ಹೀರೋಗಳಿಗೆ ಬೆವರಿಳಿಸ್ತಿದ್ದ ಏಕೈಕ ವಿಲನ್ ಇವರಂತೆ: ದಿ. ರಘುವರನ್ ಬಗ್ಗೆ ರಜನಿ ಮಾತು
ರಘುವರನ್ ಅವರು ದಕ್ಷಿಣ ಸಿನಿಮಾ ರಂಗದ ಅದ್ಭುತ ನಟ, ವಿಲನ್‌ಗಳಿಗೂ ಸ್ಟೈಲಿಶ್ ಲುಕ್ ನೀಡಿದ ಮೊದಲಿಗ, ಹೀರೋಗಳಂತೆಯೇ ಸ್ಟೈಲಿಶ್ ಆಗಿದ್ದ ರಘುವರನ್ ತಮ್ಮ ನಟನೆಯ ಮೂಲಕ ನೋಡುಗರು ತಮ್ಮ ಮೇಲೆ ದ್ವೇಷ ಉಕ್ಕುವಂತೆ ಮಾಡಿದವರು. ಅವರು ಕನ್ನಡದ ಅಸುರ, ದುರ್ಗಿ, ಕಲಾವಿದ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದಾರೆ. ಅವರು ಈ ಮಹಾನ್ ನಟನ ಬಗ್ಗೆ ಏನು ಹೇಳಿದ್ದಾರೆ ನೀವೆ ಓದಿ.
ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ವೃತ್ತಿಜೀವನದಲ್ಲಿ 170 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಜನೀಕಾಂತ್ ತಮ್ಮ ಪಾತ್ರದಲ್ಲಿದ್ದಾಗ ಅಭಿಮಾನಿಗಳು ಇತರ ಅವರ ಜೊತೆಗಿರುವ ಇತರ ನಟ-ನಟಿಯರನ್ನು ಹೆಚ್ಚು ಗಮನಿಸುವುದಿಲ್ಲ. ರಜನಿಯ ಅಭಿನಯ ಮತ್ತು ಶೈಲಿ ಅಭಿಮಾನಿಗಳನ್ನು ಎಲ್ಲರಿಗಿಂತ ಹೆಚ್ಚು ಆಕರ್ಷಿಸುತ್ತದೆ. ರಜನೀಕಾಂತ್ ಚಿತ್ರಗಳಲ್ಲಿ ಹಲವರು ಖಳನಾಯಕರಾಗಿ ನಟಿಸಿದ್ದಾರೆ.
ಆದರೆ ಈಗ ತಮ್ಮೊಂದಿಗೆ ನಟಿಸಿದ ಖಳನಾಯಕರ ಬಗ್ಗೆ ರಜನೀಕಾಂತ್ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ಹಲವು ದಶಕಗಳಿಂದ ನಟಿಸುತ್ತಿದ್ದೇನೆ. ಹಲವು ಉತ್ತಮ ನಟರು ನನ್ನ ಚಿತ್ರಗಳಲ್ಲಿ ಖಳನಾಯಕರಾಗಿ ನಟಿಸಿದ್ದಾರೆ. ಆದರೆ ನನಗೆ ಸವಾಲೊಡ್ಡಿದ ಖಳನಾಯಕ ಒಬ್ಬರೇ. ಅವರೇ ರಜನಿಕಾಂತ್ ಅವರ ಭಾಷಾ ಚಿತ್ರದಲ್ಲಿ ನಟಿಸಿದ ನಟನಾಗಿರುವ ದಿವಂಗತ ರಘುವರನ್ ಎಂದು ರಜನೀಕಾಂತ್ ಹೇಳಿದ್ದಾರೆ.
