ವೀಲ್‌ಚೇರ್ ಮೇಲಿರೋ ಮಗನ ಮದ್ವೆ ಮಾಡಿ ಸುದ್ದಿಯಾದ ನೆಪೋಲಿಯನ್ ನೆಟ್ ವರ್ಥ್!
100 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಮಗನ ಮದುವೆ ಮಾಡಿಸಿದ ಸೌತ್ ಸ್ಟಾರ್ ನೆಪೊಲಿಯನ್ ಭಾರಿ ಸುದ್ದಿಯಾಗಿದೆ. ನೆಪೊಲಿಯನ್ ಒಟ್ಟು ಆಸ್ತಿ, ಆದಾಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
ನಟ ನೆಪೋಲಿಯನ್
ನಿರ್ದೇಶಕ ಭಾರತಿರಾಜರಿಂದ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ನಟ ನೆಪೋಲಿಯನ್, ನಾಯಕನಾಗಿ, ಖಳನಾಯಕನಾಗಿಯೂ ಛಾಪು ಮೂಡಿಸಿದರು. ರಜನಿಕಾಂತ್ ಜೊತೆ ನಟಿಸಿದ 'ಎಜಮಾನ್' ಚಿತ್ರ ಅವರ ವೃತ್ತಿಜೀವನದಲ್ಲಿ ತಿರುವು ನೀಡಿತು.
ನೆಪೋಲಿಯನ್ ಮನೆ
ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ ನೆಪೋಲಿಯನ್, ರಾಜಕೀಯಕ್ಕೂ ಕಾಲಿಟ್ಟರು. ವಿಧಾನಸಭಾ ಮತ್ತು ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ ನೆಪೋಲಿಯನ್, ಅಮೆರಿಕದಲ್ಲಿ ನೆಲೆಸಿದ್ದಾರೆ. ರಾಜಕೀಯ, ಸಿನಿಮಾ ಎಲ್ಲವನ್ನೂ ತೊರೆದು ಅಮೆರಿಕದಲ್ಲಿ ಕುಟುಂಬ ಜೊತೆಗಿದ್ದಾರೆ.
ನೆಪೋಲಿಯನ್ ಪುತ್ರ ಧನುಷ್
ಚಿತ್ರರಂಗದ ಹಾಗೂ ರಾಜಕೀಯದ ಉತ್ತುಂಗುದಲ್ಲಿರುವಾಗ ನೆಪೊಲಿಯನ್ ಭಾರತ ಬಿಟ್ಟು ಅಮೆರಿಕದಲ್ಲಿ ನೆಲೆಸಿದರು. ನೆಪೊಲಿಯನ್ ಪುತ್ರ ಧನುಷ್ ತೀವ್ರ ಸ್ನಾಯು ಕ್ಷೀಣತೆ ಸಮಸ್ಯೆಗೆ ತುತ್ತಾದ ಕಾರಣ ಎಲ್ಲವನ್ನು ತೊರೆದು ಮಗನ ಚಿಕಿತ್ಸೆಗಾಗಿ ಅಮೆರಿಕದಲ್ಲಿ ನೆಲೆಸಿದರು.
ನೆಪೋಲಿಯನ್ ಅಮೆರಿಕದ ಮನೆ
ಅಮೆರಿಕದಲ್ಲಿ ಐಟಿ ಕಂಪನಿ ಸ್ಥಾಪಿಸಿ, 10,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಹಲವು ಕಂಪನಿಗಳ ಒಡೆಯನಾಗಿರುವ ನೆಪೋಲಿಯನ್ ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ನೆಪೋಲಿಯನ್ ವ್ಹೀಲ್ ಚೇರ್‌ನಲ್ಲಿರುವ ಪುತ್ರ ಧನುಷ್ ಮದುವೆಯನ್ನು ಜಪಾನ್‌ನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ.
