವರಿಗಿಂತ ಜಾಸ್ತಿ ಪಾತ್ರಗಳನ್ನ ಮಾಡಿದ ನಟ ಇನ್ನೊಬ್ಬರು ಇದ್ದಾರೆ ಅಂದ್ರೆ ನಂಬ್ತೀರಾ?

ಒಂದು ಸಿನಿಮಾದಲ್ಲಿ ಒಂದೇ ಪಾತ್ರದಲ್ಲಿ ನಟಿಸೋದು ಅಂದ್ರೇನೆ ತುಂಬಾನೇ ಕಷ್ಟ. ಮೇಕಪ್ ಕಾಪಾಡಿಕೊಳ್ಳಬೇಕು, ದಿನಾ ಪೂರ್ತಿ ಮೇಕಪ್‌ನಲ್ಲಿ ಇರಬೇಕು, ಡೈಲಾಗ್ಸ್, ಆಕ್ಷನ್ ಸೀನ್ಸ್ ಹೀಗೆ ಸಿನಿಮಾ ಮಾಡೋರ ಕಷ್ಟಗಳು ತುಂಬಾನೇ ಇರ್ತವೆ. ಆದ್ರೆ ಅದು ಎಲ್ಲರಿಗೂ ಕಾಣಿಸೋದಿಲ್ಲ. ಒಂದು ಸಿನಿಮಾದಲ್ಲಿ ಒಂದು ಪಾತ್ರ ಮಾಡೋದೇ ಕಷ್ಟ ಹೀರೋಗಳು ಡ್ಯೂಯಲ್ ರೋಲ್ಸ್, ತ್ರಿಪಲ್ ರೋಲ್ಸ್ ಕೂಡ ಮಾಡ್ತಿರ್ತಾರೆ ಆ ಪಾತ್ರಗಳು ಮಾಡೋದಿಕ್ಕೆ ಮೇಕಪ್ ಚೇಂಜ್ ಮಾಡ್ಕೊಳ್ಳೋದು, ಡೈಲಾಗ್ ರೀತಿ ನೀತಿಗಳನ್ನ ಬದಲಾಯಿಸೋದು, ಬೇರೆ ಬೇರೆ ವೇರಿಯೇಷನ್‌ಗಳನ್ನ ತೋರಿಸೋದು ತುಂಬಾನೇ ಕಷ್ಟ.
ಅಷ್ಟು ಕಷ್ಟ ಪಡ್ತಾರೆ ಅದಕ್ಕೆ ಅವ್ರು ಸ್ಟಾರ್ಸ್ ಆಗ್ತಾರೆ. ಆದ್ರೆ ಎಲ್ಲಕ್ಕಿಂತ ಹೆಚ್ಚಾಗಿ ಹೀರೋ ಕಮಲ್ ಹಾಸನ್ ಮಾಡ್ತಾರೆ. ಅವರು ಹತ್ತು ಪಾತ್ರಗಳನ್ನ ಅದ್ಭುತವಾಗಿ ದಶಾವತಾರಂ ಸಿನಿಮಾದಲ್ಲಿ ಮಾಡಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿರೋದರ ಜೊತೆಗೆ. ಆ ಪಾತ್ರಗಳಿಗೋಸ್ಕರ ಅವರು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದನ್ನ ಕೂಡ ತೋರಿಸಿದ್ದಾರೆ.
ಆದ್ರೆ ಒಂದೇ ಸಿನಿಮಾದಲ್ಲಿ ಜಾಸ್ತಿ ಪಾತ್ರಗಳಲ್ಲಿ ನಟಿಸಿದ ಹೀರೋ ಯಾರು ಅಂದ್ರೆ ಕಮಲ್ ಅವರ ಹೆಸರೇ ಮೊದಲು ಇರುತ್ತೆ. ಆದ್ರೆ ನಿಜಾಂಶ ಬೇರೆ ಇದೆ. ಕಮಲ್ ಹಾಸನ್ ಅವರನ್ನ ಮೀರಿ ಒಬ್ಬ ನಟ ಇದ್ದಾರೆ. ಕಮಲ್ ಹತ್ತು ಪಾತ್ರ ಮಾಡಿದ್ರೆ, ಇವರು ಒಂದೇ ಸಿನಿಮಾದಲ್ಲಿ 45 ಪಾತ್ರ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಇಷ್ಟಕ್ಕೂ ಅವರು ಯಾರು ಗೊತ್ತಾ?
ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಎಷ್ಟೋ ಸ್ಟಾರ್ ನಟರು ಇದ್ದಾರೆ. ದೊಡ್ಡ ದೊಡ್ಡ ಪಾತ್ರಗಳನ್ನ ಮಾಡಿದೋರು ಇದ್ದಾರೆ. ಪಾತ್ರಗಳಲ್ಲಿ ಪ್ರಯೋಗ ಮಾಡಿದೋರು ಇದ್ದಾರೆ. ಜಾಸ್ತಿ ಪಾತ್ರಗಳನ್ನ ಮಾಡಿದೋರು ಇದ್ದಾರೆ. ಆದ್ರೆ ಒಂದೇ ಸಿನಿಮಾದಲ್ಲಿ 45 ಪಾತ್ರಗಳನ್ನ ಮಾಡಿದ ನಟನನ್ನ ಏನಂತ ಕರೆಯೋದು ಅಂತಾನೇ ಅರ್ಥ ಆಗ್ತಿಲ್ಲ. ಇಷ್ಟಕ್ಕೂ ಅವರು ಯಾರು ಗೊತ್ತಾ? ಒಂದೇ ಸಿನಿಮಾದಲ್ಲಿ ಜಾಸ್ತಿ ಪಾತ್ರಗಳನ್ನ ಮಾಡಿದ ವ್ಯಕ್ತಿ ಬೇರೆ ಯಾರೂ ಅಲ್ಲ ಅದು ಜಾನ್ಸನ್ ಜಾರ್ಜ್. ಅವರು ಮಲಯಾಳಂ ನಟ. ಒಂದು ಅಲ್ಲ ಎರಡು ಅಲ್ಲ ಬರೋಬ್ಬರಿ 45 ಪಾತ್ರಗಳನ್ನ ಮಾಡಿ ಗಿನ್ನಿಸ್ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.
ನಟ ಜಾನ್ ಜಾರ್ಜ್ 2018ರಲ್ಲಿ ರಿಲೀಸ್ ಆದ ಮಲಯಾಳಂ ಚಿತ್ರ "ಆರನು ಜನ್"ನಲ್ಲಿ 45 ಪಾತ್ರಗಳನ್ನ ಮಾಡಿದ್ದಾರೆ. ಇದರಲ್ಲಿ ಗಾಂಧಿ, ಜೀಸಸ್ ಕ್ರೈಸ್ಟ್, ಡಾವಿನ್ಸಿ, ಹಿಟ್ಲರ್, ವಿವೇಕಾನಂದ ಮುಂತಾದ ಪಾತ್ರಗಳಿವೆ. ಇದು ಆ ವರ್ಷದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಹೀಗೆ ದೇಶದಲ್ಲಿ ಎಷ್ಟೋ ದೊಡ್ಡ ನಟರು ಕೂಡ ಸಾಧಿಸಲಾಗದ ರೆಕಾರ್ಡ್ ಅನ್ನ ಜಾನ್ ಜಾರ್ಜ್ ಸಾಧಿಸಿದ್ದಾರೆ.