ಹಾಗೆಯೇ ಮಹಿಳಾ ನಟಿಯರಲ್ಲಿ ರಮ್ಯಾಕೃಷ್ಣ ಎಂದು ರಜನೀಕಾಂತ್ ಹೇಳಿದ್ದಾರೆ. ರಮ್ಯಾಕೃಷ್ಣ ನರಸಿಂಹ ಚಿತ್ರದಲ್ಲಿ ಖಳನಾಯಕಿಯಾಗಿ ನಟಿಸಿದ್ದರು. ರಜನಿಕಾಂತ್ ಗೆ ಪೈಪೋಟಿಯಾಗಿ ಅದ್ಭುತ ಅಭಿನಯ ನೀಡಿದರು. ಭಾಷಾ ಚಿತ್ರದಲ್ಲಿ ರಘುವರನ್ ಮಾರ್ಕ್ ಆಂಟನಿಯಾಗಿ ಅಬ್ಬರಿಸಿದರು.
ಖಳನಾಯಕ ಎಂದರೆ ಭಯಂಕರವಾಗಿ ಕಾಣಬೇಕು, ಗಟ್ಟಿಯಾಗಿ ಡೈಲಾಗ್ ಹೇಳಬೇಕು ಎಂಬ ಟ್ರೆಂಡ್‌ಗೆ ಬ್ರೇಕ್ ಹಾಕಿದವರು ರಘುವರನ್. ರಘುವರನ್ ನೋಡಲು ಸ್ಟೈಲಿಶ್ ಆಗಿ ಇರುತ್ತಿದ್ದರು. ಗಟ್ಟಿಯಾಗಿ ಡೈಲಾಗ್ ಹೇಳುವುದು ಅವರ ಶೈಲಿಯಾಗಿರಲಿಲ್ಲ. ಸಣ್ಣ ಮಾತುಗಳಿಂದಲೇ ಅಭಿನಯಿಸುತ್ತಿದ್ದರು.
ರಘುವರನ್
ಒಕೇ ಒಕ್ಕಡು ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಅವರು ಸೂಕ್ತ ಆಯ್ಕೆಯಾಗಿದ್ದರು. ಸಂದರ್ಶನ ದೃಶ್ಯದಲ್ಲಿ ರಘುವರನ್ ನಿಜವಾಗಿಯೂ ನಟ ಅರ್ಜುನ್ ಸರ್ಜಾಗೆ ಬೆವರಿಳಿಸಿದ್ದರಂತೆ. ತೆಲುಗಿನಲ್ಲಿ ನಾಗಾರ್ಜುನ ಜೊತೆ ಶಿವ, ಮಾಸ್ ಚಿತ್ರಗಳಲ್ಲಿ ರಘುವರನ್ ನಟಿಸಿದ್ದಾರೆ. ಚಿರಂಜೀವಿ ಜೊತೆ ಪಸಿವಾಡಿ ಪ್ರಾಣಂ ನಂತಹ ಹಿಟ್ ಚಿತ್ರದಲ್ಲಿ ನಟಿಸಿದ್ದಾರೆ.
ತಮ್ಮ ವಿಭಿನ್ನವಾದ ಸ್ಟೈಲ್ ಹಾಗೂ ಧ್ವನಿಯ ಏರಿಳಿತಗಳಿಂದ ತಮ್ಮದೇ ಹವಾ ಸೃಷ್ಟಿಸಿದ್ದ ರಘುವರನ್ ಆ ಕಾಲದಲ್ಲಿ ಬಹುಬೇಡಿಕೆಯ ವಿಲನ್ ಆಗಿದ್ದರು. ಆದರೆ ಕುಡಿತ ಅವರನ್ನು ಸಂಪೂರ್ಣ ಹಾಳು ಮಾಡಿತ್ತು. ಕುಡಿತದ ಕಾರಣದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾದ ಅವರು ಕೇವಲ 49ನೇ ವಯಸ್ಸಿನಲ್ಲಿ 2008ರ ಮಾರ್ಚ್ 19ರಂದು ಇಹಲೋಕ ತ್ಯಜಿಸಿದ್ದರು. 1996ರಲ್ಲಿ ರೋಹಿಣಿ ಎಂಬುವವರ ಜೊತೆ ಮದುವೆಯಾಗಿದ್ದ ರಘುವರನ್ ಅವರಿಗೆ ರಿಷಿವರನ್ ಎಂಬ ಪುತ್ರನಿದ್ದಾನೆ. 2004ರಲ್ಲೇ ರಘುವರನ್ ಹಾಗೂ ರೋಹಿಣೆ ದೂರಾಗಿದ್ದರು.