ನೆಪೋಲಿಯನ್ ಕಾರು ಸಂಗ್ರಹ
ಐಟಿ ಕಂಪನಿಯ ಜೊತೆಗೆ, 3000 ಎಕರೆ ಕೃಷಿಭೂಮಿಯನ್ನು ಹೊಂದಿರುವ ನೆಪೋಲಿಯನ್, ಪಶುಸಂಗೋಪನೆ ಮತ್ತು ತರಕಾರಿ ಕೃಷಿ ಮಾಡುತ್ತಿದ್ದಾರೆ. ಅಮೆರಿದಲ್ಲಿ ಕೃಷಿ ಹಾಗೂ ಕಂಪನಿ, ಉದ್ಯಮದ ಮೂಲಕ ಸದಾ ಚಟುವಟಿಕೆಯಿಂದ ಇರುವ ನೆಪೋಲಿಯನ್ ಮಕ್ಕಳು ಹಾಗೂ ಕುಟುಂಬಕ್ಕಾಗಿ ತಮ್ಮ ಸಿನಿಮಾ, ರಾಜಕೀಯರ್ ಕರಿಯರ್ ಬಿಟ್ಟ ಛಲಗಾರ.
ನೆಪೋಲಿಯನ್ ಫಾರ್ಮ್‌ಹೌಸ್
ನೆಪೋಲಿಯನ್ ಅವರ ಅರಮನೆಯಂತಹ ಮನೆಯಲ್ಲಿ ಸಿನಿಮಾ ಥಿಯೇಟರ್, ಈಜುಕೊಳ, ಬ್ಯಾಸ್ಕೆಟ್‌ಬಾಲ್ ಮೈದಾನ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ. ಇನ್ನು ಪುತ್ರ ಧನುಷ್ ವ್ಹೀಲ್ ಚೇರ್‌ನಲ್ಲಿರುವ ಕಾರಣ ಆತನ ಅನುಕೂಲ ಹಾಗೂ ಚಿಕಿತ್ಸೆಗಾಗಿ ಇಡೀ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಕೆಲ ಉದ್ಯಮಗಳನ್ನು ಧನುಷ್ ಹಾಗೂ ಮತ್ತೊರ್ವ ಮಗ ನೋಡಿಕೊಳ್ಳುತ್ತಿದ್ದಾರೆ.
ನೆಪೋಲಿಯನ್ ಆಸ್ತಿ ಮೌಲ್ಯ
ನೆಪೋಲಿಯನ್ ಬಳಿ ಟೆಸ್ಲಾ, ಬೆನ್ಜ್, ಟೊಯೋಟಾ ಸೇರಿದಂತೆ ನಾಲ್ಕು ಐಷಾರಾಮಿ ಕಾರುಗಳಿವೆ. ಕುಟುಂಬದೊಂದಿಗೆ ಪ್ರಯಾಣಿಸಲು ಪ್ರತ್ಯೇಕ ವ್ಯಾನ್ ಕೂಡ ಇದೆ. ಅಮೆರಿಕದಲ್ಲೇ ಅತೀ ದುಬಾರಿ ಕಾರುಗಳು ಹಾಗೂ ಗರಿಷ್ಠ ಸುರಕ್ಷತಾ ಕಾರುಗಳು ನೆಪೋಲಿಯನ್ ಬಳಿ ಇದೆ. ಐಷಾರಾಮಿ ಕಾರು, ಕೋಟಿ ಕೋಟಿ ಆದಾಯಗಳಿದ್ದರೂ ನೆಪೋಲಿಯನ್ ಸರಳತೆ ಹಾಗೇ ಇದೆ.
ನೆಪೋಲಿಯನ್ ಪುತ್ರನ ವಿವಾಹ
ಜಪಾನ್‌ನಲ್ಲಿ ಮಗ ಧನುಷ್‌ನ ವಿವಾಹಕ್ಕೆ 150ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ನೆಪೋಲಿಯನ್ ಅವರ ಆಸ್ತಿ ಮೌಲ್ಯ1000 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರತಿ ದಿನ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಹಲವರಿಗೆ ನೆರವು ನೀಡಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ನೆರವು ನೀಡಿದ್ದಾರೆ.